ಗೋದಾಮಿಗೆ ಬೆಂಕಿ ಬಿದ್ದಿರುವುದು. 
ಬೆಂಗಳೂರು ದಕ್ಷಿಣ

ಬೆಂಕಿಗೆ ಸ್ಕೂಟರ್​ಗಳು ಆಹುತಿ

ರೇಷ್ಮೆ ನಗರ ಡೆಸ್ಕ್
ರಾಮನಗರ: ತಾಲೂಕಿನ ವಡೇರಹಳ್ಳಿ ಸಮೀಪದ ಗೋದಾಮಿನಲ್ಲಿ ಅಂಗವಿಕಲರಿಗೆ ವಿತರಣೆ ಮಾಡಲು ನಿಲ್ಲಿಸಿದ್ದ ನಾಲ್ಕುಚಕ್ರದ 10 ಸ್ಕೂಟರ್​ಗಳು ಗುರುವಾರ ರಾತ್ರಿ ಬೆಂಕಿ ಆಹುತಿಯಾಗಿವೆ.
ವಡೇರಹಳ್ಳಿಯಲ್ಲಿರುವ ಗೋದಾಮಿನಲ್ಲಿ ವಿಕಲಾಂಗರಿಗೆ ನೀಡಲು ನಾಲ್ಕು ಚಕ್ರದ 32 ಸ್ಕೂಟರ್​ಗಳನ್ನು ಇರಿಸಲಾಗಿತ್ತು. ಬಯಲು ಪ್ರದೇಶದಲ್ಲಿ ಇರುವ ಈ ಗೋದಾಮು ಬೋಜರಾಜ್​ ಎಂಬುವರಿಗೆ ಸೇರಿದ್ದಾಗಿದ್ದು, ಗುರುವಾರ ರಾತ್ರಿ ಕಿಡಿಗೇಡಿಗಳು ಗೋದಾಮಿಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿಜೋರಾಗಿ ಉರಿಯುತ್ತಿರುವುದನ್ನು ಕಂಡ ಸ್ಥಳಿಯರು ಮಾಲೀಕರಿಗೆ ಸುದ್ದಿಮುಟ್ಟಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರಾದರೂ 10 ಸ್ಕೂಟರ್​ಗಳು ಹಾನಿಯಾಗಿವೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.