ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿನಿ ಸೃಷ್ಠಿಗೆ ಸಹಿ ತಿನ್ನಿಸಿದ ಸಂಭ್ರಮಿಸಲಾಯಿತು.
- ಕಳೆದ ವರ್ಷಕ್ಕಿಂತ ಶೇ.12.81 ಫಲಿತಾಂಶ
- ಹೆಚ್ಚಳದೊಂದಿಗೆ 2 ಕುಸಿತ
- ಸರ್ಕಾರಿ ಶಾಲೆಗಳ ಮೇಲುಗೈ
ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ರಾಮನಗರ ಜಿಲ್ಲೆಯಲ್ಲಿ ಶೇಕಡವಾರು ಪ್ರಮಾಣದಲ್ಲಿ ಭಾರಿ ಏರಿಕೆ ಕಂಡಿದ್ದರೂ, ರಾಜ್ಯಮಟ್ಟದಲ್ಲಿ 26ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. 113 ಶಾಲೆಗಳು ಶೇ.100 ಲಿತಾಂಶ ದಾಖಲು ಮಾಡುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿವೆ.
ಹೌದು...! ಈ ಬಾರಿಯ ಫಲಿತಾಂಶದಲ್ಲಿ ರಾಮನಗರ ಜಿಲ್ಲೆ ಶೇ.92.83 ಫಲಿತಾಂಶ ದಾಖಲಿಸಿ, 26ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ ಶೇ 80.02 ಫಲಿತಾಂಶದೊಂದಿಗೆ 24ನೇ ಸ್ಥಾನದಲ್ಲಿತ್ತು. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ಶೇ.12.81 ಫಲಿತಾಂಶ ಹೆಚ್ಚಳಗೊಂಡಿದೆ.
ಪ್ರಸ್ತುತ ಪ್ರಕಟಗೊಂಡಿರುವ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದ 11,237 ವಿದ್ಯಾರ್ಥಿಗಳಲ್ಲಿ 10,431 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಫಲಿತಾಂಶದ ವಿವರ
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ 651 ವಿದ್ಯಾರ್ಥಿಗಳು ಎ ಪ್ಲಸ್ ಗ್ರೇಡ್ ಪಡೆದರೆ, 1,531 ವಿದ್ಯಾರ್ಥಿಗಳು ಎ ಗ್ರೇಡ್, 1,776 ಮಂದಿ ಬಿ ಪ್ಲಸ್ ಗ್ರೇಡ್, 2,100 ಮಂದಿ ವಿದ್ಯಾರ್ಥಿಗಳು ಬಿ ಗ್ರೇಡ್, 2,202 ಮಂದಿ ಸಿ ಪ್ಲಸ್ ಗ್ರೇಡ್, 2,171 ಮಂದಿ ಸಿ ಗ್ರೇಡ್‌ನಲ್ಲಿ ಉತ್ತೀರ್ಣರಾಗಿದ್ದಾರೆ.
ಚನ್ನಪಟ್ಟಣ ಫಸ್ಟ್
ಈ ಬಾರಿಯ ಲಿತಾಂಶದಲ್ಲಿ ಜಿಲ್ಲೆಗೆ ಚನ್ನಪಟ್ಟಣ ತಾಲೂಕು ಪ್ರಥಮ ಸ್ಥಾನ ಪಡೆದುಕೊಂಡಿದೆ. ಚನ್ನಪಟ್ಟಣ ಶೇ.95.03 ಲಿತಾಂಶ ದಾಖಲು ಮಾಡುವುದರೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಎರಡನೇ ಸ್ಥಾನ ಮಾಗಡಿಗೆ ದೊರೆತಿದ್ದು, ಶೇ.94.43, ಮೂರನೇ ಸ್ಥಾನ ರಾಮನಗರಕ್ಕೆ ಲಭಿಸಿದ್ದು ಶೇ.93.19 ಹಾಗೂ ಕೊನೆಯ ಸ್ಥಾನ ಕನಕಪುರಕ್ಕೆ ದೊರೆತಿದ್ದು, ಶೇ. 89.09 ಲಿತಾಂಶ ದಾಖಲಿಸಿದೆ.
ಹೆಣ್ಮಕ್ಳೇ ಸ್ಟ್ರಾಂಗು ಗುರು
ಜಿಲ್ಲೆಯ ಲಿತಾಂಶದಲ್ಲಿ ಈ ಬಾರಿಯೂ ಹೆಣ್ಣು ಮಕ್ಕಳೇ ಪ್ರಾಬಲ್ಯ ಮೆರೆದಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ ಒಟ್ಟು 5,602 ಗಂಡು ಮಕ್ಕಳು ಪರೀಕ್ಷೆ ಬರೆದಿದ್ದರು. ಆದರೆ, ಇವರದಲ್ಲಿ ಉತ್ತೀರ್ಣರಾದವರು 5,088 ಮಂದಿ ಮಾತ್ರ. ಶೇ.90.53 ಲಿತಾಂಶ ಬಂದಿದೆ. ಆದರೆ, ಪರೀಕ್ಷೆ ಬರೆದ ಒಟ್ಟು 5600 ಮಂದಿ ವಿದ್ಯಾರ್ಥಿನಿಯರ ಪೈಕಿ 5343 ಮಂದಿ ಪಾಸಾಗಿ ಶೇ. 95.41 ಫಲಿತಾಂಶ ದಾಖಲು ಮಾಡಿದ್ದಾರೆ.
ಸರ್ಕಾರಿ ಶಾಲೆ ಮಕ್ಕಳೂ ಮುಂದೆ
ಲಿತಾಂಶದಲ್ಲಿ ಪ್ರತಿ ವರ್ಷ ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪಾಸಾಗುತ್ತಿದ್ದರು. ಆದರೆ, ಈ ಬಾರಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗುವ ಮೂಲಕ ಹೆಮ್ಮೆ ತಂದಿದ್ದಾರೆ. ಅನುದಾನ ರಹಿತ ಶಾಲೆಯ 3,878 ಮಂದಿ ವಿದ್ಯಾರ್ಥಿಗಳಲ್ಲಿ 3,631 ಮಂದಿ ಪಾಸಾಗಿದ್ದು, ಶೇ.93.63 ಲಿತಾಂಶ ದಾಖಲು ಮಾಡಿದ್ದಾರೆ. ಅನುದಾನಿತ ಶಾಲೆಯ 2,616 ವಿದ್ಯಾರ್ಥಿಗಳಲ್ಲಿ ಶೇ.91.36 ಲಿತಾಂಶದೊಂದಿಗೆ 2,390 ಮಂದಿ ಪಾಸಾಗಿದ್ದಾರೆ. ಸರ್ಕಾರಿ ಶಾಲೆಯ 4,726 ಮಂದಿಯಲ್ಲಿ 4,410 ಮಂದಿ ಪಾಸಾಗಿ ಶೇ. 93.31 ಲಿತಾಂಶ ಪಡೆದುಕೊಂಡಿದ್ದಾರೆ. ಇನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದ 5,697 ವಿದ್ಯಾರ್ಥಿಗಳಲ್ಲಿ 5,370 ಮಂದಿ ವಿದ್ಯಾರ್ಥಿಗಳು ಪಾಸಾಗಿ ಶೇ.94.26, ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದ 5,439 ವಿದ್ಯಾರ್ಥಿಗಳಲ್ಲಿ 4,990 ಮಂದಿ ಉತ್ತೀರ್ಣರಾಗಿ ಶೇ.91.74 ಮತ್ತು ಉರ್ದು ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದ 84 ವಿದ್ಯಾರ್ಥಿಗಳಲ್ಲಿ 71 ವಿದ್ಯಾರ್ಥಿಗಳು ಪಾಸಾಗಿ ಶೇ.84.5 ಫಲಿತಾಂಶ ದಾಖಲು ಮಾಡಿದ್ದಾರೆ.
ಟಾಪ್ ತ್ರಿ ವಿದ್ಯಾರ್ಥಿಗಳು
ಜಿಲ್ಲೆಯ ಲಿತಾಂಶದಲ್ಲಿ ಅತಿ ಹೆಚ್ಚು ಅಂಕ ಪಡೆದ ಮೊದಲ ಮೂರು ವಿದ್ಯಾರ್ಥಿಗಳಲ್ಲಿ ಮೊದಲ ಎರಡು ಸ್ಥಾನ ಮಾಗಡಿ ಹಾಗೂ ಮೂರನೇ ಸ್ಥಾನವನ್ನು ಮಾಗಡಿ ಮತ್ತು ರಾಮನಗರ ವಿದ್ಯಾರ್ಥಿ ಹಂಚಿಕೊಂಡಿದ್ದಾರೆ.
ಮಾಗಡಿಯ ವಾಸವಿ ವಿದ್ಯಾನಿಕೇತನ ಶಾಲೆಯ ಸೃಷ್ಟಿ ಎಂ.ಎಸ್. 622 ಅಂಕಗಳ್ನು ಪಡೆದುಕೊಂಡು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದರೆ, ಅದೇ ತಾಲೂಕಿನ ಕಂಬದ ಕಲ್ಲು ಎಣ್ಣೆಗೆರೆಯ ಸ್ಪೆಕ್ಟ್ರಾ ಆಂಗ್ಲ ಮಾಧ್ಯಮ ಶಾಲೆಯ ದೀಕ್ಷಿತ್ ವೈ.ಕೆ. 621 ಅಂಕಗಳಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕುದೂರಿನ ಗುರುಕುಲ ಪ್ರೌಢಶಾಲೆಯ ಅಮೃತ್ ಗೌಡ ಮತ್ತು ರಾಮನಗರ ಆನುಮಾನಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿಶ್ವಾಸ್ ಗೌಡ 619 ಅಂಕ ಗಳಿಸುವ ಮೂಲಕ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ.
ಶತಕ ದಾಖಲಿಸಿದ ಶಾಲೆಗಳು
ಜಿಲ್ಲೆಯಲ್ಲಿ ಈ ಬಾರಿ ಶೇ.100 ಲಿತಾಂಶ ದಾಖಲು ಮಾಡಿದ ಶಾಲೆಗಳು ಸಂಖ್ಯೆ 100ರನ್ನು ದಾಟಿವೆ. 61 ಸರ್ಕಾರಿ ಶಾಲೆಗಳು, 15 ಅನುದಾನಿತ ಶಾಲೆಗಳು, 37 ಖಾಸಗಿ ಶಾಲೆಗಳು ಸೇರಿ ಒಟ್ಟಾರೆ 113 ಶಾಲೆಗಳು ಶೇ.100 ಲಿತಾಂಶ ದಾಖಲು ಮಾಡಿವೆ. ಇದರ ಜತೆಗೆ ಗ್ರಾಮೀಣ ಭಾಗದ ಶೇ.93.80ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದರೆ, ನಗರ ಪ್ರದೇಶದಲ್ಲಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳಲ್ಲಿ ಶೇ.90.89 ಪಾಸಾಗಿದ್ದಾರೆ.
ತಾಲೂಕು ಬರೆದವರು ಪಾಸಾದವರು ಶೇ
ಚನ್ನಪಟ್ಟಣ 2678 2545 95.03
ಈ ಬಾರಿ ಜಿಲ್ಲೆಗೆ ಉತ್ತಮ ಲಿತಾಂಶ ಬಂದಿದೆ. ಕಳೆದ ಬಾರಿಗಿಂತ ಶೇ.12.81ರಷ್ಟು ಹೆಚ್ಚಳವಾಗಿದ್ದು, ಇದಕ್ಕೆ ಜಿಲ್ಲಾಧಿಕಾರಿ, ಸಿಇಒ ಆದಿಯಾಗಿ ಜನಪ್ರತಿನಿಧಿಗಳು ಸಹಕಾರದಿಂದ ಇದು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಲಿತಾಂಶ ಮತ್ತಷ್ಟು ಸುಧಾರಿಸಲು ಶ್ರಮಿಸಲಾಗುವುದು.
ಡಿಡಿಪಿಐ, ಶಾಲಾ ಶಿಕ್ಷಣ ಇಲಾಖೆ, ಬೆಂ. ದಕ್ಷಿಣ ಜಿಲ್ಲೆ