ಕಳ್ಳತನವಾಗಿದ್ದ ವಸ್ತುಗಳೊಂದಿಗೆ ಕುದೂರು ಪೊಲೀಸರು.
ಕುದೂರು: ಹೋಬಳಿಯ ಅಜ್ಜಹಳ್ಳಿಯಲ್ಲಿ ಪಂಪ್ಸೆಟ್ನ ಸ್ಟಾರ್ಟರ್ ಕಳವು ಮಾಡಿದವರನ್ನು ಕುದೂರು ಪೊಲೀಸರು ಬಂಧಿಸಿದ್ದಾರೆ.
ಹೋಬಳಿಯ ಅಜ್ಜಹಳ್ಳಿಯ ಅರುಣ್.ಎ.ಎಲ್ ಹಾಗೂ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಗುರುವಾಪುರ ಗ್ರಾಮದ ಯಶ್ವಂತ್ ಕುಮಾರ್ (38) ಬಂಧಿತರು.
ಪಂಪ್ಸೆಟ್ನ ಸ್ಟಾರ್ಟರ್ ಕಳವಾಗಿರುವ ಬಗ್ಗೆ ಮಾ.17ರಂದು ಕುದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿಲೆಯಲ್ಲಿ ತನಿಖೆ ಕೈಗೊಂಡ ಕುದೂರು ಪೊಲೀಸರು ಆರೋಪಿಗಳನ್ನು ಬಂಧಿಸಿ, 2 ಸ್ಟಾರ್ಟರ್ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ.