ಚನ್ನಪಟ್ಟಣದ ಪ್ರವಾಸಿ ಮಂದಿರದಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಕರಪತ್ರ ಬಿಡುಗಡೆ ಮಾಡಲಾಯಿತು. ಅಧ್ಯ ನವಿಲೇಶ್​, ಸಮುದಾಯದ ಮುಖಂಡರಾದ ಶಿವಬೀರಯ್ಯ, ಕೆರೆಮೇಗಳದೊಡ್ಡಿ ಪೈಲ್ವಾನ್​ ಅಪ್ಪಾಸ್ವಾಮಿ, ತೂಬಿನಕೆರೆ ದೊಡ್ಡಹುಚ್ಚಯ್ಯ, ನಿವೃತ್ತ ಶಿಕ ರಾಮಕೃಷ್ಣಪ್ಪ, ನಿವೃತ್ತ ಪೊಲೀಸ್​ ಕೋಟೆ ನಾರಾಯಣ್​ ಇದ್ದರು. 
ಬೆಂಗಳೂರು ದಕ್ಷಿಣ

ನಾಳೆ ಕುರುಬ ಸಮುದಾಯದಿಂದ ಪ್ರತಿಭಾ ಪುರಸ್ಕಾರ

ಚನ್ನಪಟ್ಟಣ: ಕುರುಬ ಸಮುದಾಯದ ವಿದ್ಯಾರ್ಥಿಗಳ ಶಿಣಕ್ಕೆ ಪೋತ್ಸಾಹ ನೀಡುವ ನಿಟ್ಟಿನಲ್ಲಿ ತಾಲೂಕಿನ ಡಾ. ಯತೀಂದ್ರ ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ನ.18ರಂದು ನಗರದ ಶತಮಾನೋತ್ಸವ ಭವನದಲ್ಲಿ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಆಯೋಜಿಸಲಾಗಿದೆ ಎಂದು ಡಾ. ಯತೀಂದ್ರ ಸಿದ್ದರಾಮಯ್ಯ ಅಭಿಮಾನಿ ಬಳಗದ ಅಧ್ಯ ನವಿಲೇಶ್​ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುರುಬ ಸಮುದಾಯದ ಮಕ್ಕಳ ಶಿಣಕ್ಕೆ ಹೆಚ್ಚು ಉತ್ತೇಜನ ನೀಡುವ ಸಲುವಾಗಿ 2024&25ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಪಡೆದಿರುವ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲೆಯ 80ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಗುತ್ತಿದೆ. ಸಮುದಾಯದಿಂದ ಎಲ್ಲರ ಸಹಕಾರ ಪಡೆದು ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಡಾ.ಯತೀಂದ್ರ ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ಪ್ರತಿಭಾ ಪುರಸ್ಕಾರ ನೀಡಿ ಪೋತ್ಸಾಹಿಸುತ್ತೇವೆ ಎಂದರು.
ಸಮುದಾಯದ ಯುವ ಮುಖಂಡ ವಿ. ವಿವೇಕ್​ ವೆಂಕಟೇಶ್​ ಮಾತನಾಡಿ, ಮಕ್ಕಳ ಶಿಣಕ್ಕೆ ಪೋತ್ಸಾಹ ನೀಡಲು ಆಯೋಜಿಸುತ್ತಿರುವ ಸಮಾರಂಭದ ಉದ್ಘಾಟನೆಯನ್ನು ವಿಧಾನ ಪರಿಷತ್​ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ನೆರವೇರಿಸಲಿದ್ದು, ಶಾಸಕ ಸಿ.ಪಿ.ಯೋಗೇಶ್ವರ್​ ಅಧ್ಯತೆ ವಹಿಸಲಿದ್ದಾರೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯ ಎಚ್​.ಎಂ. ರೇವಣ್ಣ, ಕೆಆರ್​ ನಗರ ೇತ್ರದ ಶಾಸಕ ಡಿ. ರವಿಶಂಕರ್​, ಡಾ. ರಾಮ ಮನೋಹರ ಲೋಹಿಯ ವಿಚಾರ ವೇದಿಕೆ ಅಧ್ಯ ಮಳವಳ್ಳಿ ಬಿ.ಎಸ್​. ಶಿವಣ್ಣ, ಕುರುಬರ ಸಂದ ಮಾಜಿ ರಾಜ್ಯ ಅಧ್ಯ ಬಿ. ಸುಬ್ರಹ್ಮಣ್ಯ, ಕರ್ನಾಟಕ ಹಿಂದುಳಿದ ವರ್ಗದ ಒಕ್ಕೂಟದ ರಾಜ್ಯ ಅಧ್ಯಕ್ಷ ಕೆ. ರಾಮಚಂದ್ರಪ್ಪ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳ ಕುರುಬ ಸಂದ ಅಧ್ಯರು, ಸಮುದಾಯದ ಮುಖಂಡರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ವಂದಾರಗುಪ್ಪೆ ಗ್ರಾಪಂ ಅಧ್ಯ ಸುರೇಶ್​, ಸದಸ್ಯ ಮಲ್ಲೆಶ್​, ಕೆರೆಮೆಗಳದೊಡ್ಡಿ ಹೋಟೆಲ್​ ಮನೋಜ್​, ಪತ್ರಕರ್ತ ಸಿ.ಎನ್​. ವೆಂಕಟೇಶ್​ ಇತರರು ಇದ್ದರು.