ಪೈಪ್ಲೈನ್ ಮೂಲಕ ಮನೆಗೆ ಗ್ಯಾಸ್ ಕಲೆನ್ ನೀಡಿರುವುದು.
ಬಿಡದಿ: ಮಧ್ಯಪ್ರಾಚ್ಯದಲ್ಲಿನ ಯುದ್ಧದ ಬಿಸಿ ತೈಲ, ಪ್ರಮುಖವಾಗಿ ಗ್ಯಾಸ್ ಮೇಲೆ ತಟ್ಟಿ ಸಿಲಿಂಡರ್ಗಳಿಗಾಗಿ ಆಯಾ ವಿತರಕ ಏಜೆನ್ಸಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಆದರೆ ಬಿಡದಿ ಭಾಗದ ಹಲವು ಗ್ರಾಮಗಳ ಜನರು "ನಮ್ಮೂರಲ್ಲಿ ಸಮಸ್ಯೆ ಇಲ್ಲ. ಸಿಲಿಂಡರ್ ಜಂಜಾಟದಿಂದ ಮುಕ್ತವಾಗಿ ದಿನದ 24 ಗಂಟೆಯೂ ಗ್ಯಾಸ್ ಉಪಯೋಗಿಸುತ್ತಿದ್ದೇವೆ' ಎನ್ನುತ್ತಾರೆ.
ಹೌದು... ಬಿಡದಿ ಭಾಗದ 10 ಗ್ರಾಮಗಳು ಸಿಲಿಂಡರ್ಗಳನ್ನು ಉಪಯೋಗಿಸುವುದನ್ನು ಬಿಟ್ಟು ಕುಡಿಯುವ ನೀರನ್ನು ಪೈಪ್ ಮೂಲಕ ಪಡೆಯುವ ಮಾದರಿಯಲ್ಲಿ ಗ್ಯಾಸ್ಅನ್ನು ಪೈಪ್ಲೈನ್ ಮೂಲಕ ಉಪಯೋಗಿಸುತ್ತಿದ್ದಾರೆ. ಮನೆ ಮನೆಗೆ ಗ್ಯಾಸ್ ಪೈಪ್ಲೈನ್ ಮಾಡಿ ಗೈಲ್ ಇಂಡಿಯಾ ಲಿಮಿಟೆಡ್ ಸಂಸ್ಥೆಯ ಸಹಭಾಗಿತ್ವದಲ್ಲಿ ಮಹಾರಾಷ್ಟ್ರ ನ್ಯಾಚುರಲ್ ಗ್ಯಾಸ್ ಲಿ. ಸಂಸ್ಥೆ ನಿರಂತರವಾಗಿ ಗ್ಯಾಸ್ ಪೂರೈಸುತ್ತಿದೆ.
ಮಹಾರಾಷ್ಟ್ರ ನ್ಯಾಚುರಲ್ ಗ್ಯಾಸ್ ಲಿ.ಕಂಪನಿ ಬಿಡದಿ ಭಾಗದ ಹಲವು ಕಡೆ ಅಂಡರ್ಗ್ಯಾಸ್ ಪೈಪ್ಲೈನ್ ಮಾಡಿ ಮನೆ ಮನೆಗೆ ಸಂಪರ್ಕ ನೀಡಿದೆ. ಛತ್ರ, ಗೊಲ್ಲಹಳ್ಳಿ, ಬಾನಂದೂರು, ಇಟ್ಟಮಾಡು, ರಾಮನಹಳ್ಳಿ, ಅಬ್ಬನಕುಪ್ಪೆ, ವೃಷಭಾವತಿಪುರ, ಜೋಗರದೊಡ್ಡಿ ಗ್ರಾಮಗಳಲ್ಲಿ ಪೈಪ್ಲೈನ್ ಮೂಲಕ ಯಾವುದೇ ಅಡೆ ತಡೆ ಇಲ್ಲದೆ ಮನೆ ಮನೆಗೆ ಗ್ಯಾಸ್ ಸಂಪರ್ಕ ನೀಡಲಾಗಿದೆ. ಸಂಪರ್ಕ ಪಡೆದವರು ಸಿಲಿಂಡರ್ ಬುಕ್ಕಿಂಗ್ ಮಾಡುವುದನ್ನು ಬಿಟ್ಟು ಹಲವು ತಿಂಗಳಾಗಿವೆ. ದಿನದ 24 ತಾಸು ಗ್ಯಾಸ್ ಪೂರೈಕೆ ಆಗುತ್ತಿದೆ. ಇಲ್ಲಿಯವರೆಗೂ ಗ್ಯಾಸ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ.
ಗೈಲ್ ಇಂಡಿಯಾ ಲಿಮಿಟೆಡ್ ಟಕ ಬಿಡದಿಯ ಬೈರಮಂಗಲ ಕ್ರಾಸ್ನ ಕೂಗಳತೆ ದೂರದಲ್ಲಿ ಅನಿಲ ಸ್ಟೋರೇಜ್ ಪ್ಲಾಂಟ್ ಹೊಂದಿದೆ. ಪಿಎನ್ಜಿ ಗ್ಯಾಸ್ ಇದಾಗಿದ್ದು, ನಮ್ಮ ದೇಶದಲ್ಲೇ ಉತ್ಪಾದನೆಯಾಗುವ ನೈಸರ್ಗಿಕ ಅನಿಲ ಇದಾಗಿದೆ. ಟಕದಿಂದ ಬಿಡದಿ ಕೈಗಾರಿಕಾ ಪ್ರದೇಶದ ಹಲವು ಕಾರ್ಖಾನೆಗಳಿಗೆ ಸೇರಿದಂತೆ ಬಿಡದಿ, ರಾಮನಗರ ಹಾಗೂ ಚನ್ನಪಟ್ಟಣದ ಹಲವು ಭಾಗಗಳಿಗೆ ನಿರಂತರವಾಗಿ ಗ್ಯಾಸ್ ಪೂರೈಕೆಯಾಗುತ್ತಿದೆ.
ಬಿಡದಿ ಭಾಗದ ಹಲವು ಗ್ರಾಮಗಳಲ್ಲಿ ಪೈಪ್ಲೈನ್ ಮೂಲಕ ಅನಿಲ ಪೂರೈಸಲಾಗುತ್ತಿದೆ. ಕೆಲ ಗ್ರಾಮಗಳಲ್ಲಿ ಪೈಪ್ಲೈನ್ ಗ್ಯಾಸ್ ಸಂಪರ್ಕ ಪಡೆಯದವರು ಸಿಲಿಂಡರ್ಗಳು ಸಿಗದೆ ಪೈಪ್ಲೈನ್ ಗ್ಯಾಸ್ ಸಂಪರ್ಕ ಪಡೆಯಲು ಗೇಲ್ ಗ್ಯಾಸ್ ಕಂಪನಿಯವರಿಗೆ ಕರೆ ಮಾಡುತ್ತಿದ್ದಾರೆ. ತುರ್ತಾಗಿ ಬಂದು ಸಂಪರ್ಕ ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ. ಇನ್ನುಳಿದಂತೆ ಹಲವು ವಾರ್ಡ್ಗಳಲ್ಲಿ ಗ್ಯಾಸ್ ಪೈಪ್ಲೈನ್ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ.
2 ಸಾವಿರಕ್ಕೂ ಹೆಚ್ಚು ಸಂಪರ್ಕ
ಮಹಾರಾಷ್ಟ್ರ ನ್ಯಾಚುರಲ್ ಗ್ಯಾಸ್ ಲಿಮಿಟೆಡ್ನಿಂದ ಬಿಡದಿ ಭಾಗದ ಹಲವು ಗ್ರಾಮಗಳಲ್ಲಿ 1,500 ಮನೆಗಳಿಗೆ ಈಗಾಗಲೇ ಸಂಪರ್ಕ ನೀಡಿದೆ. ರಾಮನಗರದಲ್ಲಿ 500 ಮನೆಗಳು ಹಾಗೂ ಚನ್ನಪಟ್ಟಣದಲ್ಲಿ 1,500 ಮನೆಗಳಿಗೆ ಸಂಪರ್ಕ ನೀಡಲಾಗಿದೆ. ಕೆಲವು ಕಡೆ ಪೈಪ್ಲೈನ್ ಕಾಮಗಾರಿ ಮುಗಿದಿದ್ದು, ಮನೆಗಳಿಗೆ ಕನೆನ್ ಕೊಡುವ ಹಂತದಲ್ಲಿವೆ.
ಬಾನಂದೂರು ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗ್ಯಾಸ್ ಪೈಪ್ಲೈನ್ ಕಾಮಗಾರಿ ಮುಗಿದು ಗ್ಯಾಸ್ ಸಂಪರ್ಕ ಪಡೆದವರಿಗೆ ಗ್ಯಾಸ್ ಸಂಪರ್ಕದ ಬಿಸಿ ತಟ್ಟಿಲ್ಲ. ಆದರೆ ಗ್ಯಾಸ್ ಸಂಪರ್ಕ ಪಡೆಯದವರು ಸಿಲಿಂಡರ್ ಬುಕ್ ಮಾಡಿ ತರಿಸುಕೊಳ್ಳುತ್ತಿದ್ದರು. ಇದೀಗ ಅವರಿಗೆ ಸಮಸ್ಯೆ ಉಂಟಾಗಿದೆ. ಆಯಾ ಕಂಪನಿಗಳ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಆನ್ಲೈನ್ನಲ್ಲಿ ಹರಸಹಾಸ ಪಡುತ್ತಿದ್ದಾರೆ. ಯಾವ ಸಮಯದಲ್ಲೂ ಆನ್ಲೈನ್ನಲ್ಲಿ ಬುಕ್ ಆಗುತ್ತಿಲ್ಲ. ಹಾಗಾಗಿ ಗ್ಯಾಸ್ ಪೈಪ್ಲೈನ್ ಸಂಪರ್ಕ ಪಡೆದವರನ್ನು ನೋಡಿ ನಾವೂ ಪೈಪ್ಲೈನ್ ಸಂಪರ್ಕ ಪಡೆಯಬಹುದಿತ್ತು ಎಂದು ಪೇಚಾಡುತ್ತಿದ್ದಾರೆ.
ನಮ್ಮ ಗ್ರಾಮದಲ್ಲಿ ಮನೆ ಮನೆಗೆ ಗ್ಯಾಸ್ಪೈಪ್ಲೈನ್ ಮೂಲಕ ಸಂಪರ್ಕ ಕೊಡಲಾಗಿದೆ. ಸಾಕಷ್ಟು ಮನೆಯವರು ಸಂಪರ್ಕ ಪಡೆದುಕೊಂಡಿದ್ದಾರೆ. ನಾವು ಅನಿವಾರ್ಯ ಕಾರಣಗಳಿಂದ ಪೈಪ್ಲೈನ್ ಸಂಪರ್ಕ ಪಡೆಯದೆ ಸಿಲಿಂಡರ್ ಬಳಸುತ್ತಿದ್ದೇವೆ. ಇದೀಗ ಯುದ್ಧದ ಬಿಸಿ ನಮ್ಮ ಸಿಲಿಂಡರ್ ಬುಕ್ಕಿಂಗ್ ಮೇಲೆ ತಟ್ಟಿದೆ. ಈ ಹಿಂದೆ ಬುಕ್ ಮಾಡಿದ 2 ದಿನದಲ್ಲಿ ಸಿಲಿಂಡರ್ ಮನೆ ಬಳಿ ಬರುತಿತ್ತು. ಆದರೆ ಇದೀಗ ಬುಕ್ ಮಾಡಲು ಆಗುತ್ತಿಲ್ಲ. ಆನ್ಲೈನ್ನಲ್ಲಿ ಬುಕ್ ಮಾಡಲು ಎಷ್ಟೇ ಪ್ರಯತ್ನ ಮಾಡುತ್ತಿದ್ದರೂ ಬುಕ್ಕಿಂಗ್ ತಗೆದುಕೊಳ್ಳುತ್ತಿಲ್ಲ.