ಚನ್ನಪಟ್ಟಣದ ವಿವೇಕಾನಂದನಗರದ ಚಾನಲ್ ರಸ್ತೆಯಲ್ಲಿರುವ ಭಾರತ ವಿಕಾಸ ಪರಿಷತ್ ಕಚೇರಿಯಲ್ಲಿ ಭಾವಿಪ ಪದಾಧಿಕಾರಿಗಳಾದ ಆಯ್ಕೆ ಸಭೆ ನಡೆಯಿತು. ಅಧ್ಯ ಪುಟ್ಟಸ್ವಾಮಿಗೌಡ, ಕಾರ್ಯದರ್ಶಿ ಯೋಗೇಶ್ ಚಕ್ಕೆರೆ, ಖಜಾಂಚಿ ವಿ.ಟಿ.ರಮೇಶ್ ಸೇರಿದಂತೆ ಹಲವರು ಇದ್ದರು.
ಚನ್ನಪಟ್ಟಣ: ಭಾರತ ವಿಕಾಸ ಪರಿಷತ್ ಕಣ್ವ ಶಾಖೆಯ 2026&27ನೇ ಸಾಲಿನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, ಅಧ್ಯರಾಗಿ ಪುಟ್ಟಸ್ವಾಮಿಗೌಡ, ಕಾರ್ಯದರ್ಶಿಯಾಗಿ ಯೋಗೇಶ್ ಚಕ್ಕೆರೆ , ಖಜಾಂಚಿಯಾಗಿ ವಿ.ಟಿ. ರಮೇಶ್ ಸರ್ವಾನುಮತದಿಂದ ಪುನರ್ ಆಯ್ಕೆಯಾದರು.
ನಗರದ ವಿವೇಕಾನಂದನಗರದ ಚಾನಲ್ ರಸ್ತೆಯಲ್ಲಿರುವ ಭಾರತ ವಿಕಾಸ ಪರಿಷತ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸರ್ವಸದಸ್ಯರ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಎರಡನೇ ಅವಧಿಗೆ ಅಧ್ಯರಾಗಿ ಆಯ್ಕೆಯಾದ ಪುಟ್ಟಸ್ವಾಮಿಗೌಡ ಮಾತನಾಡಿ, ಪರಿಷತ್ನ ಸಂಪರ್ಕ, ಸಹಯೋಗ, ಸಂಸ್ಕಾರ, ಸೇವೆ ಮತ್ತು ಸಮರ್ಪಣೆ ತತ್ವಗಳಡಿ ಕಳೆದ ಅವಧಿಯಲ್ಲಿ ಹಲವು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸದಸ್ಯರ ವಿಶ್ವಾಸದಿಂದ ಮತ್ತೆ ಆಯ್ಕೆಯಾಗಿದ್ದು, ಮುಂದಿನ ದಿನಗಳಲ್ಲಿ
ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು. ಕಾರ್ಯದರ್ಶಿ ಯೋಗೇಶ್ ಚಕ್ಕೆರೆ ಮಾತನಾಡಿ, ದೇಶಭಕ್ತಿ, ಸಂಸತಿ ಸಂರಣೆ ಮತ್ತು ಸಾಮಾಜಿಕ ಸೇವೆಯ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣದ ದಿಸೆಯಲ್ಲಿ ಸಂಸ್ಥೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಸದಸ್ಯರ ಸಹಕಾರದೊಂದಿಗೆ ಸೇವಾ ಚಟುವಟಿಕೆಗಳನ್ನು ವಿಸ್ತರಿಸಲಾಗುವುದು ಎಂದರು.
ಖಜಾಂಚಿ ವಿ.ಟಿ. ರಮೇಶ್, ವಸಂತಕುಮಾರ್ (ಪ್ರಾಂತ ಪದಾಧಿಕಾರಿ), ಗುರುಮಾದಯ್ಯ (ಪ್ರಾಂತ ಪದಾಧಿಕಾರಿ), ಬಿ.ಎನ್. ಕಾಡಯ್ಯ (ಗೌರವಾಧ್ಯ), ಕರಿಯಪ್ಪ (ಉಪಾಧ್ಯ), ಜಯಲ್ಮಮ್ಮ ನಂಜಪ್ಪ (ಉಪಾಧ್ಯೆ), ಕೃಷ್ಣಕುಮಾರ್ (ಸಹ ಕಾರ್ಯದರ್ಶಿ), ಬಸವರಾಜು (ಸಂಟನಾ ಕಾರ್ಯದರ್ಶಿ) ಸೇರಿದಂತೆ ಹಲವಾರು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.