ಕ್ರೈಂ 
ಬೆಂಗಳೂರು ದಕ್ಷಿಣ

ಪೆಟ್ರೋಲ್ ಬಂಕ್ ನಲ್ಲಿ ಹಣ ಕಸಿದು ಪರಾರಿ

ಪ್ರಮುಖ ಮುಖ್ಯಾಂಶಗಳು

  • ಬಿಡದಿಯಲ್ಲಿ ಘಟನೆ
  • ಪೆಟ್ರೋಲ್ ಹಾಕಿಸಿಕೊಂಡು ಹಣ ಕಸಿದು ಪರಾರಿ
  • ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ
ಬಿಡದಿ: ಪೆಟ್ರೋಲ್ ಬಂಕ್ ನಲ್ಲಿ ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡು ಪೆಟ್ರೋಲ್ ಹಾಕಿದ ಮಹಿಳೆ ಕೈಯಲ್ಲಿದ್ದ ಹಣವನ್ನ ಕಿತ್ತು ಪರಾರಿಯಾಗಿರುವ ಘಟನೆ ಕಾಡುಮನೆ ಕ್ರಾಸ್ ಬಳಿ ನಡೆದಿದೆ.
ಕಾಡುಮನೆ ಕ್ರಾಸ್ ಬಳಿಯ ಕೋಕೋ ಬಿಡದಿ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ನಲ್ಲಿ ಈ ಘಟನೆ ನಡೆದಿದೆ. ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಕೇರಳ ರಾಜ್ಯದ ನೋಂದಣಿಯ ಕೆಂಪು ಬಣ್ಣದ ಸ್ವಿಫ್ಟ್ ಕಾರು ಚಾಲಕ ಪೆಟ್ರೋಲ್ ಹಾಕಿಸಿಕೊಳ್ಳಲು ಬಂಕ್ ಗೆ ಬಂದಿದ್ದ.
ಈ ವೇಳೆ ಉಷಾ ಅವರು ಹಾಕುತ್ತಿದ್ದ ಪಂಪ್ ಬಳಿ ಬಂದು 2000 ಕ್ಕೆ ಪೆಟ್ರೋಲ್ ಹಾಕಿ ಎಂದು ಹೇಳಿದ್ದ ಪೆಟ್ರೋಲ್ ಹಾಕಿದ ನಂತರ ಪೋನ್ ಪೇ ಮಾಡುವುದಾಗಿ ಹೇಳಿ ಸ್ಕ್ಯಾನ್ ಮಾಡಿದ್ದ ಆದರೆ ಆಗದ ಕಾರಣ ಸ್ನೇಹಿತನ ಮೊಬೈಲ್ ನಿಂದ ಹಣ ಹಾಕಿಸುವುದಾಗಿ ಸ್ಕ್ಯಾನ್ ಫೋಟೋ ತಗೆದುಕೊಂಡು ಕಳುಹಿಸಿದ್ದ.
ಅಲ್ಲೂ ಆಗುತ್ತಿಲ್ಲ ಹಣವನ್ನೆ ನೀಡುತ್ತೇನೆ ಎಂದು ಜೇಬಿಗೆ ಕೈ ಹಾಕಿದ್ದ ಇದೇ ವೇಳೆ ಉಷಾ ಅವರು ಜೇಬಿನಲ್ಲಿದ್ದ 13.000 ಹಣವನ್ನ ತಗೆದು ಕೈಯಲ್ಲಿ ಹಿಡಿದುಕೊಂಡು ಚಾಲಕನ ಹತ್ತಿರ ಹೋಗುತ್ತಿದಂತೆ ಹಣವನ್ನ ಕಿತ್ತು ಕಾರಿನಲ್ಲಿ ಪರಾರಿಯಾಗಿದ್ದಾನೆ. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.