ಹೊಸಕೋಟೆ ಟಿಎಪಿಸಿಎಂಎಸ್​ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಶಾಸಕ ಶರತ್​ ಬಚ್ಚೇಗೌಡ, ಅಧ್ಯಕ್ಷ ಕೆ.ಎಸ್​.ಸುರೇಶ್​ ಗೌಡ, ಪ್ರಭಾರ ಕಾರ್ಯದರ್ಶಿ ಎಂ.ಸೋಮಣ್ಣ, ಮಾಜಿ ಅಧ್ಯಕ್ಷ ಗೋಪಾಲ ಗೌಡ, ಒಕ್ಕಲಿಗರ ಸಂದ ನಿರ್ದೇಶಕ ರಾಜ್​ಶೇಕರ್​ಗೌಡ, ಉದ್ಯಮಿ ಬಿ.ವಿ.ಬೈರೇಗೌಡ, ಯೋಜನಾ ಪ್ರಾಧಿಕಾರದ ನಿರ್ದೇಶಕ ಡಾ.ಎಚ್​.ಎಂ.ಸುಬ್ಬರಾಜ್​, ಉಪಾಧ್ಯಕ್ಷ ಸಿ.ಮುನಿರಾಜ್​ ಇದ್ದರು. 
ಬೆಂಗಳೂರು ದಕ್ಷಿಣ

ಬರಗಾಲದಲ್ಲಿ ರೈತರ ಪರ ರಾಜ್ಯ ಸರ್ಕಾರ ನಿಲ್ಲಲಿದೆ

ಹೊಸಕೋಟೆ:

ಮಳೆಯಿಲ್ಲದೆ ರಾಜ್ಯದಲ್ಲಿ ಬರ ಎದುರಾಗಿದ್ದು, ರಾಜ್ಯ ಸರ್ಕಾರ ರೈತರ ನೆರವಿಗಾಗಿ ವಿಶಿಷ್ಟ ಯೋಜನೆಗಳನ್ನು ಜಾರಿಗೆ ತರಲಿದೆ ಎಂದು ಶಾಸಕ ಶರತ್​ ಬಚ್ಚೇಗೌಡ ತಿಳಿಸಿದರು.

ನಗರದ ಖಾಸಗಿ ಸಭಾಂಗಣದಲ್ಲಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ರಸಗೊಬ್ಬರದ ಕೊರತೆ ಇದೆ. ಇದಕ್ಕೆ ಅಮೆರಿಕ&ಇರಾನ್​ ಯುದ್ಧ ಕಾರಣ. ಈ ಸಮಸ್ಯೆ ಬಗ್ಗೆ ಸರ್ಕಾರದಮಟ್ಟದಲ್ಲಿ ಚರ್ಚೆಯಾಗಿದ್ದು, ಸರ್ಕಾರ ಮತ್ತು ಸಹಕಾರ ಸಮಾನಮಟ್ಟದಲ್ಲಿ ನಡೆಯುವ ಕಾರಣ ರೈತರಪರ ಸರ್ಕಾರ ನಿಂತಿದೆ. ಸಹಕಾರ ಸಹ ರೈತರ ಜತೆ ನಿಲ್ಲಬೇಕು ಎಂದರು.

ನಿರ್ದೇಶಕರಾದ ಎಚ್​.ಕೆ.ರಮೇಶ್​, ಎಂ.ಬಾಬು ರೆಡ್ಡಿ, ರವಿ ಎಚ್​.ಎಸ್​., ಕೆ.ಸುನೀಲ್​, ಎಲ್​.ಎಂ.ಮಂಜುನಾಥ್​, ಡಿ.ನಾಗರಾಜ್​, ಎಸ್​.ಪಿ.ಕೃಷ್ಣಪ್ಪ, ಪಿ.ನಾರಾಯಣಪ್ಪ, ನಾರಾಯಣಸ್ವಾಮಿ ಸಿ.ಎಂ., ಪಾರ್ವತಮ್ಮ, ಹಸೀನ್​ ತಾಜ್​, ಎಂ.ಬಿ.ವೆಂಕಟೇಶಪ್ಪ, ಬಿಸಿ ಆನಂದಾಚಾರಿ, ಪ್ರಭಾರ ಕಾರ್ಯದರ್ಶಿ ಎಂ.ಸೋಮಣ್ಣ ಇದ್ದರು.

57.57 ಕೋಟಿ ರೂ. ವ್ಯಾಪಾರ

ಟಿಎಪಿಸಿಎಂಎಸ್​ ಪ್ರಭಾರ ಕಾರ್ಯದರ್ಶಿ ಎಂ.ಸೋಮಣ್ಣ ಮಾತನಾಡಿ, ಸಂವು 6024 ಸದಸ್ಯರನ್ನೊಳಗೊಂಡು ಒಟ್ಟು 57.39 ಲಕ್ಷ ರೂ. ಬಂಡವಾಳ ಹೊಂದಿದ್ದು, 2025&26ನೇ ಸಾಲಿನಲ್ಲಿ 57.57 ಕೋಟಿ ರೂ. ವ್ಯಾಪಾರ ವಹಿವಾಟು ನೆಡೆಸಿದ್ದು 3.88 ಕೋಟಿ ರೂ. ಲಾಭಗಳಿಸಿದೆ. ಈ ಪೈಕಿ 1.67 ಕೋಟಿ ರೂ. ನಿವ್ವಳ ಲಾಭ ಹೊಂದಿದೆ ಎಂದರು. 10ನೇ ತರಗತಿ ಹಾಗೂ ದ್ವೀತಿಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು.

ನಾಳೆ ನನಗೆ ಪ್ರತಿಭಾ ಪುರಸ್ಕಾರ!

ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಆಗುತ್ತಿರುವ ಕಾರಣ ನನ್ನ ಹೆಸರು ಪಟ್ಟಿಯಲ್ಲಿದೆಯೇ? ಎಂಬ ತಾಲೂಕಿನ ಮುಖಂಡರು ಕೇಳಿದ ಪ್ರಶ್ನೆ ಕಳೆದ ಒಂದು ವಾರದಿಂದ ಉತ್ತರಿಸಿ ಸಾಕಾಗಿದೆ. ಆದರೆ ಈ ಬಾರಿ ಪರೀೆಯಲ್ಲಿ ಉತ್ತಮವಾಗಿ ಉತ್ತರಗಳನ್ನು ಬರೆದಿದ್ದೇನೆ. ಅಂಕಗಳ ಮೌಲ್ಯಮಾಪನ ಮಾಡುವವರು ಉತ್ತಮ ಅಂಕ ನೀಡಿದಲ್ಲಿ ಮುಂದಿನ ಸೋಮವಾರ ನಡೆಯುವ ಪ್ರತಿಭಾ ಪುರಸ್ಕಾರದಲ್ಲಿ ನಾನೂ ಇರುತ್ತೇನೆ ಎಂದ ಶಾಸಕ ಶರತ್​ ಬಚ್ಚೇಗೌಡ, ತಾವು ಸಚಿವರಾಗುವುದಾಗಿ ಪರೋಕ್ಷವಾಗಿ ನುಡಿದರು.