ರಾಮನಗರದ ಆರ್ ಎಸ್ ಕೆಯಲ್ಲಿ ಕಾಯುತ್ತಿರುವ ರೈತರು 
ಬೆಂಗಳೂರು ದಕ್ಷಿಣ

ಇ-ಕೆವೈಸಿಗೆ ಕೈಕೊಟ್ಟ ಸರ್ವರ್

ಪ್ರಮುಖ ಮುಖ್ಯಾಂಶಗಳು

  • ಫ್ರೂಟ್, ಭೂಮಿ ದತ್ತಾಂಶಗಳ ಸಿಂಕ್ರೊನೈಜ್‌ಗೆ ಪರದಾಟ
  • ರೈತರು ಹೈರಾಣ
ರಾಮನಗರ
ಕೇಂದ್ರ ಸರ್ಕಾರದ ನಿರ್ದೇಶನದಂತೆ ಸ್ಟೇಟ್ ಫಾರ್ಮರ್ ರಿಜಿಸ್ಟಿçà ಸ್ಥಾಪಿಸುವ ಸಂಬAಧ ಆರಂಭಿಸಿರುವ ಇ-ಕೆವೈಸಿ ಪ್ರಕ್ರಿಯೆಗೆ ಸರ್ವರ್ ಸಮಸ್ಯೆ ಕಾಡುತ್ತಿದೆ.
ಫ್ರೂಟ್ ಹಾಗೂ ಭೂಮಿ ದತ್ತಾಂಶಗಳನ್ನು ನಿಯತವಾಗಿ ಸಿಂಕ್ರೊನೈಜ್ ಮಾಡಲು ಫೆ.26ರ ಒಳಗೆಗೆ ಇ-ಕೆವೈಸಿ ಮಾಡಿಸಲೇಬೇಕು ಎನ್ನುವ ಗಡುವನ್ನು ಕೃಷಿ ಇಲಾಖೆ ನೀಡಿದೆ. ಇದರಿಂದಾಗಿ ಇಡೀ ಕೃಷಿಕ ಸಮುದಾಯ ರೈತ ಸಂಪರ್ಕ ಕೇಂದ್ರ ಸೇರಿದಂತೆ ಸರ್ಕಾರ ನಿಗದಿಪಡಿಸಿದ ಇಲಾಖೆಗಳ ಮುಂದೆ ಜಮಾಯಿಸಿತ್ತು. ಆದರೆ, ಸರ್ವರ್ ಕೈಕೊಟ್ಟ ಕಾರಣದಿಂದಾಗಿ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ನಿರುತ್ತರರಾಗುವಂತೆ ಆಗಿದೆ.

ರೈತರ ಬೇಸರ

ಪ್ರತಿ ಸರ್ಕಾರಗಳು ಒಂದಿಲ್ಲೊAದು ಹೊಸ ಕಾನೂನು ಜಾರಿಗೆ ತರಲು ಮುಂದಾಗುತ್ತಲೇ ಇರುತ್ತವೆ. ಆದರೆ, ಪ್ರತಿ ಬಾರಿ ಸಮಸ್ಯೆ ಆಗುವುದು ಮಾತ್ರ ರೈತರಿಗೆ. ಈಗ ಏಕಾಏಕಿ ಇ-ಕೆವೈಸಿ ಮಾಡಿಸಿ ಎಂದರೆ ಎಲ್ಲರೂ ಒಟ್ಟಾಗಿಯೇ ಬಂದಿz್ದÉÃವೆ. ಎಲ್ಲ ಕಡೆ ಏಕಕಾಲದಲ್ಲಿ ಇ-ಕೆವೈಸಿ ಮಾಡಿಸುವುದರಿಂದ ಸರ್ವರ್ ಸಮಸ್ಯೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೆ ಏಕೆ ಇ-ಕೆವೈಸಿಗೆ ಗಡುವು ನಿಗದಿ ಮಾಡಬೇಕಿತ್ತು? ಎಂಬುದು ರೈತರ ಪ್ರಶ್ನೆ.

ಬೇಕಿದೆ 20 ನಿಮಿಷ

ಪ್ರತಿ ರೈತರ ಫ್ರೂಟ್ ಐಡಿಗೆ ಸಿಂಕ್ರೊನೈಜ್ ಮಾಡುವ ಪ್ರಕ್ರಿಯೆಗೆ ಸರ್ವರ್ ಸಮಸ್ಯೆಯಿಂದಾಗಿ ಕನಿಷ್ಠ 20 ನಿಮಿಷಗಳ ಕಾಲಾವಕಾಶ ಬೇಕಿದೆ. ಕೆಲವೊಮ್ಮೆ ಆಧಾರ್ ಕಾರ್ಡ್ ನಂಬರ್ ಸಲ್ಲಿಕೆ ಮಾಡಿ, ಓಟಿಪಿ ನೀಡಿದರೂ ನಿಧಾನಗತಿಯ ಸರ್ವರ್‌ನಿಂದಾಗಿ ಅದು ತಿರಸ್ಕೃತಗೊಂಡು ಕೆಲವರನ್ನು ಮನೆಗೆ ಕಳುಹಿಸಿದ ಉದಾಹರಣೆಯೂ ಇವೆ.

ತರಾತುರಿ ಏಕೆ?

ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು ಅಗ್ರಿಸ್ಟಾಕ್ ಘಟಕದಡಿಯಲ್ಲಿ ಕೇಂದ್ರ ಸರ್ಕಾರದ ಮಾನದಂಡಗಳನ್ನು ಅಳವಡಿಸಿ ಭೂಹಿಡುವಳಿಗಳನ್ನು ಹೊಂದಿರುವ ರಾಜ್ಯದ ಎಲ್ಲ ರೈತರ ವಿವರಗಳನ್ನೊಳಗೊಂಡ ಸ್ಟೇಟ್ ಫಾರ್ಮರ್ ರಿಜಿಸ್ಟ್ರೀ ಸ್ಥಾಪಿಸಲು ಯೋಜಿಸಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ಫ್ರೂಟ್ ಹಾಗೂ ಭೂಮಿ ದತ್ತಾಂಶಗಳನ್ನು ನಿಯತವಾಗಿ ಸಿಂಕ್ರೋನೈಜ್ ಮಾಡುವುದು ಅತಿ ಮುಖ್ಯವಾಗಿದೆÉ. ಇದರೊಂದಿಗೆ ಫ್ರೂಟ್ ತಂತ್ರಾಂಶದಲ್ಲಿ ರೈತರ ಇ-ಕೆವೈಸಿ ಮತ್ತು ರೈತರ ಸಹಮತಿ ಪತ್ರವನ್ನು ವಿದ್ಯುನ್ಮಾನ ರೀತಿಯಲ್ಲಿ ತೆಗೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದಿಂದ ಒಂದು ಕೇಂದ್ರ ನೋಂದಾಯಿತ ರೈತರ ಸಂಖ್ಯೆಯನ್ನು (ಸೆಂಟ್ರಲ್ ಫಾರ್ಮರ್ ಐಡಿ) ಸೃಜಿಸಲಾಗುತ್ತದೆ. ಈ ರೀತಿಯಾಗಿ ಸೃಜಿಸಲಾದ ಕೆಂದ್ರ ನೋಂದಾಯಿತ ರೈತ ಸಂಖ್ಯೆಯನ್ನು ಕೇಂದ್ರ ಸರ್ಕಾರದಿಂದ ಅನುಷ್ಠಾನಗೊಳಿಸುವ ಪಿ.ಎಂ. ಕಿಸಾನ್ ಯೋಜನೆ ಸೇರಿದಂತೆ ಎಲ್ಲ ಯೋಜನೆಗಳಲ್ಲೂ ಕಡ್ಡಾಯವಾಗಿ ಬಳಸಲಾಗುತ್ತದೆ.
ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಾದ ಬರಪರಿಹಾರ, ಬೆಳೆ ವಿಮೆ ಹಾಗೂ ಪಿಎಂ ಕಿಸಾನ್ ಯೋಜನೆಯಡಿ ಸೌಲಭ್ಯಗಳನ್ನು ಪಡೆಯಲು ರೈತರು ಸಮೀಪದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರ, ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖಾ ಕಚೇರಿಗಳನ್ನು ತಮ್ಮ ಆಧಾರ್ ಕಾರ್ಡ್, ಆಧಾರ್‌ನೊಂದಿಗೆ ಜೋಡಣೆಯಾಗಿರುವ ಮೊಬೈಲ್, ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಹಾಗೂ ಎಲ್ಲ ಪಹಣಿಗಳನ್ನು ಗುರುವಾರದೊಳಗೆ (ಫೆ.26) ಕಡ್ಡಾಯವಾಗಿ ಸಂಪರ್ಕಿಸಿ ಇ-ಕೆವೈಸಿ ಮಾಡಿಸುವಂತೆ, ಇಲ್ಲವಾದರೆ ಕೇಂದ್ರ/ರಾಜ್ಯ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತೀರಿ ಎನ್ನುವ ಎಚ್ಚರಿಕೆ ಸಂದೇಶವನ್ನು ರೈತರಿಗೆ ರವಾನಿಸಲಾಗಿದೆ. ಇದರಿಂದ ಆತಂಕಗೊAಡ ರೈತರು ರೈತ ಸಂಪರ್ಕ ಕೇಂದ್ರ ಸೇರಿದಂತೆ ಹಲವು ಕಡೆಗಳಿಗೆ ಎಡತಾಕುತ್ತಿದ್ದಾರೆ.
ಎಲ್ಲವನ್ನೂ ಸರಿ ಮಾಡಿದ್ದೇವೆ
ಇ-ಕೆವೈಸಿಗೆ ಸರ್ವರ್ ಸಮಸ್ಯೆಕಾಡಿದನ್ನು ಕೃಷಿ ಇಲಾಖೆ ಒಪ್ಪಿಕೊಂಡಿದೆ. ಆದರೆ ಇದನ್ನು ಮಧ್ಯಾಹ್ನದ ವೇಳೆಗೆ ಸರಿಪಡಿಸಲಾಗಿದೆ ಎನ್ನುವ ಮಾಹಿತಿ ಅಧಿಕಾರಿಗಳದ್ದು. ಎಲ್ಲ ಆರ್‌ಎಸ್‌ಕೆಗಳಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಇ-ಗರ್ವನೆನ್ಸ್ ಇಲಾಖೆಗೆ ಮಾಹಿತಿ ನೀಡಿ ಮಧ್ಯಾಹ್ನ 1 ಗಂಟೆ ವೇಳೆಗೆ ಸರಿಪಡಿಸಲಾಗಿದೆ ಎನ್ನುವ ಜಂಟಿ ಕೃಷಿ ನಿರ್ದೇಶಕಿ ಅಂಬಿಕಾ, ಮಧ್ಯಾಹ್ನದ ನಂತರ ವೇಗವಾಗಿ ನೋಂದಣಿ ಆಗಿದೆ ಎಂದು ಮಾಹಿತಿ ನೀಡಿದರು. ಆದರೆ ಹೆಚ್ಚಿನ ಆರ್‌ಎಸ್‌ಕೆಗಳಲ್ಲಿ ಸಂಜೆ ಆದರೂ ನಿಧಾನಗತಿಯ ಸರ್ವರ್ ಸಿಬ್ಬಂದಿ ಮತ್ತು ರೈತರು ಇಬ್ಬರನ್ನೂ ಹೈರಾಣಾಗಿಸಿದೆ.
==
ಆರಂಭಿಕವಾಗಿ ಸರ್ವರ್ ಸಮಸ್ಯೆ ಇತ್ತು, ನಂತರ ಇದನ್ನು ಸರಿಪಡಿಸಲಾಗಿದೆ. ಮಧ್ಯಾಹ್ನದ ನಂತರ ಇ-ಕೆವೈಸಿ ಪ್ರಕ್ರಿಯೆ ವೇಗ ಪಡೆದುಕೊಂಡಿದೆ.
| ಅಂಬಿಕಾ
ಜAಟಿ ನಿರ್ದೇಶಕಿ, ಕೃಷಿ ಇಲಾಖೆ ಬೆಂ. ದಕ್ಷಿಣ ಜಿಲ್ಲೆ
--
ಸರ್ಕಾರ ತರಾತುರಿಯಲ್ಲಿ ಇ-ಕೆವೈಸಿ ಮಾಡಿಸಿ ಎಂದು ಹೇಳಿದೆ. ಇದರಿಂದಾಗಿ ರೈತರು ಎಲ್ಲ ಕೆಲಸಗಳನ್ನು ಬಿಟ್ಟು ರೈತ ಸಂಪರ್ಕ ಕೇಂದ್ರಗಳು ಸೇರಿದಂತೆ ವಿವಿಧ ಇಲಾಖೆಗಳ ಬಳಿ ಕಾಯುತ್ತ ಕುಳಿತುಕೊಳ್ಳುವಂತಾಗಿದೆ. ಸರ್ವರ್ ಸಮಸ್ಯೆಯಿಂದಾಗಿ ಅಧಿಕಾರಿಗಳು ಸಹ ಕೈ ಚೆಲ್ಲಿ ಕುಳಿತಿದ್ದಾರೆ. ತಕ್ಷಣವೇ ಸರ್ಕಾರ ಸರ್ವರ್ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಗಡುವು ವಿಸ್ತರಿಸಬೇಕು.
| ಕೃಷ್ಣಪ್ಪ
ರೈತ, ಎಂಜಿ ಪಾಳ್ಯ, ರಾಮನಗರ