ರೇವಣಸಿದ್ದೇಶ್ವರ ಕೊಂಡದ ದೃಶ್ಯ
- ರಾಮನಗರದಲ್ಲಿ ಶೆಟ್ಟಿಹಳ್ಳಿ ಬೀದಿಯ ರೇವಣಸಿದ್ದೇಶ್ವರ
- ಸಂತೋಷ್ ಅವರಿಂದ ಅಗ್ನಿಕೊಂಡ ಪ್ರವೇಶ
ರಾಮನಗರ : ನಗರದ ಶೆಟ್ಟಿಹಳ್ಳಿ ಬೀದಿಯಲ್ಲಿರುವ ರೇವಣಸಿದ್ದೇಶ್ವರಸ್ವಾಮಿ ದೇವರ ಅಗ್ನಿಕೊಂಡ ಮಹೋತ್ಸವ ಮಂಗಳವಾರ ಬೆಳಗ್ಗೆ 10 ಗಂಟೆಗೆ ವಿಜೃಂಭಣೆಯಿಂದ ವೈಭವೋಪೇತವಾಗಿ ನೆರವೇರಿತು.
ಹಲಗೆ ದೇವರ ಪ್ರತಿಮೆ ಹಿಡಿದ ಅರ್ಚಕ ಸಂತೋಷ್ ಅಗ್ನಿಕೊಂಡ ಪ್ರವೇಶಿಸಿದರು. ರೇವಣ ಸಿದ್ದೇಶ್ವರ ದೇವಾಲಯದಲ್ಲಿ ಅಗ್ನಿಕೊಂಡ ಮಹೋತ್ಸವದ ಪ್ರಯುಕ್ತ ಸೋಮವಾರ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಸಂಜೆ ಯಳವಾರಪೂಜೆ ಕಾರ್ಯಕ್ರಮ ನಡೆಯಿತು.
ರಾಮನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಅಗ್ನಿಕೊಂಡಕ್ಕೆ ಸೌಧೆ ಸಮರ್ಪಿಸಿದರು. ಅಗ್ನಿಕೊಂಡ ಮಹೋತ್ಸವದ ಪ್ರಯುಕ್ತ ಕವಣಾಪುರ ಬಸವಣ್ಣನವರ ಬಸವನನ್ನು ದೇವಾಲಯದ ಆಡಳಿತ ಮಂಡಳಿ ಆಹ್ವಾನಿಸಿತ್ತು. ಹಾಗಾಗಿ ದೇವಾಲಯಕ್ಕೆ ಆಗಮಿಸಿದ
ಭಕ್ತರಿಗೆ ಬಸಪ್ಪ ಆಶೀರ್ವದಿಸಿತು. ಅಗ್ನಿಕೊಂಡ ನಿಮಿತ್ತ ದೇವಾಲಯ ಮತ್ತು ಬೀದಿಯನ್ನು ವಿಶೇಷ ಬಣ್ಣ ಬಣ್ಣದ ಹೂ ವಿದ್ಯುತ್ ದೀಪಾಲಂಕಾರಗಳಿಂದ ಶೃಂಗರಿಸಲಾಗಿತ್ತು.