ಕೈಲಾಂಚ ಹೋಬಳಿ ಅಂಕನಹಳ್ಳಿಯಲ್ಲಿ ರೈತರ ಬೋರ್​ವೆಲ್​ಗೆ ಅಳವಡಿಸಿದ್ದ ಮೋಟಾರ್​ ಕೇಬಲ್​ ಕಳವಾಗಿರುವುದು. 
ಬೆಂಗಳೂರು ದಕ್ಷಿಣ

ಬೋರ್​ವೆಲ್​ ಪರಿಕರಗಳ ಸರಣಿ ಕಳವು

ಕೈಲಾಂಚ: ಅಂಕನಹಳ್ಳಿಯಲ್ಲಿ ಶನಿವಾರ ರಾತ್ರಿ ನಾಗರಾಜು, ಗವೀಗೌಡ, ಪಾರ್ಥಸಾರಥಿ, ಕಳಸೇಗೌಡ, ರಮೇಶ್​, ಪುಟ್ಟಸ್ವಾಮಣ್ಣ, ಜಿ. ವೇಣುಗೋಪಾಲ್​, ಶಿವಣ್ಣ, ರಾಮ್​ಗೋಪಾಲ್​, ಸುನಿಲ್​ಕುಮಾರ್​ ಎಂಬುವವರ ಪಂಪ್​ಸೆಟ್​ ಸಲಕರಣೆಗಳು ಕಳುವಾಗಿವೆ.
ಬೋರ್​ವೆಲ್​ ಪರಿಕರಗಳನ್ನು ಕೊಠಡಿಯಲ್ಲಿ ಸಂರಕ್ಷಣೆ ಮಾಡಿದ್ದರೂ ಸಹ ಕಳ್ಳರು ರಾತ್ರಿ ವೆಳೆ ಬಾಗಿಲು ಮುರಿದು
ಮೋಟಾರ್​, ಕೇಬಲ್​, ಸ್ಟಾಟರ್​ಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.