ಬಿಡದಿ: ಕುರಿ ಹಾಗೂ ಮೇಕೆಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬಿಡದಿ ಪೊಲೀಸರು ಬಂಧಿಸಿದ್ದಾರೆ.
ಬಿಡದಿಯ ರಂಗೇಗೌಡನದೊಡ್ಡಿ ಗ್ರಾಮದ ರಾಕೇಶ್ (19) ಹಾಗೂ ಇನ್ನೊಬ್ಬ ಕಾನೂನು ಸಂರ್ಷಕ್ಕೆ ಒಳಗಾದ ಬಾಲಕ ಬಂಧಿತರು.
ಮಾ.5ರಂದು ರಾತ್ರಿ ತಾಳಗುಪ್ಪೆ ಗ್ರಾಮದ ಲಕ್ಷ$್ಮಮ್ಮ ಅವರ ತೋಟದಲ್ಲಿನ ಮೇಕೆ ಫಾಮ್ರ್ ಬೀಗ ಮುರಿತು ಕಳ್ಳರು 7 ಮೇಕೆ ಹಾಗೂ 7 ಕುರಿಗಳನ್ನು ಕದ್ದು ಪರಾರಿಯಾಗಿದ್ದರು. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಮಾ.6ರಂದು ದೂರು ದಾಖಲಾಗಿತ್ತು. ಸಿಪಿಐ ವಿಜಯ ಕುಮಾರ್ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡ ಬಿಡದಿ ಠಾಣೆ ಪಿಎಸ್ಐ ದೇವರಾಜ್, ಸಿಬ್ಬಂದಿ ಶ್ರೀನಿವಾಸ್, ಪ್ರಜ್ವಲ್, ನಂದೀಶ್ ಕುಮಾರ್, ಹುಸೇನ್ ಸಾಬ್, ಜಿಲ್ಲಾ ತಾಂತ್ರಿಕ ವಿಭಾಗದ ಮಹದೇವ್ ಆರೋಪಿಗಳನ್ನು ಬಂಧಿಸಿ ಕುರಿ, ಮೇಕೆಗಳು ಹಾಗೂ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ 2 ಬೈಕ್ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.