ತಾಲೂಕಿನ ಭೂಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಎನ್‌ಪಿಡಿಡಿ ಯೋಜನೆಯಡಿ ನಿರ್ಮಾಣವಾಗಿರುವ ೫೦೦೦ ಲೀಟರ್ ಸಾಮರ್ಥ್ಯದ ಬಿ.ಎಂ.ಸಿ. ಕೇಂದ್ರವನ್ನು ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹಾಗೂ ಶಾಸಕ ಸಿ.ಪಿ.ಯೋಗೇಶ್ವರ್ ಉದ್ಘಾಟಿಸಿದರು. 
ಬೆಂಗಳೂರು ದಕ್ಷಿಣ

ನಂದಿನಿ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಣೆಗೆ ಕ್ರಮ

ಪ್ರಮುಖ ಮುಖ್ಯಾಂಶಗಳು

  • ನಷ್ಠದಿಂದ ಲಾಭದೆಡೆಗೆ ಬಮೂಲ್
  • ನಾನು ಅಧ್ಯಕ್ಷನಾದ ನಂತರ ಅಭಿವೃದ್ಧಿಗೆ ಒತ್ತು
  • ಚನ್ನಪಟ್ಟಣದಲ್ಲಿ ಬಿಎಂಸಿ ಉದ್ಘಾಟನೆ ಮಾಡಿದ ಡಿ.ಕೆ.ಸುರೇಶ್
ಚನ್ನಪಟ್ಟಣ:
ನಂದಿನಿ ಉತ್ಪನ್ನದ ಮಾರುಕಟ್ಟೆ ವಿಸ್ತರಣೆಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾಕಷ್ಟು ಪೈಪೋಟಿಗಳ ನಡುವೆ ಇಂದು ಒಕ್ಕೂಟವಸಾಕಷ್ಟು ಪ್ರಗತಿ ಸಾಧಿಸಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಬದಲಾವಣೆಗಳನ್ನು ಕಾಣಲಿದ್ದೇವೆ ಎಂದು ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು.
ತಾಲೂಕಿನ ಭೂಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಎನ್‌ಪಿಡಿಡಿ ಯೋಜನೆಯಡಿ ನರ‍್ಮಾಣವಾಗಿರುವ 5000 ಲೀಟರ್ ಸಾರ‍್ಥ್ಯದ ಬಿ.ಎಂ.ಸಿ. ಕೇಂದ್ರ ಉದ್ಘಾಟಿಸಿ ಮಾತನಾಡಿ, ನಾನು ಒಕ್ಕೂಟದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಾಗ, ಸುಮಾರು 14.5 ಕೋಟಿ ನಷ್ಟದಲ್ಲಿತ್ತು, ಆನಂತರ ಅದು ಸುಮಾರು 50ಕೋಟಿಗೆ ಬೆಳೆಯಿತು. ವಿವಿಧ ಸವಾಲು ಎದುರಿಸಿ ಇಂದು ಒಕ್ಕೂಟ ಒಂದು ಉತ್ತಮ ಸ್ಥಿತಿಗೆ ಬಂದಿದೆ. ಜನವರಿ ಆಡಿಟ್‌ನಲ್ಲಿ ಈ ರ‍್ಷದಲ್ಲಿ 20 ಕೋಟಿ ಲಾಭ ಗಳಿಸಿದೆ ಎಂದು ಮಾಹಿತಿ ನೀಡಿದರು‌.
ಬೆಂಗಳೂರಿನಲ್ಲಿ ನಮ್ಮ ಮಾರುಕಟ್ಟೆ ವಿಸ್ತರಿಸಲು ಖಾಸಗಿ ಸಂಸ್ಥೆಗಳ ಜತೆ ಪೈಪೋಟಿ ನಡೆಸಬೇಕಿದೆ. ಇವತ್ತು ಮಾರುಕಟ್ಟೆ ವಿಸ್ತರಿಸಲು ನಾವೆಲ್ಲ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದೇವೆ. ನಮ್ಮ ರೈತರು ಹಾಲಿನಗುಣಮಟ್ಟ ಕಾಪಾಡಬೇಕು. ಭೂಹಳ್ಳಿಯಲ್ಲಿ 5 ಸಾವಿರ ಸಾರ‍್ಥ್ಯದ ಬಿಎಂಸಿ ಅನ್ನು ಉದ್ಘಾಟಿಸಿದ್ದೇವೆ. ಊರಿನಲ್ಲಿ ಶೇಖರಣೆಯಾದ ಹಾಲಿನ್ನು ಶೇಖರಿಸಿ ಗುಣಮಟ್ಟ ಕಾಪಾಡಲು ಇದನ್ನು ಸ್ಥಾಪಿಸಿಲಾಗಿದೆ. ಗುಣಮಟ್ಟವೇ ನಂದಿನಿಯ ಮೊದಲ ಆದ್ಯತೆಯಾಗಿದೆ. ಎಲ್ಲ ಕಡೆ ಬಿಎಂಸಿ ಸ್ಥಾಪಿಸಲು ಶುರು ಮಾಡಿದ್ದೇವೆ. 151 ಕಡೆ ಬಿಎಂಸಿ ಕೇಂದ್ರ ಸ್ಥಾಪಿಸಿದ್ದು, ಚನ್ನಪಟ್ಟಣದಲ್ಲಿ ಸಹ 21 ಕಡೆ ನರ‍್ಮಾಣ ಮಾಡಲಾಗಿದೆ ಎಂದರು.
ಇಡೀ ರಾಜ್ಯದಲ್ಲಿ ಚನ್ನಪಟ್ಟಣದಲ್ಲಿ ಅತಿಹೆಚ್ಚು ಹಾಲು ಶೇಖರಣೆಯಾಗುತ್ತಿದು, ಎರಡನೇ ಸ್ಥಾನದಲ್ಲಿದೆ. ಈಗ ಪ್ರತಿದಿನ 3ಲಕ್ಷ ಲೀ.ಗೂ ಹೆಚ್ಚು ಹಾಲು ಸಂಗ್ರಹವಾಗುತ್ತಿದ್ದು, ಮುಂದಿನ ಒಂದು ರ‍್ಷದಲ್ಲಿ ಇದನ್ನು ನಾಲ್ಕು ಲಕ್ಷ ಲಿ.ಗೇ ಹೆಚ್ಚಿಸಬೇಕು. ಅಧಿಕಾರಿಗಳಿಗೆ ರೈತರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವಂತೆ ತಿಳಿಸಿದ್ದೇವೆ. ಮುಂದಿನ ರ‍್ಷದಿಂದ ಬೇಸಿಗೆಯಲ್ಲಿ ಸಹ ಹಸಿ ಮೇವು ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು. ಹೈನೋದ್ಯಮವನ್ನು ಲಾಭದಾಯಕ ಮಾಡಲು, ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಹೈನುಗಾರಿಕೆಯಲ್ಲಿ ೧೦ ಹಸು ಸಾಕಿದರೆ, ಇಂಜಿನಿಯರ್‌ಗಿಂತ ಹೆಚ್ಚಿನ ಸಂಪಾದನೆ ಮಾಡಬಹುದು. ರೈತರಿಗೆ ಸಹಕಾರ ನೀಡಲು ಬಿಡಿಸಿಸಿ ಬ್ಯಾಂಕ್‌ನಿಂದ ಎರಡು ಹಸು ಖರೀದಿಸಲು ೧.೮೦ ಲಕ್ಷ ಸಾಲ ಸೌಲಭ್ಯ ನೀಡಲು ತರ‍್ಮಾನಿಸಲಾಗಿದೆ. ೨ ಎಕರೆ ಜಮೀನು ಇದ್ದರೆ, ಮಿನಿ ಡೇರಿ ಮಾಡಲು ೧೫ ಲಕ್ಷದವರೆಗೆ ಸಾಲ ಸೌಲಭ್ಯ ನೀಡಲಾಗುವುದು. ಒಕ್ಕೂಟದಲ್ಲಿ ಮೇಲೆ ಇಟ್ಟುಕೊಂಡಿರುವ ಭರವಸೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.
ಶಾಸಕ ಸಿ.ಪಿ.ಯೋಗೇಶ್ವರ್ ಮಾತನಾಡಿ, ಸುರೇಶ್ ಬಮುಲ್ ಅಧ್ಯಕ್ಷರಾದ ನಂತರ ಒಕ್ಕೂಟಕ್ಕೆ ಒಂದು ಹೊಸ ಶಕ್ತಿ, ಚೈತನ್ಯ ನೀಡಿದ್ದಾರೆ. ಕ್ಷೀರೋಧ್ಯಮದಲ್ಲಿ ಇರುವ ಎಡರುತೊಡರು ನಿವಾರಿಸಿ ರೈತರ ಶ್ರಮಕ್ಕೆ ತಕ್ಕ ಬೆಲೆ ಕೊಡಿಸುವ ಕೆಲಸ ಮಾಡುತ್ತಿದ್ದಾರೆ. ಹಲವಾರು ಕ್ರಮಗಳನ್ನು ತೆಗೆದುಕೊಂಡು ಒಕ್ಕೂಟದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಬಹಳ ಕ್ರಿಯಾಶೀಲರಾಗಿ ಓಡಾಡುತ್ತಿದ್ದಾರೆ. ಲಿಂಗೇಶ್ ಸಹ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಇಬ್ಬರು ಸೇರಿ ರೈತರಿಗೆ ಅನುಕೂಲ ಕಲ್ಪಿಸಲಿ ಎಂದರು.
ಇದೇ ವೇಳೆ ಬಾಣಗನಹಳ್ಳಿ, ನಿಡಗೋಡಿ, ಬೊಮ್ಮನಾಯಕನಹಳ್ಳಿ, ಗುಡ್ಡೆ ತಿಮ್ಮಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಎನ್.ಪಿ.ಡಿ.ಡಿ. ಯೋಜನೆಯಡಿ ನರ‍್ಮಾಣವಾಗಿರುವ ೫೦೦೦ ಲೀಟರ್ ಸಾರ‍್ಥ್ಯದ ಬಿ.ಎಂ.ಸಿ. ಕೇಂದ್ರವನ್ನು ಉದ್ಘಾಟಿಸಲಾಯಿತು.
ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಎಸ್.ಗಂಗಾಧರ್, ಬಮೂಲ್ ನರ‍್ದೇಶಕ ಎಸ್.ಲಿಂಗೇಶ್ ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ವಾಸೀಲ್ ಅಲಿಖಾನ್, ಬಮುಲ್ ಅಧಿಕಾರಿಗಳು ಇದ್ದರು.