ಹೆಗ್ಗಡಗೆರೆ ಗ್ರಾಮದ ಬಳಿ ಡಾಂಬರು ಮಿಕ್ಸಿಂಗ್​ ಟಕದಿಂದ ಹೊರಬರುತ್ತಿರುವ ಹೊಗೆ 
ಬೆಂಗಳೂರು ದಕ್ಷಿಣ

ಜೀವಕ್ಕೆ ಸಂಚಕಾರ ಟಾರ್​ ಮಿಶ್ರಿತ ಧೂಳು

ಬಿಡದಿ: ಅವೈಾನಿಕ ಡಾಂಬರೀಕರಣ ಟಕಗಳು ಹಾಗೂ ಜೆಲ್ಲಿ ಕ್ರಷರ್​ಗಳಿಂದ ಏಳುವ ಧೂಳು ಬೆಳೆನಾಶಕ್ಕೆ ಕಾರಣವಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ.
ಹೌದು... ಬಿಡದಿ ಪುರಸಭೆ ವ್ಯಾಪ್ತಿಯ 23ನೇ ವಾರ್ಡ್​ ಹೆಗ್ಗಡಗೆರೆ ಗ್ರಾಮದಂಚಿನಲ್ಲಿ ಡಾಂಬರ್​ ಮಿಕ್ಸರ್​ ಟಕಗಳು ಹಾಗೂ ಜೆಲ್ಲಿ ಕ್ರಷರ್​ಗಳು ಕಾರ್ಯನಿರ್ವಹಿಸುತ್ತಿವೆ. ಈ ಟಕಗಳಿಂದ ಹೊರ ಬರುವ ಧೂಳಿನಿಂದಾಗಿ ರೈತರ ಬೆಳೆಗಳು ನಾಶವಾಗುತ್ತಿವೆ. ಜಾನುವಾರು ಮೇವಿಗೂ ಸಂಚಕಾರ ಉಂಟಾಗಿದೆ.
ಬೆಳೆಗಳ ಮೇಲೆ ಧೂಳು
ರೈತರ ಕೆಲ ಜಮೀನುಗಳನ್ನು ಗುತ್ತಿಗೆ ಪಡೆದು ಡಾಂಬರೀಕರಣ ಟಕಗಳನ್ನು ಸ್ಥಾಪಿಸಲಾಗಿದೆ. ಈ ಟಕಗಳು ಟಾರ್​ ಮಿಕ್ಸ್​ ಮಾಡುವ ಸಂದರ್ಭದಲ್ಲಿ ಭಾರಿ ಧೂಳು ಹೊರ ಬರುತ್ತದೆ. ಆ ಧೂಳು ಟಕಗಳ ಅಕ್ಕಪಕ್ಕದ ಜಮೀನಿನಲ್ಲಿನ ಬೆಳೆಗಳ ಮೇಲೆ ಬಂದು ಕುಳಿತುಕೊಳ್ಳುತ್ತಿದೆ. ಧೂಳಿನ ಜತೆಗೆ ಟಾರ್​ನ ಕಣಗಳೂ ಬೆಳೆಗಳ ಮೇಲೆ ಬೀಳುವ ಪರಿಣಾಮ ಬೆಳೆಗಳು ಒಣಗುತ್ತಿವೆ. ಬೇಬಿಕಾರ್ನ್​ ಜೋಳವನ್ನು ಜಾನುವಾರುಗಳು ಸಹ ಮೇಯುತ್ತಿಲ್ಲ. ಪರಿಣಾಮ ಹೈನುಗಾರರು ರಾಸುಗಳ ಆಹಾರಕ್ಕೆ ಪರದಾಡುತ್ತಿದ್ದಾರೆ.
4 ಕಗಳ ನಿರ್ಮಾಣ
ಹೆಗ್ಗಡಗೆರೆ ಸರ್ವೇ ನಂ. 12, 12/6, 12/9ರಲ್ಲಿನ ಕೃಷಿ ಜಮೀನನ್ನು ಬಾಡಿಗೆ ಪಡೆದು 4 ಟಕಗಳನ್ನು ನಿರ್ಮಿಸಲಾಗಿದೆ. ಸದ್ಯ ನಾಲ್ಕೂ ಟಕಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಅವರು ಕಾನೂನಿನ ಮಾರ್ಗಸೂಚಿಗಳನ್ನು ಅನುಸರಿಸದೆ ಕಾರ್ಯನಿರ್ವಹಿಸುತ್ತಿವೆ ಎಂದು ಈ ಹಿಂದೆ ಗ್ರಾಮಸ್ಥರು ಜಿಲ್ಲಾಧಿಕಾರಿ ಮತ್ತು ಸಂಬಂಧಿತ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಸ್ಥಳಿಯರ ದೂರಿನ ಮೇರೆಗೆ ಕಳೆದ ವರ್ಷ ಎರಡು ಡಾಂಬರೀಕರಣ ಟಕಗಳಿಗೆ ಜಿಲ್ಲಾಡಳಿತ ಬೀಗ ಜಡಿದಿತ್ತು. ಇನ್ನುಳಿದ 2 ಟಕಗಳು ರಾಜಕೀಯ ಪ್ರಭಾವ ಬಳಸಿ ಅಧಿಕಾರಿಗಳ ಮೇಲೆ ಒತ್ತಡ ತಂದು ಕಾರ್ಯನಿರ್ವಹಿಸುತ್ತಿವೆ ಎಂದು ಸ್ಥಳಿಯರು ಆರೋಪಿಸುತ್ತಿದ್ದಾರೆ.
ಆರೋಗ್ಯದ ಮೇಲೆ ದುಷ್ಪರಿಣಾಮ
ಡಾಂಬರೀಕರಣ ಟಕಗಳಿಂದ ಒಂದು ಕಡೆ ಬೆಳೆಗಳು ನಾಶವಾಗುತ್ತಿವೆ. ತರಕಾರಿಗಳಂತೂ ಕೊಳೆತು ಹೋಗುತ್ತಿವೆ. ಇದು ಒಂದು ಕಡೆಯಾದರೆ ಮತ್ತೊಂದೆಡೆ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಟಾರ್​ ಮಿಶ್ರಿತ ಧೂಳು ಗಾಳಿಯಲ್ಲಿ ಹರಿದಾಡುತ್ತಿರುವುದರಿಂದ ಜನ ಧೂಳನ್ನು ಸೇವಿಸಬೇಕಿದೆ. ಪರಿಣಾಮ ಜನರಿಗೆ ಅಸ್ತಮಾ, ಧಮ್ಮು, ಕೆಮ್ಮು ಸೇರಿದಂತೆ ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಳ್ಳುತ್ತಿವೆ.
ಶಬ್ದ ಮಾಲಿನ್ಯ
ಗ್ರಾಮದ ತುಸು ದೂರದಲ್ಲಿ ಕಲ್ಲು ಬಂಡೆಗಳಿದ್ದು, ಕಲ್ಲುಗಣಿಗಾರಿಕೆಯೂ ಚಾಲ್ತಿಯಲ್ಲಿದೆ. ಕಲ್ಲು ಬಂಡೆಗಳನ್ನು ಸ್ಫೋಟಿಸಲು ಸ್ಫೋಟಕಗಳನ್ನು ಬಳಸಲಾಗುತ್ತಿದೆ. ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಬಂಡೆಗಳನ್ನು ಸಿಡಿಸುವ ಕಾರಣ ಭಯಾನಕ ಶಬ್ದ ಕೇಳಿಬರುತ್ತದೆ. ಒಂದು ಣ ಮನೆಗಳೇ ಅದುರಿದ ಅನುಭವವಾಗುತ್ತಿದೆ.
"

ಗ್ರಾಮದ ಕೂಗಳತೆ ದೂರದಲ್ಲಿ ಡಾಂಬರೀಕರಣ ಟಕಗಳು ಯಾವುದೇ ಕಾನೂನು ಅನುಸರಿಸದೇ ಕಾರ್ಯನಿರ್ವಹಿಸುತ್ತಿವೆ. ಟಕಗಳಿಂದ ಹೊರಬರುವ ಟಾರ್​ ಮಿಶ್ರಿತ ಧೂಳು ಬೆಳೆಗಳ ಮೇಲೆ ಕುಳಿತುಕೊಳ್ಳುತ್ತಿದ್ದು, ಬೆಳೆಗಳು ನಾಶವಾಗುತ್ತಿವೆ. ನಮ್ಮ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಈ ಬಗ್ಗೆ ಹೋರಾಟ ಮಾಡಿ ಕೆಲ ಟಕಗಳಿಗೆ ಬೀಗ ಹಾಕಿಸಿದ್ದೆವು. ಆದರೆ ಎರಡು ಟಕಗಳ ಮಾಲೀಕರು ಪ್ರಭಾವ ಬೀರಿ ಟಕಗಳನ್ನು ಮುಂದುರೆಸಿದ್ದಾರೆ. ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಸಂಬಂಧಿತ ಅಧಿಕಾರಿಗಳು ಟಕಗಳ ವಿರುದ್ಧ ಕ್ರಮ ಜರುಗಿಸಬೇಕಿದೆ.