ಸಿಸಿ ಕ್ಯಾಮರದಲ್ಲಿ ಕಳ್ಳತನದ ದೃಶ್ಯ ಸೆರೆ
ಮಾಗಡಿ: ತಾಲೂಕಿನ ಹೋಸಪಾಳ್ಯ ಸರ್ಕಲ್ನ ಶ್ರೀ ನರಸಿಂಹಸ್ವಾಮಿ ಬೇಕರಿ, ಶ್ರೀರಂಗನಾಥ ಮೆಡಿಕಲ್ಸ್ ಹಾಗೂ ಶ್ರೀರಂಗ ಕ್ಲಿನಿಕ್ನಲ್ಲಿ ಸರಣಿ ಕಳ್ಳತನವಾಗಿದೆ.
ಭಾನುವಾರ ನಸುಕಿನಲ್ಲಿ ಬೇಕರಿಯ ಬಾಗಿಲು ಮುರಿದ ಕಳ್ಳರು ಡ್ರಾಯರ್ನಲ್ಲಿದ್ದ 8 ಸಾವಿರ ರೂ. ನಗದು, 10 ಸಾವಿರ ಮೌಲ್ಯದ ಬಿಸ್ಕೆಟ್ ಸೇರಿ ಇತರ ಪದಾರ್ಥಗಳು, ಮೆಡಿಕಲ್ ಸ್ಟೋರ್ನಲ್ಲಿ ಸೌಂದರ್ಯ ವರ್ಧಕ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾನೆ. ಮೆಡಿಕಲ್ ಸ್ಟೋರ್ನಲ್ಲಿ ಅಳವಡಿಸಿರುವ ಸಿಸಿ ಕ್ಯಾಮರದಲ್ಲಿ ದೃಶ್ಯ ಸೆರೆಯಾಗಿದೆ.
ಕಳ್ಳತನದ ಬಗ್ಗೆ ಮೆಡಿಕಲ್ ಮತ್ತು ಕ್ಲಿನಿಕ್ ಮಾಲೀಕ ಧನಂಜಯ ಹಾಗೂ ಬೇಕರಿ ಮಾಲೀಕರು ಮಾಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.