ಸಾಂದರ್ಭಿಕ ಚಿತ್ರ 
ಬೆಂಗಳೂರು ದಕ್ಷಿಣ

ಅಪಘಾತದಲ್ಲಿ ಗಾಯಗೊಂಡಿದ್ದವ ಸಾವು

ಕನಕಪುರ: ಖಾಸಗಿ ಬಸ್​ ಹಾಗೂ ಬೈಕ್​ ನಡುವೆ ಭಾನುವಾರ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕ ಚಿಕಿತ್ಸೆ ಲಕಾರಿಯಾಗದೆ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದ್ದಾನೆ. ಹೊಸದುರ್ಗ ಗ್ರಾಮದ ನವೀನ್​ (37) ಮೃತ.
ಭಾನುವಾರ ಹೊಸದುರ್ಗದಿಂದ ಕೋಡಿಹಳ್ಳಿಗೆ ಬರುವ ವೇಳೆ ತಾವರೆಗಟ್ಟೆ ಕ್ರಾಸ್​ ಬಳಿ ಖಾಸಗಿ ಬಸ್​ ಹಾಗೂ ಬೈಕ್​ನಡುವೆ ಅಪಘಾತ ಸಂಭವಿಸಿತ್ತು, ಜತೆಯಲ್ಲಿದ್ದ ತಂದೆ ವೀರಭದ್ರೇಗೌಡ ಅವರು ಹಾರೋಹಳ್ಳಿ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ಪಾದಚಾರಿ ಬೊಮ್ಮಸಂದ್ರದ ಲಿಂಗೇಗೌಡ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಹಾರೋಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.