ಉಬರ್‌ನಲ್ಲಿ ಕಾರು ಬಾಡಿಗೆಗೆ ಪಡೆದು ಬಳಿಕ ಚಾಲಕನಿಗೆ ವಂಚಿಸಿದ್ದ ಆರೋಪಿಗಳನ್ನು ಹಾರೋಹಳ್ಳಿ ಪೊಲೀಸರು ಬಂಧಿಸಿದ್ದಾರೆ.
- ಪ್ರಯಾಣಿಕರ ಸೋಗಿನಲ್ಲಿ ಪ್ರಯಾಣ
- ಮಾರಾಕಾಸ್ತ್ರ ತೋರಿಸಿ ಮೊಬೈಲ್ , ಕಾರು ಕಸಿದಿದ್ದರು
ಉಬರ್ ಕಾರು ಚಾಲಕನನ್ನು ಬೆದರಿಸಿ, ಮೊಬೈಲ್, ನಗದು ಕಿತ್ತುಕೊಂಡು ಕಾರು ಸಮೇತ ಪರಾರಿಯಾಗಿದ್ದ ಆರೋಪಿಗಳನ್ನು ಹಾರೋಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಚನ್ನಪಟ್ಟಣದ ಲಾಳಘಟ್ಟ ನಿವಾಸಿಗಳಾದ ಜೀವನ್, ಅಭಿಷೇಕ ಹಾಗೂ ಬೆಂಗಳೂರು ಹೊಸಕೆರೆಹಳ್ಳಿಯ ರಕ್ಷಿತ್ ಬಂಧಿತರು.
ಘಟನೆ ಹಿನ್ನೆಲೆ: ಬೆಂಗಳೂರು-ಮೈಸೂರು ಮುಖ್ಯ ರಸ್ತೆಯ ವಂಡರ್ ಲಾ ಗೇಟ್‌ನಿಂದ ಚನ್ನಪಟ್ಟಣಕ್ಕೆ ಬಿಡಲು ಇಬ್ಬರು ಉಬರ್‌ನಲ್ಲಿ ಕಾರು ಬುಕ್ ಮಾಡಿಕೊಂಡಿದ್ದರು. ಕಾರು ಚನ್ನಪಟ್ಟಣಕ್ಕೆ ಬಂದಾಗ ಅಲ್ಲಿ ಮತ್ತೊಬ್ಬರನ್ನು ಹತ್ತಿಸಿಕೊಂಡು, ಚನ್ನಪಟ್ಟಣ ಬೇಡ ಹಾರೋಹಳ್ಳಿಗೆ ಬಿಡುವಂತೆ ತಿಳಿಸಿದ್ದಾರೆ. ಅದರಂತೆ ಉಬರ್ ಚಾಲಕ ಕಾರನ್ನು ಹಾರೋಹಳ್ಳಿಯತ್ತ ಚಲಾಯಿಸುವಾಗ ಮಾರ್ಗ ಮಧ್ಯೆ ಮಾರಕಾಸ ತೋರಿಸಿ ಚಾಲಕನನ್ನು ಬೆದರಿಸಿ, ಕಾರಿನಿಂದ ಕೆಳಗೆ ಇಳಿಸಿದ್ದಾರೆ.
ಚಾಲಕನ ಅಂಕೌಟ್‌ನಲ್ಲಿದ್ದ 2 ಸಾವಿರ ರೂ.ಗಳನ್ನು ಫೋನ್ ಪೇ ಮಾಡಿಸಿಕೊಂಡು, ಮೊಬೈಲ್ ಕಿತ್ತುಕೊಂಡು ಕಾರು ಸಮೇತ ಪರಾರಿಯಾಗಿದ್ದರು. ಘಟನೆ ಸಂಬAಧ ಕಾರು ಚಾಲಕ ರಾಮನಗರದ ಜಾನ್ ವಿಲಿಯಂ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ತನಿಖೆ ಕೈಗೊಂಡ ಇನ್‌ಸ್ಪೆಕ್ಟರ್ ಮಲ್ಲೇಶ್ ನೇತೃತ್ವದ ತಂಡ ಪ್ರಕರಣ ದಾಖಲಾದ ಎರಡು ದಿನಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ, ಕಾರು, ಮೊಬೈಲï ಹಾಗೂ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತçಗಳನ್ನು ವಶಪಡಿಸಿಕೊಂಡಿದ್ದಾರೆ.