ನೀರಿನಲ್ಲಿ ಮುಳುಗುತ್ತಿರುವ ಸಾಂದರ್ಭಿಕ ಚಿತ್ರ 
ಬೆಂಗಳೂರು ದಕ್ಷಿಣ

ಜಲಾಶಯದಲ್ಲಿ ಮುಳುಗಿ ವಿದ್ಯಾರ್ಥಿ ಸಾವು

* ಮಾಗಡಿಯ ಮಂಚನಬೆಲೆ ಜಲಾಶಯದಲ್ಲಿ ಘಟನೆ * ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

​ ಮಾಗಡಿ: ಮಂಚನಬೆಲೆ ಜಲಾಶಯದ ಹಿನ್ನೀರಿನಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟಿರುವ ಘಟನೆ ಅ. 15ರ ಬುಧವಾರ ಸಂಜೆ ಸಂಭವಿಸಿದೆ.

​ಮೃತ ವಿದ್ಯಾರ್ಥಿ ಕೈಲಾಸ್ (22) ಎಂದು ಗುರುತಿಸಲಾಗಿದೆ. ಮಂಚನಬೆಲೆ ಜಲಾಶಯದ ಬಳಿಯ   ಮಿಲಿಟರಿ ಕ್ಯಾಂಪ್‌ನಲ್ಲಿ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದು, ಎಂದಿನಂತೆ ತರಬೇತಿಯಲ್ಲಿದ್ದ ವಿದ್ಯಾರ್ಥಿಗಳು ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಜಲಾಶಯ  ಹಿನ್ನೀರಿನಲ್ಲಿ ಈಜಾಡಲು ತೆರಳಿದ್ದರು.

ಈ ವೇಳೆ ಕೈಲಾಸ್  ಆಕಸ್ಮಿಕವಾಗಿ ಆಳವಾದ ನೀರಿಗೆ ಸಿಲುಕಿ ಮುಳುಗಿದ್ದಾರೆ ಎನ್ನಲಾಗಿದೆ. ​ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ತಾವರೆಕೆರೆ ಪೊಲೀಸರು, ಸ್ಥಳೀಯರ ಸಹಾಯದಿಂದ ನೀರಿನಲ್ಲಿದ್ದ ಮೃತದೇಹವನ್ನು ಮೇಲತ್ತಿದ್ದಾರೆ.    ತಾವರೆಕೆರೆ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ