ಕನಕಪುರ ಮುಗ್ಗೂರು ಅರಣ್ಯ ಪ್ರದೇಶದ ಆಲ್ಕುಳಿ ಗ್ರಾಮದ ಬಳಿ ಕಾಡು ಪ್ರಾಣಿಗಳ ಬೇಟೆಗೆ ಯತ್ನಿಸಿದ ಆರೋಪಿಗಳನ್ನು ಅರಣ್ಯಾಧಿಕಾರಿಗಳು ನಾಡ ಬಂದೂಕು ಹಾಗೂ ಮದ್ದುಗುಂಡು ಸಮೇತ ವಶಪಡಿಸಿಕೊಂಡಿರುವುದು. ರಾಜೇಂದ್ರಸ್ವಾಮಿ, ಸಿಬ್ಬಂದಿ ಇದ್ದರು. 
ಬೆಂಗಳೂರು ದಕ್ಷಿಣ

ಕಾಡುಪ್ರಾಣಿ ಬೇಟೆಗೆ ಹೊರಟಿದ್ದ ಮೂವರ ಬಂಧನ

ಕನಕಪುರ: ತಾಲೂಕಿನ ಕೋಡಿಹಳ್ಳಿ ಹೋಬಳಿ ಕಾವೇರಿ ವನ್ಯಜಿವಿ ವಿಭಾಗದ ಮುಗ್ಗೂರು ಅರಣ್ಯ ಪ್ರದೇಶದ ಆಲ್ಕುಳಿ ಗ್ರಾಮದ ಬಳಿ ಅಕ್ರಮವಾಗಿ ನಾಡ ಬಂದೂಕು ಬಳಸಿ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಯತ್ನಿಸುತ್ತಿದ್ದ ಮೂವರನ್ನು ನಾಡಬಂದೂಕು ಹಾಗೂ ಮದ್ದುಗುಂಡು ಸಮೇತ
ವಶಕ್ಕೆ ಪಡೆಯಲಾಗಿದ್ದು, ಒಬ್ಬ ಪರಾರಿಯಾಗಿದ್ದಾನೆ.
ಆಲ್ಕುಳಿ ಗ್ರಾಮದ ಶಿವಸ್ವಾಮಿ, ಪ್ರದಿಪ್​ಕುಮಾರ್​ ಹಾಗೂ ಜಗದೀಶ್​ ಬಂಧಿತರು. ಮಹದೇವ ನಾಯ್ಕ ಪರಾರಿಯಾದವ ಎನ್ನಲಾಗಿದೆ. ಶುಕ್ರವಾರ ರಾತ್ರಿ ಮುಗ್ಗೂರು ವಲಯ ಅರಣ್ಯ ಅಧಿಕಾರಿಗಳು ಹಾಗೂ ವನಪಾಲಕರು ಗಸ್ತು ತಿರುಗುವಾಗ ಅನುಮಾನಸ್ಪದವಾಗಿ ನಾಡಬಂದೂಕಿನೊಂದಿಗೆ ಓಡಾಡುತ್ತಿದ್ದ ಇವರನ್ನು ವಿಚಾರಣೆಗೆ ಒಳಪಡಿಸಿದಾಗ ಕಳ್ಳಬೇಟೆಗೆ ಹೊರಟಿರುವುದು ಗೊತ್ತಾಗಿದೆ. ಆರೋಪಿಗಳನ್ನು ಕೋಡಿಹಳ್ಳಿ ಪೋಲಿಸ್​ ಠಾಣೆಗೆ ಒಪ್ಪಿಸಲಾಗಿದೆ. ಸಬ್​ಇನ್​ಸ್ಪೆಕ್ಟರ್​ ಪ್ರದಿಪ್​ಕುಮಾರ್​ ಪ್ರಕರಣ ದಾಖಲಿಸಿಕೊಂಡಿದ್ದಾರೆ.