ಜೀವಾಮೃತ ಘಟಕ 
ಬೆಂಗಳೂರು ದಕ್ಷಿಣ

ಸರ್ಕಾರಿ ನಿವೃತ್ತ ಅಧಿಕಾರಿ ಕೃಷಿ ಯಶೋಗಾಥೆ

ಮಾಗಡಿ: ವ್ಯವಸಾಯದಿಂದ ದೂರ ಉಳಿಯುವವರ ನಡುವೆ ಸರ್ಕಾರಿ ನಿವೃತ್ತ ಅಧಿಕಾರಿಯೊಬ್ಬರು ಕೃಷಿ ಪಂಡಿತರಾಗಿ, ಆಧುನಿಕ ಸಮಗ್ರ ಕೃಷಿ ಪದ್ಧತಿ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಪಟ್ಟಣದದಿಂದ 15 ಕಿಮೀ ಅಂತರದಲ್ಲಿ ಮಾಡಬಾಳ್​ ಹೋಬಳಿಯ ಚಕ್ರಭಾವಿ ಗ್ರಾಮದ ರಾಮಚಂದ್ರ ಅವರ ಕೃಷಿಕಾಯಕ ಇತರರಿಗೆ ಪ್ರೇರಣೆಯಾಗಿದೆ. ರೇಷ್ಮೆ ಇಲಾಖೆಯಲ್ಲಿ ರೇಷ್ಮೆ ವಿಸ್ತರಣಾಧಿಕಾರಿಯಾಗಿ 40 ವರ್ಷ ಸುದೀರ್ ಸೇವೆ ಸಲ್ಲಿಸಿ 4 ವರ್ಷಗಳ ಹಿಂದೆ ನಿವೃತ್ತರಾಗಿರುವ ರಾಮಚಂದ್ರ ಅವರು ಕೃಷಿ ಹಾಗೂ ತೋಟಗಾರಿಕೆಯಲ್ಲಿ ಆಸಕ್ತಿ ಹೊಂದಿದ್ದು, 25 ವರ್ಷಗಳಿಂದಲೂ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.
15 ಎಕರೆ ಜಮೀನಿನಲ್ಲಿ ಆಧುನಿಕ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು, ಜಿಕೆವಿಕೆ, ಕೆವಿಕೆ ಹಾಗೂ ತೋಟಗಾರಿಕೆ, ಕೃಷಿ ಇಲಾಖೆ ಮಾರ್ಗದರ್ಶನ ಪಡೆದು ವಿವಿಧ ಹಣ್ಣು ಬೆಳೆದು ವಾರ್ಷಿಕ 25 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಪವರ್​ ಟಿಲ್ಲರ್​ ಮೂಲಕ ರಾಮಚಂದ್ರ ಅವರೇ ಜಮೀನು ಉಳುಮೆ ಮಾಡುತ್ತಾರೆ. ಅವರ ಕೃಷಿಕಾಯಕಕ್ಕೆ ಪುತ್ರಿ ನಿತ್ಯಾ ಬೆಂಬಲವಾಗಿದ್ದಾರೆ.
ರಾಮಚಂದ್ರಯ್ಯ ಅವರ ಕೃಷಿ ಸಾಧನೆ ಕಂಡು ಜಿಲ್ಲಾ ಪ್ರಗತಿ ಪರ ರೈತ ಪ್ರಶಸ್ತಿಗೆ ಸಂಬಂಧಪಟ್ಟ ಅಧಿಕಾರಿಗಳು ಆಹ್ವಾನಿಸಿದರು. ಇದಕ್ಕೆ ಸಮ್ಮತಿಸದ ರಾಮಚಂದ್ರ ಅವರು ಎಲೆ ಮರೆಕಾಯಿಯಂತೆ ಕೃಷಿಯಲ್ಲೇ ಖುಷಿಯಾಗಿರುವ ಮೂಲಕ ಸುತ್ತಮುತ್ತಲ ಹತ್ತಾರು ರೈತರಿಗೆ ಮಾದರಿಯಾಗಿದ್ದಾರೆ. ಯುವಕರು ಕೃಷಿಯತ್ತ ಮುಖ ಮಾಡಿ ಸಾಧನೆ ಮಾಡುವಂತೆ ತಿಳಿಹೇಳುತ್ತಿದ್ದಾರೆ.
ಹೈನುಗಾರಿಕೆ
ಕೃಷಿಯೊಂದಿಗೆ ಎಮ್ಮೆ, ಮಲೆನಾಡ್​ ಗಿಡ್ಡ, ಗಿರ್​, ಶಾಹಿವಾಲ್​ ಹಸು ಸಾಕಿದ್ದು, ಪ್ರತಿ ದಿನ 25 ಲೀಟರ್​ ಹಾಲು ಕರೆದು, ಚಕ್ರಬಾವಿ ಡೇರಿಗೆ ನೀಡುತ್ತಾರೆ. ಇದೇ ಡೇರಿಗೆ ಅಧ್ಯಕ್ಷರಾಗಿರುವುದು ವಿಶೇಷ. ಹೈನುಗಾರಿಕೆಯೊಂದಿಗೆ ಜೇನು ಸಾಕಣೆಯಲ್ಲೂ ತೊಡಗಿಸಿಕೊಂಡಿದ್ದಾರೆ.
ವಿದೇಶಿ ಹಣ್ಣು
ತೋಟದಲ್ಲಿ ಬೇವು, ಮಾವು, ಶ್ರೀಗಂಧ, ತೇಗ, ಹಲಸು, ವಿವಿಧ ಬಗೆಯ ಬಾಳೆ, ಕಿತ್ತಳೆ, ಕೊಡಗು ಸ್ಟ್ರಾಬೇರಿ, ಗುವಾ, ಬೆಣ್ಣೆ ಹಣ್ಣು, ನಿಂಬೆ, ನೇರಳೆ, ಸೀಬೆ, ಮೂಸಂಬಿ, ಸೇಬು, ಸ್ಟಾರ್​ ್ರೂಟ್​, ಬ್ಯಾಲದ ಹಣ್ಣು, ಪಪ್ಪಾಯ, ಬರೋಬಾ ್ರೂಟ್​, ಸೀತಾಫಲ, ಬೆಟ್ಟದ ನೆಲ್ಲಿ, ಮಿರಕುಲ್​ ್ರೂಟ್​, ಪೀನಟ್​ ಬಟರ್​, ಬ್ರೆಡ್​ ್ರೂಟ್​, ಬ್ಲೂಬೆರಿ, ಸಪೋಟ, ಮರ ಸೇಬು, ಪನ್ನೇರಳೆ, ದಾಳಿಂಬೆ, ಅಂಜೂರ, ಕರ್ಜೂರ ಸೇರಿದಂತೆ ವಿದೇಶಿ ತಳಿಯಾದ ತೈವಾನು ಮ್ಯಾಂಗೋ, ಜಪಾನಿನ ಮಿಯಾ ಜಾಕಿ ಸೇರಿದಂತೆ 50 ಬಗೆಯ ಹಣ್ಣಿನ ಮರಗಳನ್ನು ಬೆಳೆಸಿರುವುದು ವಿಶೇಷ.
ಆಯುರ್ವೇದ ಗಿಡಗಳು
ವೀಳ್ಯದೆಲೆ, ಕರಿಬೇವು, ಮೆಣಸು, ನುಗ್ಗೆ, ಲವಂಗ, ಜಾಯೆಕಾಯಿ, ಚಕ್ಕೆ, ಕರಿ ಮೆಣಸು, ಕಾಫಿ, ಏಲಕ್ಕಿ, ಅರಿಶಿಣ, ಅಮೃತ್​ ನೋನಿ, ಟಿಮಚರ್​ ಗಿಡ, ತುಳಸಿ, ನೈಟ್​ಫಿನ್​, ಒಂದೆಲಗ, ದೊಡ್ಡಪತ್ರೆ, ಲೆಮನ್​ ಕ್ರಾಸ್​ ಸೇರಿದಂತೆ ಹಲವು ಬಗೆಯ ಆಯುರ್ವೇದ ಜಾಷಧೀಯ ಗಿಡಗಳನ್ನು ಬೆಳೆದಿದ್ದಾರೆ.
ಎರೆಹುಳು ಗೊಬ್ಬರ
ರಾಮಚಂದ್ರ ಅವರು ಬೆಳೆಗಳಿಗೆ ರಾಸಾಯನಿಕ ಗೊಬ್ಬರದ ಬದಲಾಗಿ ಮೇಕೆ, ಕುರಿ, ಹಸು ಗೊಬ್ಬರ, ಹಸಿರೆಲೆ ಗೊಬ್ಬರ ಬಳಸುತ್ತಾರೆ. ತೆಂಗು, ಅಡಕೆ ಹಾಗೂ ಇತರ ಮರಗಳ ಎಲೆಗಳಿಂದ ಎರೆಹುಳು ಗೊಬ್ಬರ ತಯಾರಿಸುತ್ತಾರೆ. ಜೀವಾಮೃತ ಟಕವನ್ನೂ ನಿರ್ಮಿಸಿಕೊಂಡಿದ್ದಾರೆ.
ಹನಿ, ತುಂತುರು ನೀರಾವರಿ
ಸುಮಾರು 15 ಎಕರೆ ಜಮೀನಿನಲ್ಲಿ 4 ಕೊಳವೆ ಬಾವಿಗಳಿದ್ದು, ಜಲ ಮರುಪೂರಣ ಮೂಲಕ ಅಂತರ್ಜಲವೃದ್ಧಿಗೆ ಒತ್ತು ನೀಡಿದ್ದಾರೆ. ಜತೆಗೆ 3 ಚಕ್​ ಡ್ಯಾಂ ನಿರ್ಮಿಸಿಕೊಂಡಿದ್ದು, ಹವಾಮಾನಕ್ಕೆ ಅನುಗುಣವಾಗಿ ಎಲ್ಲ ಬೆಳೆಗಳಿಗೂ ಹನಿ ಮತ್ತು ತುಂತುರು ನೀರಾವರಿ ಮೂಲಕ ಸಮರ್ಪಕವಾಗಿ ನೀರು ಹಾಯಿಸುತ್ತಾರೆ.
ಮಾಹಿತಿಗೆ ಸಂಪರ್ಕಿಸಿ
ರಾಮಚಂದ್ರ ಅವರ ತೋಟಕ್ಕೆ ನಿತ್ಯ ನೂರಾರು ಮಂದಿ ಭೇಟಿ ನೀಡಿ ಮಾಹಿತಿ ಪಡೆಯುತ್ತಾರೆ. ಪ್ರತಿ ದಿನ ಸಂಜೆ 6 ಗಂಟೆಯಿಂದ 10ರವರೆಗೆ ದೂರವಾಣಿ ಮೂಲಕ ಸಂಪರ್ಕಿಸಬಹುದು.ದೂ.ಸಂ. 96637&44123.
"

ಕೃಷಿ ಉತ್ಪನ್ನಗಳಿಗೆ ಸರ್ಕಾರ ಸೂಕ್ತ ಮಾರುಕಟ್ಟೆ ಹಾಗೂ ಬೆಂಬಲ ಬೆಲೆ ನೀಡಿದರೆ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು. ಮಧ್ಯವರ್ತಿಗಳ ಹಾವಳಿ ತಡೆಗೆ ವಿಶೇಷ ಕಾಯ್ದೆ ರೂಪಿಸಬೇಕು. ಇದರಿಂದ ಯುವಕರು ಹೆಚ್ಚಾಗಿ ಕೃಷಿಯತ್ತ ವಾಲುತ್ತಾರೆ.