ಅಕ್ರಮವಾಗಿ ಅಕ್ಕಿ ದಾಸ್ತಾನು ಮಾಡಿರುವುದು.
- ಗ್ರಾಮೀಣ ಭಾಗದಲ್ಲಿ ಖರೀದಿಗೆ ಮುಂದಾಗ ಖದೀಮರು
- ಹೆಚ್ಚಿನ ಹಣದ ಆಸೆಗೆ ಅಕ್ಕಿ ಮಾರುತ್ತಿರುವ ಗ್ರಾಹಕರು
- ಕಾಳಸಂತೆಕೋರರ ವಿರುದ್ಧ ಬೇಕಿದೆ ಕ್ರಮ
ರಾಮನಗರ: ಬಡವರ ಪಾಲಿನ ಹೊಟ್ಟೆ ತುಂಬಿಸುವ ಸಲುವಾಗಿ ಜಾರಿಗೆ ತಂದ ಅನ್ನಭಾಗ್ಯ ಯೋಜನೆ, ದುರಾಸೆಗಾಗಿ ಕನ್ನಹಾಕುವವರ ಪಾಲಿನ ಚಿನ್ನದ ಮೊಟ್ಟೆಯಾಗಿದ್ದು, ಜಿಲ್ಲೆಯಲ್ಲಿ ಕಾಳಸಂತೆಯನ್ನು ಅಕ್ರಮವಾಗಿ ಅಕ್ಕಿ ಮಾರಾಟ ಜಾಲ ವ್ಯಾಪಕ ರೂಪ ಪಡೆದುಕೊಂಡಿದೆ.
ಕಳೆದ ಎರಡು ವರ್ಷಗಳಿಂದ ಕಾಳ ಸಂತೆಯಲ್ಲಿ ಅಕ್ಕಿಯನ್ನು ಸಂಗ್ರಹಿಸಿ ಮಾರಾಟ ಮಾಡುವ ಜಾಲವನ್ನು ಆಹಾರ ಇಲಾಖೆ ಮತ್ತು ಪೊಲೀಸರು ಬೆಳಕಿಗೆ ತಂತಿದ್ದು, ಅನ್ನಭಾಗ್ಯ ಯೋಜನೆ ದುರಪಯೋಗವನ್ನು ಬಹಿರಂಗಪಡಿಸಿದೆ.
ಹೆಚ್ಚಿದೆ ಅಕ್ರಮ?:
ಅಕ್ರಮವಾಗಿ ಪಡಿತರ ಅಕ್ಕಿ ದಾಸ್ತಾನು ಮತ್ತು ಸಾಗಾಟಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ 26 ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. ಇಷ್ಟು ಪ್ರಕರಣಗಳಲ್ಲಿ ಒಟ್ಟು 701.25 ಕ್ವಿಂಟಾಲ್ ಪಡಿತರ ಅಕ್ಕಿ ಮತ್ತು 166.31 ಕ್ವಿಂಟಲ್ ರಾಗಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಲಭ್ಯ ಮಾಹಿತಿ ಪ್ರಕಾರ ಅನ್ನಭಾಗ್ಯ ಯೋಜನೆಯಡಿ ನೀಡಲಾಗುವ ಅಕ್ಕಿಯನ್ನು ಪಡಿತರ ಚೀಟಿದಾರರು 15-20 ರೂ.ನಂತೆ ಪ್ರತಿ ಕೆಜಿಗೆ ಕಾಳ ಸಂತೆ ಕೋರರಿಗೆ ಮಾರಾಟ ಮಾಡುತ್ತಾರೆ.
ಕಡಿಮೆ ಬೆಲೆಗೆ ಸಂಗ್ರಹಿಸಿದ ಅಕ್ಕಿಯನ್ನು ಮಂಡ್ಯ ಸೇರಿದಂತೆ ಇತರೆ ಕಡೆಗಳಲ್ಲಿ ಇರುವ ರೈಸ್ ಮಿಲ್ಗಳಿಗೆ ಸಾಗಿಸಿ ಅಲ್ಲಿ ಪಡಿತರ ಅಕ್ಕಿಗೆ ಪಾಲೀಷ್ ಮಾಡಿ, ಹೊಸ ಚೀಲದಲ್ಲಿ ಹೆಚ್ಚು ಬೆಲೆಗೆ ಬೆಂಗಳೂರು, ಮೈಸೂರು, ರಾಮನಗರ ಸೇರಿದಂತೆ ಇತರೆ ಭಾಗಗಳಲ್ಲಿ ವಿವಿಧ ಬ್ರ್ಯಾಂಡ್ ಗಳ ಹೆಸರಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಮೂಲಕ್ಕೆ ಬೀಳಬೇಕು ಏಟು:
ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಪಡಿತರವನ್ನು ಗ್ರಾಹಕರಿಗೆ ಕೊಟ್ಟ ನಂತರ ತನ್ನ ಕೆಲಸ ಮುಗಿಯಿತು ಎನ್ನುವ ಮನೋಭಾವವನ್ನು ಮೈಗೂಡಿಸಿಕೊಂಡಿದೆ. ಹೆಚ್ಚಿನ ಹಣದಾಸೆಗೆ ಪಡಿತರ ಚೀಟಿದಾರರು ಸಹ ಅಕ್ಕಿಯನ್ನು ಮಾರಿಕೊಳ್ಳುತ್ತಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಬೇಕಿದೆ. ಯಾರೆಲ್ಲಾ ಪಡಿತರ ಚೀಟಿದಾರರು ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಸ್ಥಳಿಯ ನ್ಯಾಯಬೆಲೆ ಅಂಗಡಿಯವರಿಗೆ ತಿಳಿದಿರುತ್ತದೆ. ಇವರನ್ನು ವಿಶ್ವಾಸಕ್ಕೆ ತಗೆದುಕೊಂಡು ಅಕ್ರಮಕ್ಕೆ ಕಡಿವಾಣ ಹಾಕಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರವೂ ಸಹ ಹೆಚ್ಚಿನ ಮುತುವರ್ಜಿವಹಿಸಬೇಕಿದೆ.
ಹೆದ್ದಾರಿಯಲ್ಲೇ ಹೆಚ್ಚು
ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ 700ಕ್ಕೂ ಹೆಚ್ಚು ಕ್ವಿಂಟಾಲ್ ಅಕ್ಕಿ ವಶಕ್ಕೆ ಪಡೆಯಲಾಗಿದೆಯಾದರೂ ಇದರಲ್ಲಿ ಅತಿ ಹೆಚ್ಚು ಅಕ್ಕಿ ವಶವಾಗಿದ್ದು ಬೆಂಗಳೂರು & ಮೈಸೂರು ಹೆದ್ದಾರಿಯಲ್ಲಿ ಎನ್ನುವುದು ವಿಶೇಷ. ಬೆಂಗಳೂರು ದಕ್ಷಿಣ ಜಿಲ್ಲೆ ಮಾತ್ರವಲ್ಲದೆ, ಹೊರ ಜಿಲ್ಲೆಯಲ್ಲಿಯೂ ರೇಷನ್ ಅಕ್ಕಿಯನ್ನು ಪಡಿತರ ಚೀಟಿದಾರರಿಂದ ಸಂಗ್ರಹಿಸಿ ಮಂಡ್ಯ ಮೈಸೂರಿಗೆ ಕಳಿಸುವ ವ್ಯವಸ್ಥಿತ ಜಾಲ ಹರಡಿಕೊಂಡಿದೆ. ಹೆದ್ದಾರಿಯಲ್ಲಿ ಪೊಲೀಸರು ಇಲ್ಲವೇ ಆಹಾರ ಇಲಾಕೆ ಅಧಿಕಾರಿಗಳಿಗೆ ಕಂಡರಷ್ಟೇ ಅಕ್ರಮ ಸಾಗಾಣಿಕೆ ಬೆಳಕಿಗೆ ಬರುತ್ತದೆ. ಇಲ್ಲವಾದರೆ ಹೆದ್ದಾರಿ ಅಕ್ರಮ ದಂದೆಕೋರರಿಗೆ ಅಕ್ಕಿ ಸಾಗಾಣಿಕೆಗೆ ಸೂಕ್ತ ಮಾರ್ಗವೇ ಆಗಿದೆ.
ಕಾರ್ಡ್ ಮೇಲ್ದರ್ಜೆಗೆ
ಇದರ ನಡುವೆ ಅನರ್ಹ ಬಿಪಿಎಲ್ ಕಾರ್ಡ್ದಾರನ್ನು ಗುರ್ತಿಸುವ ಕೆಲಸ ಜಿಲ್ಲೆಯಲ್ಲಿ ಚಾಲ್ತಿಯಲ್ಲಿದ್ದು, ಜಿಲ್ಲೆಯಲ್ಲಿ ಈವರೆವಿಗೂ ಒಟ್ಟು 12216 ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ ಆಗಿ ಬದಲಿಸಲಾಗಿದೆ. ಇದರಲ್ಲಿ ಕನಕಪುರದಲ್ಲಿ 3641 ಕಾರ್ಡ್ಗಳು ಎಪಿಎಲ್ಗಾಗಿ ಬದಲಾಗಿದ್ದರೆ, ರಾಮನಗರದಲ್ಲಿ 3125 ಕಾರ್ಡ್ಗಳು, ಚನ್ನಪಟ್ಟಣದಲ್ಲಿ 2562 ಮತ್ತು ಮಾಗಡಿಯಲ್ಲಿ 2888 ಕಾರ್ಡ್ಗಳು ಎಪಿಎಲ್ ಕಾರ್ಡ್ಗಳಾಗಿ ಬದಲಾಗಿವೆ.
ಸರ್ಕಾರ ನಿಗಧಿಪಡಿಸಿರುವ ಮಾನದಂಡಗಳ ಅಡಿಯಲ್ಲಿಯೇ ಅನರ್ಹ ಕಾರ್ಡ್ಗಳ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಒಂದು ವೇಳೆ ಅರ್ಹರ ಕಾರ್ಡ್ಗಳು ಎಪಿಎಲ್ಗಳಾಗಿ ಬದಲಾಗಿದ್ದರೆ, ಇದಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ಆಹಾರ ಇಲಾಕೆಗೆ ಒದಗಿಸಿದರೆ, ನಿಗಧಿತ ಸಮಯದಲ್ಲಿ ಪರಿಶೀಲಿಸಿ ಬಿಪಿಎಲ್ ಕಾರ್ಡ್ಗಳಾಗಿಯೇ ಮುಂದುವರಿಯುವಂತೆ ಇಲಾಖೆ ಮಾಡಲಿದೆ.
ಕಳೆದ ಎರಡು ವರ್ಷಗಳ ಅಂಕಿ ಅಂಶ
ಅವಧಿ ಪ್ರಕರಣಗಳು ಅಕ್ಕಿ (ಕ್ವಿಂ) ರಾಗಿ (ಕ್ವಿಂ)
ಪಡಿತರ ಅಕ್ಕಿಯನ್ನು ಸಂಗ್ರಹಿಸಿ ಸಾಗಾಣಿಕೆ ಮಾಡುವ ಅಕ್ರಮ ಚಟುವಟಿಕೆ ನಿಯಂತ್ರಿಸಲು ಇಲಾಖೆ ಕಾಯೋರ್ನ್ಮುಖವಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರವೂ ಸಹ ಮುಖ್ಯ. ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ಗಳಾಗಿ ಬದಲಾವಣೆ ಮಾಡುವ ಕೆಲಸ ಮಾಡಲಾಗುತ್ತಿದೆ.
ಉಪ ನಿರ್ದೇಶಕಿ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಕೆ,