ಕನಕಪುರ: ರಸ್ತೆ ಬದಿಯ ಜಮೀನಿನಲ್ಲಿ ಮಾದಕ ದ್ರವ್ಯ ಮಾರುತ್ತಿದ್ದ ಮೂವರನ್ನು ನಗರ ಠಾಣೆ ಪೊಲೀಸರು ಬಂಧಿಸಿ, 30 ಸಾವಿರ ರೂ. ಮೌಲ್ಯದ 15 ಗ್ರಾಂ ಡ್ರಗ್ಸ್ಅನ್ನು ವಶಪಡಿಸಿಕೊಂಡಿದ್ದಾರೆ.
ಪಟ್ಟಣದ ಖಾಲಕ್ನಗರ ನಿವಾಸಿಗಳಾದ ಮುಬಾರಕ್(22), ಅಖಿಲ್(21), ಹಸನ್(21) ಬಂಧಿತರು. ನಗರದ ಮಹರಾಜರ ಕಟ್ಟೆ ಬೈಪಾಸ್ ರಸ್ತೆಯ ಜಮೀನಿನಲ್ಲಿ ಆರು ಮಂದಿ ಮಾದಕ ದ್ರವ್ಯ ಮಾರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಡಿವೈಎಸ್ಪಿ ಗಿರಿ, ಸರ್ಕಲ್ ಇನ್ಸ್ಪೆಕ್ಟರ್ ಅನಂತ್ರಾಮ್ ಮತ್ತವರ ಸಿಬ್ಬಂದಿ ಶುಕ್ರವಾರ ದಾಳಿ ನಡೆಸಿದ್ದು, ಮೂವರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಮೂವರು ಪರಾರಿಯಾಗಿದ್ದಾರೆ. ನಗರಠಾಣೆಯಲ್ಲಿ ಪ್ರಕರದ ದಾಖಲಾಗಿದೆ.