ಕನಕಪುರ: ತಾಲೂಕಿನ ಹೊಳರಗಲ್ಲು ಗ್ರಾಮದ ಗೊಟ್ಟಿಗೆರೆ ರಾಮಕೃಷ್ಣ ಭಟ್ ಅವರ ಶ್ರೀಗಂಧದ ತೋಟದಲ್ಲಿ 20 ಗಂಧದ ಮರಗಳನ್ನು ಖದೀಮರು ಇತ್ತೀಚೆಗೆ ಕಳ್ಳತನ ಮಾಡಿದ್ದಾರೆ.
ರಾಮಕೃಷ್ಣ ಭಟ್ ಅವರು ಗಂಧದ ತೋಟದ ಸುತ್ತ ಕಾಂಪೌಂಡ್ ನಿರ್ಮಿಸಿ, ಸಿಸಿ ಟಿವಿ ಅಳವಡಿಸಿದ್ದಾರೆ. ಅಲ್ಲದೆ ಮರಗಳ ರಕ್ಷಣೆಗೆ ಕಾರ್ಮಿಕರನ್ನೂ ನೇಮಿಸಿದ್ದಾರೆ. ಆದರೂ ರಾತ್ರೋರಾತ್ರಿ ಗಂಧದ ಮರಗಳು ಕಳ್ಳತನವಾಗಿವೆ ಎಂದು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ನ.28ರಂದು ರಾಮಕೃಷ್ಣ ಭಟ್ ಅವರು ದುರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಬಳಿಕ ಪೋಲಿಸರು ಸ್ಥಳ ಪರಿಶೀಲಿಸಿದ್ದಾರೆ.