ಬಿಡದಿ ಪಟ್ಟಣದ ಬೈರಮಂಗಲ ಕ್ರಾಸ್​ ಬಳಿಯ ಹೋಟೆಲ್​ವೊಂದರ ಮುಂದೆ ಕೊಳಚೆ ನೀರು ಹೊರ ಬರುತ್ತಿದೆ. 
ಬೆಂಗಳೂರು ದಕ್ಷಿಣ

ಬೆಂಗ್ಳೂರು-ಮೈಸೂರು ಹೆದ್ದಾರಿಯಲ್ಲಿ ಕೊಳಚೆ Sewage on the Highway

ಬಿಡದಿ: ಪಟ್ಟಣದ ಬೈರಮಂಗಲ ಕ್ರಾಸ್​ನ ಹೆದ್ದಾರಿಯಲ್ಲಿ ತ್ಯಾಜ್ಯ ನೀರು ಹರಿಯುತ್ತಿರುವ ಪರಿಣಾಮ ಸಾರ್ವಜನಿಕರು, ವಾಹನ ಸವಾರರು ಮೂಗು ಮುಚ್ಚಿಕೊಂಡೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು.. ಬೈರಮಂಗಲ ಕ್ರಾಸ್​ ಬಳಿಯ ಹೋಟೆಲ್​ಗಳ ಮುಂದೆ ಕಲುಷಿತ ನೀರು ಹೊರ ಬಂದು ಬೆಂಗಳೂರು&ಮೈಸೂರು ಹೆದ್ದಾರಿಯಲ್ಲಿ ಹರಿಯುತ್ತಿದೆ. ಅದರ ದುರ್ವಾಸನೆಯಿಂದ ಹೆದ್ದಾರಿಯಲ್ಲಿ ಸಂಚಾರ ಮಾಡುವ ವಾಹನ ಸವಾರರಿಗೆ ಅದರಲ್ಲೂ ಬೈಕ್​ ಸವಾರರಿಗೆ ಹೆಚ್ಚಿನ ಕಿರಿಕಿರಿಯಾಗುತ್ತಿದ್ದು, ಮೂಗು ಮುಚ್ಚಿಕೊಂಡೇ ಓಡಾಡುವ ಅನಿವಾರ್ಯತೆ ಎದುರಾಗಿದೆ. ಸತತ 3&4 ದಿನಗಳಿಂದ ನೀರು ಹೊರ ಬಂದು ಹೆದ್ದಾರಿಯಲ್ಲೇ ಮಡುಗಟ್ಟಿದ್ದರೂ ಅಧಿಕಾರಿಗಳು ಯಾವುದೇ ಕ್ರಮವಹಿಸುತ್ತಿಲ್ಲ.
ಹೆದ್ದಾರಿ ಪಕ್ಕದಲ್ಲಿನ ಚರಂಡಿ ಬ್ಲಾಕ್​ ಆಗಿ ನೀರು ಹೊರಬರುತ್ತಿದೆಯೋ?, ಹೋಟೆಲ್​ಗಳ ತ್ಯಾಜ್ಯ ನೀರಿನ ಪೈಪ್​ ಒಡೆದು ನೀರು ಹೊರ ಬರುತ್ತಿದೆಯೋ ಮಾಹಿತಿ ಇಲ್ಲ. ಆದರೆ ಇದನ್ನು ಕಂಡು ಕಾಣದಂತೆ ಅಲ್ಲಿನ ಹೋಟೆಲ್​ ಮಾಲೀಕರು ಹಾಗೂ ಸಂಬಂಧಿತ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಹೀಗೇ ಬಿಟ್ಟರೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಬಂದು, ಹೆದ್ದಾರಿಯುದ್ದಕ್ಕೂ ಹರಿಯಲಿದೆ.
"

ಬೆಂಗಳೂರು&ಮೈಸೂರು ಹೆದ್ದಾರಿಯಲ್ಲಿ ತ್ಯಾಜ್ಯ ನೀರು ಹರಿಯುತ್ತಿರುವ ಪರಿಣಾಮ ಸಾರ್ವಜನಿಕರು ಬಾಯಿಗೆ ಬಟ್ಟೆ ಕಟ್ಟಿಕೊಂಡು ಸಂಚರಿಸಬೇಕಿದೆ. ಅದರಲ್ಲೂ ದ್ವಿಚಕ್ರ ವಾಹನಗಳಲ್ಲಿ ಹೋಗುವಾಗ ಪಕ್ಕದಲ್ಲಿ ವೇಗವಾಗಿ ವಾಹನಗಳು ಬಂದರೆ ಕೊಳಚೆ ನೀರು ಸಿಡಿಯುತ್ತಿದೆ.