ಪ್ರಮುಖ ಮುಖ್ಯಾಂಶಗಳು
ಕೈಲಾಂಚ ಹೋಬಳಿಯ ಕೂನಗಲ್-ಕೆ.ಪಿ.ದೊಡ್ಡಿ ಮಧ್ಯೆ ಒಂದೂವರೆ ದಶಕದ ಹಿಂದೆನಿರ್ಮಿಸಿರುವ ಅರ್ಕಾವತಿ ನದಿ ಸೇತುವೆಯನ್ನು ಎತ್ತರಗೊಳಿಸಿ, ಅಭಿವೃದ್ಧಿಪಡಿಸುವಂತೆ ಎರಡೂ ಗ್ರಾಮಗಳಜನ ಒತ್ತಾಯಿಸಿದ್ದಾರೆ.
ಕೂನಗಲ್-ಕೆ.ಪಿ.ದೊಡ್ಡಿ ಮಧ್ಯೆ ಅರ್ಕಾವತಿ ನದಿಗೆ ಅಡ್ಡಲಾಗಿ 15 ವರ್ಷಗಳಹಿಂದೆ ಸೇತುವೆ ನಿರ್ಮಿಸಲಾಗಿದೆ. ಆದರೆ, ಸೇತುವೆ ತೀರಾ ಕೆಳಮಟ್ಟದಲ್ಲಿರುವ ಕಾರಣ ನದಿ ಹರಿವು ಹೆಚ್ಚಾದಾಗಸೇತುವೆ ಮೇಲೆ ನೀರು ಹರಿಯುತ್ತದೆ. ಇದರಿಂದ ಸಂಚಾರವೇ ಬಂದ್ ಆಗುತ್ತದೆ. ಅಲ್ಲದೇ ಈಗ ಸೇತುವೆ ತಡೆಗಂಬಮುರಿದಿದ್ದು, ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟಬುತ್ತಿ. ಹಾಗಾಗಿ ಸೇತುವೆಯನ್ನು ಎತ್ತರಗೊಳಿಸಿ,ತಡೆಗೋಡೆ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಬೇಸಿಗೆ ಶುರುವಾಗುವ ಕಾರಣ ಈಗಲೇ ಸೇತುವೆಎತ್ತರಿಸಿದರೆ ಮಳೆಗಾಲದಲ್ಲಿ ಸಮಸ್ಯೆಯಾಗುವುದಿಲ್ಲ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೂನಗಲ್‌ನಲ್ಲಿ ಪಿಯು ಕಾಲೇಜು, ಪ್ರೌಢ ಹಾಗೂ ಪ್ರಾಥಮಿಕ ಶಾಲೆ ಇದೆ. ನದಿತುಂಬಿ ಹರಿದಾಗ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಕೆ.ಪಿ.ದೊಡ್ಡಿಗೆ ಹೋಗುವವರು ಕೈಲಾಂಚ ಮಾರ್ಗವಾಗಿಸುತ್ತಿ ಬಳಸಿ ಹೋಗಬೇಕಿದೆ.
ನೀರು ಹರಿದು ಹೋಗಲು ಸಣ್ಣಸಣ್ಣ ಪೈಪ್ ಅಳವಡಿಸಲಾಗಿದೆ. ಪರಿಣಾಮ ನದಿಯಲ್ಲಿನಕಲುಷಿತ ನೀರು ಸೇತುವೆ ಸಮಕ್ಕೆ ನಿಲ್ಲುತ್ತದೆ. ಇದರಿಂದ ಕೆಟ್ಟ ವಾಸನೆ ಬರುತ್ತಿದೆ. ಅಲ್ಲದೆ ನದಿಯಲ್ಲಿಜೊಂಡು ಬೆಳೆದು ವಿಷಜಂತುಗಳು ಹೆಚ್ಚಾಗಿವೆ. ಕೂನಗಲ್, ಕೆ.ಪಿ.ದೊಡ್ಡಿ ಗ್ರಾಮಗಳಿಗೆ ಕಲುಷಿತದ ದುರ್ನಾತಕಂಟಕವಾಗಿದೆ.
ಸೇತುವೆ ಕೆಳಮಟ್ಟದಲ್ಲಿರುವ ಕಾರಣ ನದಿ ನೀರು ಸರಾಗವಾಗಿ ಹರಿದು ಹೋಗದೆಅಕ್ಕಪಕ್ಕದ ಜಮೀನುಗಳಿಗೆ ನುಗ್ಗುತ್ತದೆ. ಇದರಿಂದ ಅಡಕೆ, ತೆಂಗು, ಭತ್ತ, ರಾಗಿ ಫಸಲು ನಾಶವಾಗುವುದಲ್ಲದೇಭೂಮಿ ಸವಕಳಿಯಾಗಿ ರೈತರು ಸಂಕಷ್ಟ ಎದುರಿಸುವಂತಾಗಿದೆ ಎನ್ನುತ್ತಾರೆ ಕೂನಗಲ್ ರಾಜೇಶ್.
ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದಾಗ ಸೇತುವೆ ಮೇಲೆ ಜೊಂಡು ಬಂದು ನಿಲ್ಲುತ್ತದೆ.ಇದರಿಂದ ಗ್ರಾಮಸ್ಥರು ಒಂದು ಭಾಗದಿಂದ ಮತ್ತೊಂದು ಕಡೆ ಹೋಗಲು ಪರದಾಡಬೇಕು. ಪ್ರತಿಬಾರಿ ಕೂನಗಲ್ ಗ್ರಾಮಸ್ಥರುಜೆಸಿಬಿ ಅಥವಾ ಕೈಯಿಂದ ಜೊಂಡು ತೆರವುಗೊಳಿಸಬೇಕು ಎಂದು ಗ್ರಾಮದ ವೆಂಕಟಪ್ಪ ಅಳಲು ತೋಡಿಕೊಂಡರು.
ಮೂರು ವರ್ಷಗಳ ಹಿಂದೆ ಇದೇ ಸೇತುವೆ ಮೇಲೆ ಹರಿಯುತ್ತಿದ್ದ ನೀರಿನ ರಭಸಕ್ಕೆಸಿಲುಕಿ ಕೂನಗಲ್ ಗ್ರಾಮದ ನಸ್ರುಲ್ಲಾಖಾನ್ (49) ಎಂಬುವವರು ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದಾರೆ.ಅಂದಿನಿಂದಲೂ ಸೇತುವೆ ಎತ್ತರಿಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಆದಾಗ್ಯೂ ಸಂಬಂಧಿಸಿದ ಇಲಾಖೆ ಸಮಸ್ಯೆಬಗೆಹರಿಸುತ್ತಿಲ್ಲ.