ಕನಕಪುರ ತಾಲೂಕಿನ ಶಿವನಹಳ್ಳಿ ಗ್ರಾಪಂ ಪಿಡಿಒ ಕೃಷ್ಣಮೂರ್ತಿ ಹಾಗೂ ಗ್ರಂಥಾಲಯ ಮೇಲ್ವಿಚಾರಕಿ ಚೈತ್ರಾ ಅವರಿಗೆ "ಅರಿವು ಕೇಂದ್ರ' ಪುರಸ್ಕಾರವನ್ನು ಜಿಪಂ ಉಪ ಕಾರ್ಯದರ್ಶಿ ಧನರಾಜು ನೀಡಿದರು. 
ಬೆಂಗಳೂರು ದಕ್ಷಿಣ

ಶಿವನಹಳ್ಳಿ ಗ್ರಂಥಾಲಯಕ್ಕೆ "ಅರಿವು ಕೇಂದ್ರ' ಪುರಸ್ಕಾರ

ಕನಕಪುರ: ತಾಲೂಕಿನಲ್ಲಿ ಗ್ರಾಮಮಟ್ಟದಲ್ಲಿ ಗ್ರಂಥಾಲಯವನ್ನು ಉತ್ತಮ ಮಟ್ಟದಲ್ಲಿ ನಿರ್ವಹಿಸಿ ಜವಾಬ್ದಾರಿ ತೋರಿದ ಶಿವನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಂಥಾಲಯದ ಮೇಲ್ವಿಚಾರಕಿಗೆ "ಅರಿವು ಕೇಂದ್ರ' ಪುರಸ್ಕಾರ ನೀಡಿ ಗೌರವಿಸಲಾಗಿದೆ.
ರಾಷ್ಟ್ರೀಯ ಪಂಚಾಯತ್​ ರಾಜ್​ ದಿನಾಚರಣೆಯಲ್ಲಿ ಬೆಂಗಳೂರು ದಣ ಜಿಲ್ಲಾ ಪಂಚಾಯಿತಿಯಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೃಷ್ಣಮೂರ್ತಿ ಹಾಗೂ ಗ್ರಂಥಾಲಯ ಮೇಲ್ವಿಚಾರಕಿ ಚೈತ್ರಾ ರವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಗ್ರಾಪಂ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಭಿವೃದ್ಧಿ ಅಧಿಕಾರಿ ಕೃಷ್ಣಮೂರ್ತಿ, ಸರ್ಕಾರ ಗ್ರಾಮ ಪಂಚಾಯಿತಿಮಟ್ಟದಲ್ಲಿ ಉತ್ತಮ ಮಾದರಿ ಗ್ರಂಥಾಲಯಗಳನ್ನು ಗುರುತಿಸಿ ಪುರಸ್ಕಾರ ನೀಡುತ್ತದೆ.
2026ನೇ ಸಾಲಿನಲ್ಲಿ ನಮ್ಮ ಗ್ರಾಮ ಪಂಚಾಯಿತಿಯ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಗ್ರಂಥಾಲಯ ಮೇಲ್ವಿಚಾರಣೆಯನ್ನು ಉತ್ತಮವಾಗಿ ನಿರ್ವಹಿಸಿದ ಹಿನ್ನೆಲೆಯಲ್ಲಿ ಮಾದರಿ ಅರಿವು ಕೇಂದ್ರ ಎಂದು ಪುರಸ್ಕಾರ ನೀಡಿ ಜಿಪಂ ಗೌರವಿಸಿದೆ. ಗ್ರಾಮ ಪಂಚಾಯಿತಿ ಗ್ರಂಥಾಲಯಗಳು ಡಿಜಿಟಲ್​ ಸೇವೆಗಳ ಮಾಹಿತಿ ಕೇಂದ್ರವನ್ನಾಗಿ ನಿರ್ವಹಿಸುವುದು ಹಾಗೂ ಇವುಗಳನ್ನು ಸಬಲೀಕರಣಗೊಳಿಸುವ ಪಂಚಾಯಿತಿಗಳನ್ನು ಪ್ರೋತ್ಸಾಹಿಸುವುದು ಇದರ ಉದ್ದೇಶ ಎಂದರು.