ಹಾರೋಹಳ್ಳಿ : ಬಮುಲ್ ವತಿಯಿಂದ ಲೀಟರ್ ಹಾಲಿಗೆ ಏಳು ರೂ. ಹೆಚ್ಚಳ ವಾಡಿದ್ದು, ಮೊದಲ ಬಟವಾಡೆ ಹಣ ಬಂದ ಹಿನ್ನೆಲೆಯಲ್ಲಿ ಮರಳವಾಡಿ ಹೋಬಳಿ ದೊಡ್ಡಸಾದೇನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂ ಕಚೇರಿ ಮುಂಭಾಗ ಹಾಲು ಉತ್ಪಾದಕರು ಡಿಕೆ ಬ್ರದರ್ಸ್ ಕಟೌಟ್ಗೆ ಹಾಲಿನ ಅಭಿಷೇಕ ವಾಡಿ ಸಂಭ್ರಮಿಸಿದರು.
ಸಂದ ಅಧ್ಯಕ್ಷ ಲೋಕೇಶ್ ಮಾತನಾಡಿ, ಮೇವು, ರಸಗೊಬ್ಬರ, ಪಶು ಆಹಾರ ಬೆಲೆ ಸೇರಿ ಎಲ್ಲ ಅಗತ್ಯ ವಸ್ತು ಬೆಲೆ ಹೆಚ್ಚಳದಿಂದಾಗಿ ಲಾಭವಿಲ್ಲದೆ ರೈತರು ತತ್ತರಿಸಿದ್ದರು. ನಷ್ಟದಲ್ಲಿಯೇ ರೈತರು ಹಾಲು ಉತ್ಪಾದನೆ ವಾಡುತ್ತಿದ್ದರು. ಸರ್ಕಾರಕ್ಕೆ ಹಾಗೂ ಬಮುಲ್ ಅಧ್ಯಕ್ಷರಿಗೆ ಹಾಲಿನ ದರ ಹೆಚ್ಚಿಸುವಂತೆ ಮನವಿ ವಾಡಿದ್ದೆವು. ಹಾಲಿನ ದರ ಹೆಚ್ಚಳದಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ ಎಂದರು.
ನಷ್ಟದಿಂದ ರೈತರು ಹೈನುಗಾರಿಕೆ ಮಾಡುವ ಆಸಕ್ತಿ ಕಳೆದುಕೊಂಡು ಕೆಲಸಕ್ಕಾಗಿ ಬೆಂಗಳೂರಿಗೆ ಮುಖ ವಾಡಿದ್ದರು. ಹಾಲಿನ ದರ ಏರಿಕೆ ಮಾಡಿರುವುದರಿಂದ ರೈತರು ಮತ್ತೆ ಹೈನುಗಾರಿಕೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಯಿತು. ಹಾಳಿನ ದರ ಹೆಚ್ಚು ವಾಡುವಲ್ಲಿ ಬಮುಲ್ ಅಧ್ಯಕ್ಷ ಡಿಕೆ ಸುರೇಶ್ ಅವರ ಪಾತ್ರ ಬಹಳ ಮುಖ್ಯವಾಗಿದೆ ಎಂದರು.
ಬಮುಲ್ ನಿರ್ದೇಶಕ ಎಸ್.ಹರೀಶ್ ಕುವಾರ್ ವಾತನಾಡಿ, ಹಾಲಿನ ದರ ಹೆಚ್ಚು ಮಾಡಿರುವುದರಿಂದ ಸರ್ಕಾರ ವಿರೋಧ ಪಕ್ಷಗಳ ಟೀಕೆ ಎದುರಿಸಬೇಕಾಯಿತು. ಆದರೂ ಮುಖ್ಯಮಂತ್ರಿಗಳು ಹಾಲಿನ ಬೆಲೆ ಇಳಿಸದೆ, ರೈತರಿಗೆ ಅನುಕೂಲ ಮಾಡಿಕೊಟ್ಟರು. ರೈತರ ಅಭಿವೃದ್ಧಿಗೆ ಸರ್ಕಾರಿ ಶ್ರಮಿಸುತ್ತಿದ್ದು, ಮುಂದಿನ ದಿನಗಳಲ್ಲಿ ರೈತರಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಬದ್ಧವಾಗಿದೆ ಎಂದರು.
ಬೆಂಗಳೂರು ಹಾಲು ಒಕ್ಕೂಟಕ್ಕೆ ಹೆಚ್ಚಿನ ಆದಾಯ ಬರುತ್ತಿದ್ದು, ಈ ಆದಾಯವನ್ನು ರೈತರಿಗೂ ಮುಂದಿನ ದಿನಗಳಲ್ಲಿ ವಿತರಣೆ ವಾಡಲಾಗುವುದು. ರಿಯಾಯಿತಿ ದರದಲ್ಲಿ ಹಲವು ಯಂತ್ರೋಪಕರಣಗಳನ್ನು ನೀಡಲಾಗುತ್ತಿದೆ ಹಾಲು ಹೆಚ್ಚಳ ವಾಡಲು ಇನ್ನು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಸಿಬ್ಬಂದಿ ಶಿವಕುವಾರ್.ಡಿ.ಕೆ, ಕೃಷ್ಣಪ್ಪ, ಹಾಲು ಉತ್ಪಾದಕರಾದ ಅಂಕಪ್ಪ ಮರಿಯಪ್ಪ, ನಾಗರಾಜು, ನಾಗೇಶ್, ಮಂಜುನಾಥ, ಪ್ರಸನ್ನ, ಮಹಾಲಿಂಗ, ಶಿವಣ್ಣ, ನವೀನ್, ಮಹೇಶ್ ಸುರೇಶ್ ಇತರರು ಇದ್ದರು.