ಉಬರ್ನಲ್ಲಿ ಕಾರು ಬಾಡಿಗೆಗೆ ಪಡೆದು ಬಳಿಕ ಚಾಲಕನಿಗೆ ವಂಚಿಸಿದ್ದ ಆರೋಪಿಗಳನ್ನು ಹಾರೋಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಹಾರೋಹಳ್ಳಿ: ಉಬರ್ ಕಾರು ಚಾಲಕನನ್ನು ಬೆದರಿಸಿ, ಮೊಬೈಲ್, ನಗದು ಕಿತ್ತುಕೊಂಡು ಕಾರು ಸಮೇತ ಪರಾರಿಯಾಗಿದ್ದ ಆರೋಪಿಗಳನ್ನು ಹಾರೋಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಚನ್ನಪಟ್ಟಣದ ಲಾಳಟ್ಟ ನಿವಾಸಿಗಳಾದ ಜೀವನ್, ಅಭಿಷೇಕ ಹಾಗೂ ಬೆಂಗಳೂರು ಹೊಸಕೆರೆಹಳ್ಳಿಯ ರತ್ ಬಂಧಿತರು.
ಬೆಂಗಳೂರು&ಮೈಸೂರು ಮುಖ್ಯ ರಸ್ತೆಯ ವಂಡರ್ ಲಾ ಗೇಟ್ನಿಂದ ಚನ್ನಪಟ್ಟಣಕ್ಕೆ ಬಿಡಲು ಇಬ್ಬರು ಉಬರ್ನಲ್ಲಿ ಕಾರು ಬುಕ್ ಮಾಡಿಕೊಂಡಿದ್ದರು. ಕಾರು ಚನ್ನಪಟ್ಟಣಕ್ಕೆ ಬಂದಾಗ ಅಲ್ಲಿ ಮತ್ತೊಬ್ಬರನ್ನು ಹತ್ತಿಸಿಕೊಂಡು, ಚನ್ನಪಟ್ಟಣ ಬೇಡ ಹಾರೋಹಳ್ಳಿಗೆ ಬಿಡುವಂತೆ ತಿಳಿಸಿದ್ದಾರೆ. ಅದರಂತೆ ಉಬರ್ ಚಾಲಕ ಕಾರನ್ನು ಹಾರೋಹಳ್ಳಿಯತ್ತ ಚಲಾಯಿಸುವಾಗ ಮಾರ್ಗ ಮಧ್ಯೆ ಮಾರಕಾಸ್ತ್ರ ತೋರಿಸಿ ಚಾಲಕನನ್ನು ಬೆದರಿಸಿ, ಕಾರಿನಿಂದ ಕೆಳಗೆ ಇಳಿಸಿದ್ದಾರೆ. ಚಾಲಕನ ಅಂಕೌಟ್ನಲ್ಲಿದ್ದ 2 ಸಾವಿರ ರೂ.ಗಳನ್ನು ೋನ್ ಪೇ ಮಾಡಿಸಿಕೊಂಡು, ಮೊಬೈಲ್ ಕಿತ್ತುಕೊಂಡು ಕಾರು ಸಮೇತ ಪರಾರಿಯಾಗಿದ್ದರು. ಟನೆ ಸಂಬಂಧ ಕಾರು ಚಾಲಕ ರಾಮನಗರದ ಜಾನ್ ವಿಲಿಯಂ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ತನಿಖೆ ಕೈಗೊಂಡ ಇನ್ಸ್ಪೆಕ್ಟರ್ ಮಲ್ಲೆಶ್ ನೇತೃತ್ವದ ತಂಡ ಪ್ರಕರಣ ದಾಖಲಾದ ಎರಡು ದಿನಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ, ಕಾರು, ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಮಾರಕಾಸಗಳನ್ನು ವಶಪಡಿಸಿಕೊಂಡಿದ್ದಾರೆ.