ಕನಕಪುರ ತಾಲೂಕು ತೆರಿಗೆದೊಡ್ಡಿ ಗ್ರಾಮದಲ್ಲಿ ರಾಜಕೀಯ ಕಿರುಕುಳಕ್ಕೆ ಧ್ವಂಸಗೊಂಡ ಕೋಳಿಫಾಮ್​ರ್ಅನ್ನು ಸರ್ಕಲ್​ ಇನ್​ಸ್ಪೆಕ್ಟರ್​ ವಿಕಾಸ್​ಗೌಡ ಪರಿಶೀಲಿಸಿದರು. ಎಸ್​ಐ ಪ್ರದಿಪ್​ಕುಮಾರ್​, ಗ್ರಾಮಸ್ಥರು ಉಪಸ್ಥಿತರಿದ್ದರು. 
ಬೆಂಗಳೂರು ದಕ್ಷಿಣ

ಕೋಳಿ ಫಾಮ್​ರ್ ಕೆಡವಿ ಬದುಕಿಗೆ ಕೊಳ್ಳಿ ಇಟ್ಟರು...

ಕನಕಪುರ: ಜೀವನಾಧಾರಕ್ಕೆ ಆಶ್ರಯವಾಗಿದ್ದ ಕೃಷಿ ಹಾಗೂ ಕೋಳಿ ಫಾಮ್​ರ್ ನಾಶ ಮಾಡಿ ನಮ್ಮ ಬದುಕನ್ನೇ ನಾಶಗೊಳಿಸಲಾಗಿದೆ, ರಾಜಕೀಯ ದ್ವೇಷ, ಅಸೂಯೆಯಿಂದ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಾಂತರ ಠಾಣೆ ಸರ್ಕಲ್​ ಇನ್​ಸ್ಪೆಕ್ಟರ್​ ವಿಕಾಸ್​ಗೌಡ ಎದುರು ತಾಲೂಕಿನ ಐ.ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ತೆರಿಗೆದೊಡ್ಡಿಯ ಗೌರಿಬಾಯಿ, ರಾಮನಾಯ್ಕ ಕುಟುಂಬ ನೋವು ತೋಡಿಕೊಂಡಿತು.
ಜಮೀನಿನಲ್ಲಿನ ಕೋಳಿ ಾಮ್​ರ್ ಧ್ವಂಸಗೊಂಡ ಹಿನ್ನೆಲೆಯಲ್ಲಿ ಗುರುವಾರ ಸ್ಥಳ ಪರಿಶೀಲನೆಗೆಂದು ಸರ್ಕಲ್​ ಇನ್​ಸ್ಪೆಕ್ಟರ್​ ಬಂದಾಗ ಕಣ್ಣೀರು ಹಾಕಿದ ಗೌರಿಬಾಯಿ ಮತ್ತು ಕುಟುಂಬ, ಜಮೀನು ವ್ಯಾಜ್ಯದ ಬಗ್ಗೆ ಸವವಿವರವಾಗಿ ತಿಳಿಸಿದರು. ನಮ್ಮ ವಿರುದ್ಧ ಜಮೀನಿನ ವಿಚಾರವಾಗಿ ಹಗೆತನ ಮಾಡುತ್ತಿರುವವರು ಎರಡು ಬಾರಿ ಕೋಳಿ ಾಮ್​ರ್ಗೆ ಬೆಂಕಿ ಇಟ್ಟಿದ್ದರು. ಬುಧವಾರ ನಡುರಾತ್ರಿ ಮತ್ತೆ ಬಂದು
ಫಾಮ್​ರ್ ಕಟ್ಟಡವನ್ನೇ ನಾಶ ಮಾಡಿದ್ದಾರೆ ಎಂದು ನೋವು ತೋಡಿಕೊಂಡರು.
ಮಗ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿದ್ದ. ಆತನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಸೇವೆಯಿಂದ ವಜಾ ಗೊಳಿಸಿದರು, ಈಗ ಮೇಕೆ&ಕುರಿಗಳನ್ನು ಮೇಯಿಸುತ್ತಿದ್ದಾನೆ ಎಂದು ಕಣ್ಣೀರು ಹಾಕಿದರು. ಗೌರಿಬಾಯಿ ಕುಟುಂಬದ ಅಳಲು ಆಲಿಸಿದ ಸರ್ಕಲ್​ ಇನ್​ಸ್ಪೆಕ್ಟರ್​ ವಿಕಾಸ್​ಗೌಡ, ಧೈರ್ಯವಾಗಿರಿ, ಯಾರು ಯಾರನ್ನೂ ಕೊಲ್ಲುವ ಅಧಿಕಾರವಿಲ್ಲ, ಯಾರೇ ತಪ್ಪು ಮಾಡಿದ್ದರೂ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಸಮಾಧಾನಪಡಿಸಿದರು. ರಾಮಚಂದ್ರನಾಯ್ಕ, ಗುಂಡಾನಾಯ್ಕ, ಶಿವಮಾದನಾಯ್ಕ, ರಾಮಲಿಂಗನಾಯ್ಕ, ಗೌರಿಬಾಯಿ, ಲ್ಮಬಾಯಿ ಸೇರಿದಂತೆ ಕುಟುಂಬ ಸದಸ್ಯರು ಹಾಜರಿದ್ದರು.