ಕನಕಪುರ ಸಬ್​ರಿಜಿಸ್ಟರ್​ ಕಚೇರಿ. 
ಬೆಂಗಳೂರು ದಕ್ಷಿಣ

ಕನಕಪುರ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಶಾರ್ಟ್​ ಸಕ್ಯೂರ್ಟ್​

ಕನಕಪುರ: ನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಬೆಳಗ್ಗೆ ಶಾರ್ಟ್​ ಸಕ್ಯೂರ್ಟ್​ ಆಗಿದ್ದು, ಸಕಾಲದಲ್ಲಿ ವಿದ್ಯುತ್​ ಸರಬರಾಜು ಸ್ಥಗತಿಗೊಳಿಸಿದ ಕಾರಣ ದೊಡ್ಡ ಅನಾಹುತ ತಪ್ಪಿದೆ.
ಬುಧವಾರ ಬೆಳಗ್ಗೆ ಕಚೇರಿಯಲ್ಲಿ 9.30ರ ಸಮಯದಲ್ಲಿ ಸರ್ವರ್​ ಯೂನಿಟ್​ ಬಾಕ್ಸ್​ನಲ್ಲಿ ಬೆಂಕಿ ಕಾಣಿಸಿಕೊಂಡು ಕಚೇರಿ ಸಂಪೂರ್ಣ ಹೊಗೆಮಯವಾಗಿತ್ತು. ಕಚೇರಿಗೆ ಬಂದಿದ್ದ ಸಿಬ್ಬಂದಿ ಸಮಯಪ್ರೆಯಿಂದ ಮೈನ್​ ಸ್ವಿಚ್​ ಆಫ್​ ಮಾಡಿದ್ದರಿಂದ ಭಾರಿ ಅನಾಹುತ ತಪ್ಪಿದೆ.
ಸ್ವಿಚ್​ ಆ್​ ಮಾಡಿ, ಕೂಡಲೇ ಕಚೇರಿಯ ಮೇಲಧಿಕಾರಿಗಳಿಗೆ ದೂರವಾಣಿ ಮೂಲಕ ವಿಷಯ ಮುಟ್ಟಿಸಿದ್ದಾರೆ. ಉಪನೋಂದನಾಧಿಕಾರಿ ಅನಿತಾ, ಬೆಸ್ಕಾಂ, ಬಿಎಸ್​ಎನ್​ಎಲ್​ ಹಾಗೂ ಸಿಎಂಎಸ್​ ಕಂಪನಿಯವರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಶಾರ್ಟ್​ ಸಕ್ಯೂರ್ಟ್​ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂಬುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಬೆಂಕಿ ಅನಾಹುತದಿಂದಾಗಿ ಯಾವುದೇ ಕಂಪ್ಯೂಟರ್​, ಕಡತ ಹಾಳಾಗಿಲ್ಲ ಎಂದು ತಿಳಿಸಿದ್ದಾರೆ.
ಅವಡದಿಂದಾಗಿ ಕಚೇರಿ&ಕೆಲಸಕಾರ್ಯಗಳು ಕೆಲ ಗಂಟೆ ಸ್ಥಗಿತಗೊಂಡಿದ್ದವು. ಪರಿಣಾಮ ಸಾರ್ವಜನಿಕರು ಹೊರಗಡೆಯೇ ಕಾದು ಕುಳಿತಿದ್ದರು. ನೋಂದಣಾಧಿಕಾರಿ ಕಚೇರಿಯಲ್ಲಿ ಬೆಂಕಿ ಅವಡ ಇದೇ ಮೊದಲೇನಲ್ಲ. ಈ ಹಿಂದೆಯೂ ವೈರ್​ ದೋಷದಿಂದ ಶಾರ್ಟ್​ ಸಕ್ಯೂರ್ಟ್​ ಆಗಿತ್ತು. ಈ ಲೋಪದೋಷಗಳನ್ನು ಸರಿಪಡಿಸದ ಕಾರಣ ಮತ್ತೆ ಟನೆ ಸಂಭವಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಾಂತರಿಸಿ
ನೋಂದಣಾಧಿಕಾರಿ ಕಚೇರಿಯಲ್ಲಿ ಸುರಕ್ಷತೆ ಬಗ್ಗೆ ಇತ್ತೀಚೆಗಷ್ಟೆ ಉಪವಾಸ ಸತ್ಯಾಗ್ರಹ ಕೈಗೊಂಡು ಹೋರಾಟ ನಡೆಸಲಾಗಿತ್ತು. ಈಗ ಬೆಂಕಿ ಅವಡದಿಂದ ಸಣ್ಣಪುಟ್ಟ ನಷ್ಟವಾಗಿದೆ. ಕಟ್ಟಡ ಹೊತ್ತಿ ಉರಿದರೆ ತಾಲೂಕಿನ ಜನರ ಆಸ್ತಿ&ಪಾಸ್ತಿಗಳ ದಾಖಲೆಗಳ ಕಥೆಯೇನು ? ಇನ್ನಾದರೂ ಕಟ್ಟಡ ನಿರ್ಮಾಣ ಅಥವಾ ಸ್ಥಳಾಂತರಕ್ಕೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ರಾಜ್ಯ ರೈತ ಹಿತರಕ್ಷಣಾ ಸಂದ ಸಲಹೆಗಾರ ಪ್ರಶಾಂತ್​ ಹೊಸದುರ್ಗ ಒತ್ತಾಯಿಸಿದರು.