ಮಾಗಡಿ ತಾಲೂಕಿನ ಕಾಳಾರಿ ಗೇಟ್ ಬಳಿಯ ಪ್ರಾವಿಜನ್ ಸ್ಟೋರ್ ಹಾಗೂ ಪಶು ಆಹಾರ ಅಂಗಡಿ ಬಾಗಿಲು ಮುರಿದಿರುವುದು.
ಮಾಗಡಿ: ಬಾಗಿಲು ಒಡೆದು ಅಂಗಡಿ ಒಳ ನುಗ್ಗಿದ ಕಳ್ಳರು ನಗದು, ಲಾಂತರ ರೂ. ಮೌಲ್ಯದ ಸಿಗರೇಟ್, ತಂಬಾಕು ಹಾಗೂ ದೋಚಿದ್ದಾರೆ.
ತಾಲೂಕಿನ ಕಾಳಾರಿ ಗೇಟ್ನ ನಂಜಪ್ಪ ಅವರ ಮಾಲೀಕತ್ವದ ಪ್ರಾವಿಜನ್ ಸ್ಟೋರ್ ಹಾಗೂ ಪಶು ಆಹಾರ ಅಂಗಡಿಗಳ ಬಾಗಿಲು ಮುರಿದ ಕಳ್ಳರು ಪ್ರಾವಿಜನ್ ಸ್ಟೋರ್ನ ಹುಂಡಿಯಲ್ಲಿದ್ದ 40 ಸಾವಿರ ರೂ. ನಗದು, ಬೀಡಿ, ಸಿಗರೇಟ್, ತಂಬಾಕು, ಪಶು ಆಹಾರದ ಅಂಗಡಿಯಲ್ಲಿದ್ದ 2 ಸಾವಿರ ರೂ. ನಗದು ಹಾಗೂ ಲಾಂತರ ರೂ. ಮೌಲ್ಯದ ವಸ್ತುಗಳು ಕದ್ದಿದ್ದಾರೆ. ಇನ್ನು ಕಳ್ಳರ ಕೃತ್ಯದ ದೃಶ್ಯಗಳು ಅಂಗಡಿ ಮುಂಭಾಗ ಹಾಗೂ ಒಳಗಿನ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಮಾಗಡಿ ಪೊಲೀಸರು ಸ್ಥಳ ಪರಿಶೀಲಿಸಿದ್ದಾರೆ.