ರಾಮನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್ ಅವರು ಬೆಳೆ ವಿಮೆ ಬಿತ್ತಿ ಪತ್ರಗಳನ್ನು ಬಿಡುಗಡೆ ಮಾಡಿದರು.  
ಬೆಂಗಳೂರು ದಕ್ಷಿಣ

ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯವಾಗದಿರಲಿ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಸೂಚನೆ
  • ಕೃಷಿ ಪರಿಕರ ತಯಾರಕ, ಮಾರಾಟಗಾರರ ಜಿಲ್ಲಾಮಟ್ಟದ ಸಭೆ

ರಾಮನಗರ

ಮುಂಗಾರುಹಂಗಾಮಿನಲ್ಲಿ ರಸಗೊಬ್ಬರ ಪೂರೈಕೆ ಮತ್ತು ವಿತರಣೆಯಲ್ಲಿವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಬೇಕೆಂದು ರಸಗೊಬ್ಬರ ಉತ್ಪಾದಕ ಸಂಸ್ಥೆಗಳ ಪ್ರತಿನಿಧಿಗಳಿಗೆಹಾಗೂ ವಾರಾಟಗಾರರಿಗೆ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದಕೃಷಿ ಪರಿಕರ ತಯಾರಕ ಮತ್ತುವಾರಾಟಗಾರರ ಜಿಲ್ಲಾಮಟ್ಟದ ಸಭೆಯಲ್ಲಿ ವಾತನಾಡಿದರು.

ಜಿಲ್ಲೆಯಲ್ಲಿಹೆಚ್ಚಿನ ಬೆಲೆಗೆ ರಸಗೊಬ್ಬರ ವಾರಾಟಹಾಗೂ ಕೃತಕ ಅಭಾವ ಸೃಷ್ಟಿಸಿದಪ್ರಕರಣ ಕಂಡುಬಂದರೆ ಪರವಾನಗಿ ರದ್ದು ವಾಡಲಾಗುವುದು.ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ರಸಗೊಬ್ಬರವಾರಾಟ ಪ್ರವಾಣವನ್ನು ಗಮನಿಸಬೇಕು. ಅಗತ್ಯವಿರುವ ಪ್ರವಾಣವನ್ನು ದಾಸ್ತಾನು ವಾಡಿಕೊಂಡು ಬೇಡಿಕೆಗೆ ತಕ್ಕಂತೆ ಪೂರೈಸಬೇಕು. ರೈತರಿಗೆತಡೆಯಾಗದಂತೆ ಅಧಿಕಾರಿಗಳು ನಿಗವಹಿಸಬೇಕೆಂದು ಸೂಚಿಸಿದರು.

ರೈತರಿಗೆರಸಗೊಬ್ಬರ ಲಭ್ಯತೆ ಬಗ್ಗೆ ಅರಿವುಮೂಡಿಸಲು ಮತ್ತು ರಸಗೊಬ್ಬರಗಳಿಗೆ ಪರ್ಯಾಯವಾಗಿಸಾವಯವ ಗೊಬ್ಬರ ಹೆಚ್ಚು ಬಳಕೆವಾಡುವಂತೆ ಸಂಬಂಧಿಸಿದ ಅಧಿಕಾರಿಗಳು ಜಾಗೃತಿ ಮೂಡಿಸಬೇಕು, ರಸಗೊಬ್ಬರವಾರಾಟ ಮಳಿಗೆ ಮುಂದೆ ದಾಸ್ತಾನುಮತ್ತು ಗರಿಷ್ಠ ವಾರಾಟ ದರವಿವರ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು. ಜನತೆಗೆ ಯೂರಿಯಾ ರಸಗೊಬ್ಬರವನ್ನುಪಿಒಎಸ್ ಯಂತ್ರದಲ್ಲಿ ಕಡ್ಡಾಯವಾಗಿ ವಾರಾಟ ವಾಡಲು ಕ್ರಮವಹಿಸಬೇಕು ಎಂದು ತಾಕೀತು ವಾಡಿದರು.

ಬೆಳೆ ವಿಮೆ ಯೋಜನೆ, ಬೆಳೆಸಮೀಕ್ಷೆ ರಾಷ್ಟ್ರೀಯ ಆಹಾರದ್ರತಾ ಮತ್ತುಪೌಷ್ಠಿಕ ಅಭಿಯಾನ ಮತ್ತು ಸೂಕ್ಷ್ಮನೀರಾವರಿ ಯೋಜನೆಗಳ ಕುರಿತು ಚರ್ಚಿಸಲಾಯಿತು. ಯೋಜನೆಗಳನ್ನು ಜಿಲ್ಲೆಯಲ್ಲಿಕಟ್ಟುನಿಟ್ಟಾಗಿ ಯಾವುದೇ ಲೋಪವಿಲ್ಲದೆ ಅನುಷ್ಠಾನಗೊಳಿಸುವಂತೆಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಸಭೆಯಲ್ಲಿ2026 ಮುಂಗಾರು ಹಂಗಾಮಿನ ಬೆಳೆವಿಮೆ ಯೋಜನೆ ಬಗ್ಗೆ ಪ್ರಚಾರವಾಡಲು ಭಿತ್ತಿ ಪತ್ರ ಮತ್ತುಕರಪತ್ರಗಳನ್ನು ಡಿಸಿ ಬಿಡುಗಡೆ ಮಾಡಿದರು.