ಮಂಕುಂದ ಗ್ರಾಮದಲ್ಲಿನ ಐತಿಹಾಸಿಕ ಶಾಸನ, ಶಿಲ್ಪ, ವೀರಗಲ್ಲುಗಳು ಸಂರಕ್ಷಣೆ ಇಲ್ಲದೆ ಮಣ್ಣಲ್ಲಿ ಹುದುಗಿರುವುದು.
ಅಳಿದುಹೋಗುತ್ತಿವೆ ಮಂಕುಂದದಲ್ಲಿನ ಐತಿಹಾಸಿಕ ಸ್ಮಾರಕ, ಶಿಲೆ, ಶಾಸನಗಳು
ಚನ್ನಪಟ್ಟಣ: ರಾಜ್ಯವನ್ನು ಸಾಂಸತಿಕವಾಗಿ ಕಟ್ಟಲು ಅಡಿಪಾಯ ಹಾಕಿಕೊಟ್ಟ ಪ್ರಸಿದ್ಧ ಗಂಗ ಸಾಮ್ರಾಜ್ಯದ ಐತಿಹಾಸಿಕ ಕುರುಹುಗಳನ್ನು ಸಂರಸಿಕೊಳ್ಳಲು ಸರ್ಕಾರ ನಿರ್ಲಕ್ಷ್ಯ ತೋರಿದೆ.
ಹೌದು... ದಕ್ಷಿಣ ಕರ್ನಾಟಕವನ್ನು 6 ಶತಮಾನಗಳ ಕಾಲ ಸುದೀರ್ ಆಳ್ವಿಕೆ ನಡೆಸಿದ ಗಂಗ ಸಾಮ್ರಾಜ್ಯದ ಉಪರಾಜಧಾನಿ, ಇತಿಹಾಸದ ಪುಟಗಳಲ್ಲಿ ಮಹತ್ವದ ಸ್ಥಾನ ಪಡೆದಿರುವ, ತಾಲೂಕಿನ ಮಂಕುಂದ ಗ್ರಾಮಕ್ಕೆ ಸದ್ಯ ಮಂಕು ಕವಿದಿದೆ. ಪ್ರಾಚ್ಯ, ಪುರಾತತ್ವ ಸೇರಿ ಸಂಬಂಧಿತ ಇಲಾಖೆಗಳ ನಿರ್ಲಕ್ಷ್ಯದಿಂದ ಗತ ಸಾಮ್ರಾಜ್ಯದ ಕುರುಹುಗಳು ಗ್ರಾಮದಲ್ಲಿ ರಣೆ ಇಲ್ಲದೆ ಮಣ್ಣಲ್ಲಿ ಹುದುಗಿ, ಅಳಿದುಹೋಗುತ್ತಿವೆ.
ಬೊಂಬೆಗಳ ನಾಡು ಎಂದೇ ವಿಶ್ವಖ್ಯಾತಿ ಗಳಿಸಿರುವ ಚನ್ನಪಟ್ಟಣ ತಾಲೂಕಿಗೆ ತನ್ನದೇ ಗತವೈಭವದ ಇತಿಹಾಸವಿದೆ. ಕನ್ನಡ ನಾಡಿನ ಹೆಮ್ಮೆಯ ರಾಜಮನೆತನಗಳು ಈ ನೆಲದಲ್ಲಿ ಆಳ್ವಿಕೆ ಮಾಡಿವೆ. ಅದರಲ್ಲೂ ದಣ ಕರ್ನಾಟಕ ಹಾಗೂ ತಮಿಳುನಾಡಿನ ಉತ್ತರ ಭಾಗವನ್ನು ಸುಮಾರು 600 ವರ್ಷ ಆಳಿದ ತಲಕಾಡಿನ ಗಂಗರ 3 ಉಪರಾಜಧಾನಿಗಳ ಪೈಕಿ ತಾಲೂಕಿನ ಮಂಕುಂದ ಗ್ರಾಮವೂ ಒಂದು. ಅಂದಿನ ಮಾಕುಂದ ಈಗ ಮಂಕುಂದವಾಗಿದ್ದು, ಗ್ರಾಮದಲ್ಲಿ ಗಂಗರ ಆಳ್ವಿಕೆಯ ಸಾಕಷ್ಟು ಕುರುಹುಗಳನ್ನು ಕಾಣಬಹುದು. ಅದರಲ್ಲೂ ಗಂಗರ ದೊರೆಗಳಲ್ಲಿ ಪ್ರಮುಖನಾದ ಭೂವಿಕ್ರಮರಾಯನ ಆಳ್ವಿಕೆಗೆ ಈ ಗ್ರಾಮ ಮೇರುಸಾಯಾಗಿದೆ. ಆದರಿಂದು ನಿರ್ಲಕ್ಷ್ಯಕ್ಕೆ ತುತ್ತಾಗಿದೆ.
ಇತಿಹಾಸ ರಚನೆಯ ಮೂಲ ಆಕಾರಗಳೇ ಐತಿಹಾಸಿಕ ಸ್ಮಾರಕಗಳು. ಹಾಗಾಗಿ ಪುರಾತನ ವಸ್ತುಗಳನ್ನು ಜತನದಿಂದ ಕಾಪಾಡುವ ನಿಯಮವಿದೆ. ಆದರೆ, ಪ್ರಸಿದ್ಧ ಸಾಮ್ರಾಜ್ಯದ ಕುರುಹುಗಳೆಂದು ದೃಢಪಟ್ಟಿದ್ದರೂ ಸಹ ಮಂಕುಂದ ಗ್ರಾಮದ ಬಗ್ಗೆ ಇದುವರೆಗೂ ಜಿಲ್ಲಾಡಳಿತ ಸೇರಿ ಯಾರೊಬ್ಬರೂ ಹೆಚ್ಚಿನ ಕಾಳಜಿವಹಿಸಿಲ್ಲ. ಐತಿಹಾಸಿಕ ಹಾಗೂ ಪ್ರವಾಸೋದ್ಯಮ ಕೇಂದ್ರವಾಗಬೇಕಿದ್ದ ಗ್ರಾಮವನ್ನು ಕೊನೇ ಪ ಕನ್ನಡದ ಪ್ರಸಿದ್ಧ ರಾಜಮನೆತನದ ಉಪರಾಜಧಾನಿ ಎಂದಾದರೂ ಮುಕುಂದದಲ್ಲಿನ ಸ್ಮಾರಕ, ಶಿಲೆಗಳನ್ನು ರಸಿಕೊಳ್ಳಲು ಮುಂದಾಗದ ಪರಿಣಾಮ ಗತಕಾಲದ ಕುರುಹುಗಳು ಎಲ್ಲೆಂದರಲ್ಲಿ ಬಿದ್ದಿವೆ. ಅರಸರ ಸಾಧನೆಯ ಹೆಜ್ಜೆ ಗುರುತುಗಳು ಬೀದಿಪಾಲಾಗುತ್ತಿವೆ. ಹತ್ತಾರು ವೀರಗಲ್ಲುಗಳು ಸಂರಣೆ ಇಲ್ಲದೆ ಸವೆದಿವೆ, ಮಹಾಸತಿ ಕಲ್ಲುಗಳು, ಸ್ಮಾರಕ, ಶಿಲೆ, ಶಾಸನಗಳು ಮಣ್ಣಲ್ಲಿ ಹುದುಗಿ ಅಸ್ತಿತ್ವ ಕಳೆದುಕೊಳ್ಳುತ್ತಿದ್ದು, ಐತಿಹಾಸಿಕ ಅವಶೇಷಗಳಿಗೆ ಸಿಗಬೇಕಾದ ಸಾಮಾನ್ಯ ಗೌರವದಿಂದಲೂ ಇವು ವಂಚಿತವಾಗಿವೆ.
ಪ್ರಾಗೈತಿಹಾಸಿಕ ಚಿತ್ರ ಇಲ್ಲಿನ ವಿಶೇಷ
ಗ್ರಾಮದಲ್ಲಿರುವ ಒಂದೊಂದು ಮಾಸ್ತಿಗಲ್ಲು, ವಗೈ (ಒಂದೇ ಕೈ), ವೀರಗಲ್ಲುಗಳು ಗಂಗರ ಆಳ್ವಿಕೆಯನ್ನು ತಿಳಿಸುತ್ತವೆ. ಗಂಗರ ಕಾಲದಲ್ಲಿ ಸ್ಥಾಪಿಸಲ್ಪಟ್ಟ ವೀರಭದ್ರಸ್ವಾಮಿ, ಆಂಜನೇಯಸ್ವಾಮಿ, ದಂಡಿನಮ್ಮ, ಮಾರಮ್ಮ, ಮಾಸ್ತಮ್ಮ, ಹುಚ್ಚಮ್ಮ, ಚಿಕ್ಕಮ್ಮ, ಬಸವೇಶ್ವರ ದೇಗುಲಗಳೂ ಇಲ್ಲಿವೆ. ಸಮೀಪದಲ್ಲಿ ಅಣ್ಣ&ತಮ್ಮನ ಗುಡ್ಡ ಎಂಬ ಬೆಟ್ಟ ಸಹ ಇದೆ. ಮುಕುಂದ ಪಕ್ಕದ ಹುಲುವಾಡಿ, ಬ್ಯಾಡರಹಳ್ಳಿ, ಆಣಿಗೆರೆ, ಮುದಗೆರೆ ಗ್ರಾಮಗಳಲ್ಲೂ ಗಂಗರ ಕುರುಹುಗಳಿವೆ. ಅದರಲ್ಲೂ ಹುಲುವಾಡಿ ಬೆಟ್ಟದ ಮೇಲಿರುವ ಪ್ರಾಗೈತಿಹಾಸಿಕ ಚಿತ್ರ ಗಂಗರ ಆಳ್ವಿಕೆಯನ್ನು ಸಾರಿ ಹೇಳುತ್ತದೆ. ಚಿತ್ರದುರ್ಗ ಹೊರತುಪಡಿಸಿದರೆ, ಇಂತಹ ಪ್ರಾಗೈತಿಹಾಸಿಕ ಚಿತ್ರವಿರುವುದು ಇಲ್ಲಿಯೇ ಎಂಬುದು ವಿಶೇಷ. ಇದರೊಂದಿಗೆ ಹುಲುವಾಡಿ ಹಾಗೂ ಆಣಿಗೆರೆ ಬೆಟ್ಟದಲ್ಲಿನ ಗುಹಾಂತರಗಳೂ ಗಂಗರ ಸಾಮ್ರಾಜ್ಯದ ಕುರುಹುಗಳು.
ಗ್ರಾಮಸ್ಥರ ಮುತುವರ್ಜಿ ಅಗತ್ಯ
ಪುರಾತನ ಕುರುಹುಗಳ ಸಂರಣೆ ಹೊರತುಪಡಿಸಿ ಸದ್ಯ ಮಂಕುಂದ ಗ್ರಾಮ ಅಭಿವೃದ್ಧಿ ಕಾಣುತ್ತಿದೆ. ಸರ್ಕಾರ ಕೂಡಲೇ ಗ್ರಾಮವನ್ನು ಐತಿಹಾಸಿಕ ತಾಣವಾಗಿ ೂಷಿಸಬೇಕು. ಇಲ್ಲಿನ ಸ್ಮಾರಕ, ಶಿಲೆ, ಶಾಸನಗಳ ಸಂರಕ್ಷಣೆಗೆ ಪ್ರಾಚ್ಯ&ಪುರಾತತ್ವ, ಜಿಲ್ಲಾಡಳಿತ ತ್ವರಿತ ಕ್ರಮವಹಿಸಬೇಕು. ಹಾಗೆಯೇ ನಾಡಿನ ಐತಿಹಾಸಿ, ಸಾಂಸತಿಕ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸು ನಿಟ್ಟಿನಲ್ಲಿ ಸ್ಮಾರಕ, ಶಿಲೆ, ಶಾಸನಗಳನ್ನು ಅಭಿಮಾನ, ಜತನದಿಂದ ಸಂರಸಿಕೊಳ್ಳುವಲ್ಲಿ ನಾಗರಿಕರ ಜವಾಬ್ದಾರಿ ಮುಖ್ಯವಾಗಿದ್ದು, ಮಂಕುಂದ ಗ್ರಾಮದಲ್ಲಿನ ಗಂಗರಸರ ಕುರುಹುಗಳನ್ನು ಇನ್ನಾದರೂ ಎಲ್ಲರೂ ಕಾಳಜಿಯಿಂದ ಸಂರಸಬೇಕಿದೆ. ಇದು ವಿಜಯವಾಣಿ ಕಳಕಳಿಯೂ ಹೌದು
ಗ್ರಾಮದ ಅಲ್ಲಲ್ಲಿ ಬಿದ್ದಿದ್ದ ವೀರಗಲ್ಲುಗಳನ್ನು ಈ ಹಿಂದೆ ಗ್ರಾಮದ ಶಾಲಾವರಣದಲ್ಲಿ ಜೋಡಿಸಿಡಲಾಗಿದೆಯಾದರೂ ಇನ್ನುಳಿದ ಕುರುಹುಗಳ ಸಂರಣೆಗೆ ಯಾರೂ ಮುಂದಾಗಿಲ್ಲ. ಕೆಲವೊಂದಿಷ್ಟು ದೇವಾಲಯಗಳ ಬಳಿ, ಮತ್ತೊಂದಿಷ್ಟು ಮರಗಳ ಬಳಿ ಅನಾಥವಾಗಿವೆ. ಇನ್ನಾದರೂ ಸಂಬಂಧಿತ ಇಲಾಖೆಗಳು ಮಂಕುಂದ ಗ್ರಾಮವಲ್ಲದೆ ಅಕ್ಕಪಕ್ಕದ ಗ್ರಾಮಗಳನ್ನು ಕೂಡಲೇ ಉತ್ಖನನಕ್ಕೆ ಒಳಪಡಿಸಿ, ಸ್ಮಾರಕ, ಶಿಲೆಗಳನ್ನು ಸಂರಸಬೇಕು. ಗಂಗರಸರ ಬಗ್ಗೆ ಹೆಚ್ಚು ಮಾಹಿತಿ ಕಲೆಹಾಕಬೇಕು ಎಂಬುದು ಇತಿಹಾಸಪ್ರಿಯರ ಒತ್ತಾಯ.
ಗ್ರಾಮದ ಇತಿಹಾಸವನ್ನು ಸಾರುವ ಉದ್ದೇಶದಿಂದ ಗಂಗೋತ್ಸವ ಕಾರ್ಯಕ್ರಮವನ್ನು ಸರ್ಕಾರದಿಂದ ಆಯೋಜಿಸಬೇಕು ಎಂಬುದು ತಾಲೂಕಿನವರ ಹಲವು ದಿನಗಳ ಕನಸು. ಒಮ್ಮೆ ಕಸಾಪನಿಂದ ಗಂಗೋತ್ಸವವನ್ನೂ ಹಮ್ಮಿಕೊಳ್ಳಲಾಗಿತ್ತು. ಆದರೆ, ಸರ್ಕಾರದಿಂದ ಅಧಿಕೃತ ಕಾರ್ಯಕ್ರಮ ೂಷಣೆಗೆ ಒತ್ತಾಯ ಜೋರಾಗಿದೆ.
ನಮ್ಮ ನಾಡಿಗೆ ಸಾಂಸತಿಕ ಅಡಿಪಾಯಕ್ಕೆ ಗಂಗರಸರ ಕೊಡುಗೆ ಅಪಾರ. ಮಂಕುಂದ ಗ್ರಾಮದಲ್ಲಿರುವ ಸಾಕಷ್ಟು ಕುರುಹುಗಳು ಗಂಗರ ಅಳ್ವಿಕೆಗೆ ಸಾಯಾಗಿವೆ. ಗಂಗರ ಉಪರಾಜಧಾನಿಯಾಗಿದ್ದ ಗ್ರಾಮವನ್ನು ಸರ್ಕಾರ ಐತಿಹಾಸಿಕ ತಾಣವಾಗಿ ೂಷಿಸಿ, ಪ್ರವಾಸೋದ್ಯಮ ಕೇಂದ್ರವಾಗಿಸಬೇಕು ಎಂದು ನಾನು ಸಾಕಷ್ಟು ಪ್ರಯತ್ನಿಸಿದ್ದೇನೆ. ಇತಿಹಾಸವನ್ನು ಸಾರುವ ದೃಷ್ಟಿಯಿಂದ ಅದ್ದೂರಿ ಗಂಗೋತ್ಸವ ಕಾರ್ಯಕ್ರಮ ಆಯೋಜಿಸಬೇಕು ಎಂಬುದೂ ನನ್ನ ಹಲವು ವರ್ಷಗಳ ಕನಸು. ಇವನ್ನೆಲ್ಲ ಸರ್ಕಾರದ ಗಮನಕ್ಕೆ ತರುವೆ.
ನಾಡಿಗೆ ಗಂಗರಸರ ಕೊಡುಗೆ ಅಪಾರವಾಗಿದ್ದು, ಮಂಕುಂದ ಒಂದು ಸಾಂಸತಿಕ ಅಧ್ಯಯನ ಎಂಬ ವಿಷಯದ ಬಗ್ಗೆ ನಾನು ಅಧ್ಯಯನ ನಡೆಸಿದ್ದೇನೆ. ಗಂಗರ ಅಳ್ವಿಕೆಯ ಸಾಕಷ್ಟು ಕುರುಹುಗಳು ಮಂಕುಂದ ಗ್ರಾಮದಲ್ಲಿದ್ದು, ಐತಿಹಾಸಿಕ ಗ್ರಾವವನ್ನು ಸರ್ಕಾರ ಅಭಿವೃದ್ಧಿಪಡಿಸಿ, ಇತಿಹಾಸ ಸಾರುವ, ಕುರುಹು ಉಳಿಸುವ ಕಾರ್ಯಕ್ರಮ ರೂಪಿಸಬೇಕು.
ನಮ್ಮೂರು ಪ್ರಸಿದ್ಧ ಸಾಮ್ರಾಜ್ಯದ ಆಡಳಿತದ ಕೇಂದ್ರವಾಗಿತ್ತು ಎಂಬುದೇ ನಮಗೆ ಹೆಮ್ಮೆ. ಆದರೆ, ಐತಿಹಾಸಿಕ ಗ್ರಾಮ ಮತ್ತು ಕುರುಹುಗಳ ಸಂರಣೆಗೆ ಇದುವರೆಗೂ ಸರ್ಕಾರವಾಗಲಿ, ಜಿಲ್ಲಾಡಳಿತ, ಸಂಬಂಧಿತ ಇಲಾಖೆಗಳು ಮುಂದಾಗದಿರುವುದು ಬೇಸರ ತರಿಸಿದೆ. ಇನ್ನಾದರೂ ಇಡೀ ಗ್ರಾಮವನ್ನು ಉತ್ಖನನಕ್ಕೆ ಒಳಪಡಿಸಿ, ಐತಿಹಾಸಿಕ ಕುರುಹುಗಳನ್ನು ಸಂರಸಬೇಕು.