ಸಾಂದರ್ಭಿಕ ಚಿತ್ರ 
ಬೆಂಗಳೂರು ದಕ್ಷಿಣ

ಚಿಕಿತ್ಸೆಗೆ ಹಣ ರ್ಖಚಾಗುತ್ತದೆಂದು ಸ್ನೇಹಿತನ್ನೇ ಕೊಂದ ದುರುಳರು

ಕುದೂರು: ತೆಂಗಿನ ಮರದಿಂದ ಜಾರಿ ಬಿದ್ದು ಬೆನ್ನು ಮೂಳೆ ಮುರಿದುಕೊಂಡ ಸ್ನೇಹಿತನಿಗೆ ಚಿಕಿತ್ಸೆ ಕೊಡಿಸಿದರೆ ಹಣ ರ್ಖಚಾಗುತ್ತದೆಂದು ಆತನನ್ನು ಕೊಲೆ ಮಾಡಿರುವುದಾಗಿ ಹೋಬಳಿಯ ವಾಜರಹಳ್ಳಿಯಲ್ಲಿನ ಕೊಲೆ ಪ್ರಕರಣ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.
ಸೋಲೂರು ಹೋಬಳಿ ಕಲ್ಯಾಣಪುರ ವಿನೋದ ವಾಜರಹಳ್ಳಿ ಬಾವಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಬಂಧನಕ್ಕೆಗೊಳಗಾದ ಆರೋಪಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಕೊಲೆಯ ಕಾರಣ ಬಾಯ್ಬಿಟ್ಟಿದ್ದಾರೆ.
ಮದ್ಯದಲ್ಲಿ ಎಳನೀರು ಬೆರೆಸಲೆಂದು ವಿನೋದನನ್ನು ಸ್ನೇಹಿತರಾದ ಸುದೀಪ್​ ಮತ್ತು ಪ್ರಜ್ವಲ್​ ತೆಂಗಿನ ಮರ ಹತ್ತಿಸಿದರು. ಈ ವೇಳೆ ಮರದಿಂದ ಜಾರಿ ಬಿದ್ದು ವಿನೋದನ ಬೆನ್ನು ಮೂಳೆ ಮುರಿದಿತ್ತು. ವಿನೋದಗೆ ಚಿಕಿತ್ಸೆ ಕೊಡಿಸಿದರೆ ಹತ್ತಾರು ಲಕ್ಷ ರೂ. ರ್ಖಚಾಗುತ್ತದೆಂದು ಆತನನ್ನು ಕೊಲೆ ಮಾಡಿ, ಬಾವಿಗೆ ಎಸೆದಿದ್ದರು ಎಂದು ಪೊಲೀಸ್​ ಮೂಲಗಳು ತಿಳಿಸಿವೆ.