ಕೆಂಚನಕುಪ್ಪೆ ವಾರ್ಡ್ನಲ್ಲಿ ಪುನುಗು ಬೆಕ್ಕಿನ ರಕ್ಷಣೆ.
ಬಿಡದಿ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಅಪರೂಪದ ಪುನುಗು ಬೆಕ್ಕನ್ನು ವಲಯ ಅರಣ್ಯಾಧಿಕಾರಿಗಳು ರಸಿದ್ದಾರೆ.
ಕೆಂಚನಕುಪ್ಪೆ ವಾರ್ಡ್ ಸದಸ್ಯ ರಮೇಶ್ ಅವರ ಮನೆ ಮುಂದೆ ಮಂಗಳವಾರ ಬೆಳಗ್ಗೆ ಈ ಬೆಕ್ಕು ಕಾಣಿಸಿಕೊಂಡಿದೆ. ಕೂಡಲೇ ರಮೇಶ್, ಬೆಕ್ಕನ್ನು ಪಂಜರದಲ್ಲಿ ಕೂಡಿ ಹಾಕಿ, ವಲಯ ಅರಣ್ಯಾಧಿಕಾರಿ ಮಹಮ್ಮದ್ ಮನ್ಸೂರ್ಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಅಧಿಕಾರಿಯ ನಿರ್ದೇಶನದಂತೆ ಸಿಬ್ಬಂದಿ ಮಲ್ಲಿಕಾರ್ಜುನ್ ಸ್ಥಳಕ್ಕೆ ಭೆಟಿ ನೀಡಿ ಪುನುಗು ಬೆಕ್ಕನ್ನು ಅರಣ್ಯಕ್ಕೆ ಬಿಟ್ಟಿದ್ದಾರೆ.