ಕುದೂರು ಹೋಬಳಿಯ ಸುಗ್ಗನಹಳ್ಳಿ ಶ್ರೀಲ್ಮನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು.
ಕುದೂರು: ಹೋಬಳಿಯ ಪುರಾಣ ಪ್ರಸಿದ್ಧ ಸುಗ್ಗನಹಳ್ಳಿ ಶ್ರೀ ಲ್ಮನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ವಿಶೇಷ ಹೂವಿನಿಂದ ಅಲಂಕೃತಗೊಂಡ ಸ್ವಾಮಿಯ ಉತ್ಸವ ಮೂರ್ತಿಯನ್ನು ಬೆಳಗ್ಗೆ 11 ಗಂಟೆಗೆ ರಥೋತ್ಸವಕ್ಕೆ ಏರುತ್ತಿದ್ದಂತೆ ಭಕ್ತರ ಹಷೋರ್ದ್ಘಾರ ಮುಗಿಲು ಮುಟ್ಟಿತ್ತು. ತಹಸೀಲ್ದಾರ್ ಶರತ್ಕುಮಾರ್ ರಥಕ್ಕೆ ಪ್ರಥಮ ಪೂಜೆ ಸಲ್ಲಿಸಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು. ಶಾಸಕ ಎಚ್.ಸಿ.ಬಾಲಕೃಷ್ಣ, ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಅಧ್ಯ ಎಚ್.ಎಂ. ರೇವಣ್ಣ, ಮಾಜಿ ಶಾಸಕ ಎ.ಮಂಜುನಾಥ್, ವಿಶೇಷ ಪೂಜೆ ಸಲ್ಲಿಸುವ ಮೂಲಕ ರಥ ಎಳೆದರು.
ರಥಕ್ಕೆ ಭಕ್ತರು ಹಣ್ಣು& ಧವನ ಅರ್ಪಸಿ ಭಕ್ತಿ ಭಾವ ಮೆರೆದರು. ಅಲಂಕೃತ ದೇವರನ್ನು ಮಂಗಳವಾಧ್ಯಗಳೊಂದಿಗೆ ದೇವಾಲಯದ ಸುತ್ತ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಅರವಂಟಿಕೆಗಳಲ್ಲಿ ಭಕ್ತರು ಪೂಜೆ ಸಲ್ಲಿಸಿ ಮಜ್ಜಿಗೆ ಹೆಸರುಬೇಳೆ, ಪಾನಕ ವಿತರಿಸಿ ಭಕ್ತರ ದಾಹವನ್ನು ನೀಗಿಸಿದರು. ರಥೋತ್ಸವ ಪ್ರಾರಂಭದಲ್ಲಿ ಗರುಡ ಪ ರಥದ ಸುತ್ತ ಪ್ರದಣೆ ಹಾಕಿದ ನಂತರವಷ್ಟೇ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಪಾರುಪತ್ತೆದ್ದಾರ್ ಸಂಪತ್ ಕುಮಾರ್, ನರಸಿಂಹ ಭಟ್ಟರು, ಗೋಪಾಲಭಟ್ಟರು, ಶೇಷಾದ್ರಿ ಅಯ್ಯಂಗಾರ್, ತಂಡದವರಿಂದ ವಿಧಿವತ್ತಾಗಿ ಧಾರ್ಮಿಕ ಕೈಂಕರ್ಯಗಳು ಹಾಗೂ ಉತ್ಸವಗಳು ಅದ್ದೂರಿಯಾಗಿ ನಡೆದವು.
ರಥೋತ್ಸವದಲ್ಲಿ ಕುದೂರು, ನೆಲಮಂಗಲ, ಬೆಂಗಳೂರು, ಮಾಗಡಿ, ಕುಣಿಗಲ್, ತುಮಕೂರು ಹಾಗೂ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು. ರಥೋತ್ಸವದ ಆಂಗವಾಗಿ ೇತ್ರದಲ್ಲಿ ವಿಶೇಷ ಹೂವಿನ ಅಲಂಕಾರ ಏರ್ಪಾಟು ಮಾಡಲಾಗಿತ್ತು. ಸ್ವಾಮಿಯ ದರ್ಶನಕ್ಕೆ ಭಕ್ತರು ಸಾಲುಗಟ್ಟಿ ನಿಂತು ಸ್ವಾಮಿಯ ದರ್ಶನ ಪಡೆದರು.
ಭಕ್ತರೆಲ್ಲರಿಗೂ ಪ್ರಸಾದದ ವ್ಯವಸ್ಥೆಯಾಗಿತ್ತು. ಇದೇ ಸಂದರ್ಭದಲ್ಲಿ ವಿವಿಧ ಸಮಾಜದವರಿಂದ ಹಾಗೂ ಶ್ರೀ ಲ್ಮನರಸಿಂಹಸ್ವಾಮಿ ದೇವಾಸ್ಥಾನ ಟ್ರಸ್ಟ್ನಿಂದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಿದ್ದರು. ಜಾತ್ರೆಯಲ್ಲಿ ಕಡ್ಲೆಪುರಿ, ಮಿಠಾಯಿ, ಮಕ್ಕಳ ಆಟಿಕೆ, ಫ್ಯಾನ್ಸಿ ಅಂಗಡಿ ತೆರೆಯಲಾಗಿದ್ದು, ಜಾತ್ರೆಗೆ ಬಂದಿದ್ದ ಭಕ್ತರು ಖರೀದಿಗೆ ಮುಗಿಬಿದ್ದಿದ್ದರು. ಅಹಿತಕರ ಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಏರ್ಪಟ್ಟಿತ್ತು.
ರಥೋತ್ಸವದಲ್ಲಿ ಸಂಸದ ಡಾ. ಸಿ.ಎನ್. ಮಂಜುನಾಥ್, ಬಮುಲ್ ಉಪಾಧ್ಯ ಡಾ. ಕೆಇಬಿ ರಾಜಣ್ಣ, ಟಿಎಪಿಸಿಎಂಎಸ್ ಅಧ್ಯ ಹೊನ್ನಾಪುರ ಶಿವಪ್ರಸಾದ್, ಇಒ ಜೈಪಾಲ್, ಮಾಗಡಿ ಯೋಜನಾ ಪ್ರಾಧಿಕಾರದ ನಿರ್ದೇಶಕ ಕಾಗಿಮಡು ದೀಪಕ್, ವಕೀಲ ಪಾಪಣ್ಣ ಸೇರಿ ಸಾವಿರಾರು ಭಕ್ತರು ಭಾಗವಹಿಸಿದ್ದರು.