ಕನಕಪುರ ತಾಲೂಕಿನ ಅರೆಕೊಪ್ಪ ಗ್ರಾಮದ ಬಳಿ ಬ್ಯಾರಿಕೇಡ್ ಗೆ ಸಿಲುಕಿದ ಆನೆ.  
ಬೆಂಗಳೂರು ದಕ್ಷಿಣ

ಬ್ಯಾರಿಕೇಡ್ ನಲ್ಲಿ ಸಿಲುಕಿದ್ದ ಆನೆ ರಕ್ಷಣೆ

ಪ್ರಮುಖ ಮುಖ್ಯಾಂಶಗಳು

  • ಕಾವೇರಿ ವನ್ಯಜೀವಿಧಾಮದಲ್ಲಿ ಘಟನೆ
  • ಬ್ಯಾರಿಕೇಡ್ ಮಧ್ಯೆ ಸಿಲುಕಿದೆ ಆನೆ
  • ಅರಣ್ಯ ಇಲಾಖೆಯಿಂದ ಸುರಕ್ಷತಾ ಕಾರ್ಯಾಚರಣೆ
  • ಕಾಡಿಗೆ ಮರಳಿದ ಆನೆ
ಕನಕಪುರ: ಕಾವೇರಿ ವನ್ಯಜೀವಿಧಾಮದ ಗಡಿಯಲ್ಲಿ ಅಳವಡಿಸಿದ್ದ ರೈಲ್ವೆ ಬ್ಯಾರಿಕೇಡ್‌ ದಾಟಲು ಯತ್ನಿಸಿದ ಕಾಡಾನೆಯೊಂದು ಬ್ಯಾರಿಕೇಡ್ ಮಧ್ಯೆಯೇ ಸಿಲುಕಿ ನರಳಾಡಿರುವ ಘಟನೆ ತಾಲೂಕಿನ ಅರೆಕೊಪ್ಪ ಗ್ರಾಮದ ಬಳಿ ಮಂಗಳವಾರ ಬೆಳಿಗ್ಗೆ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಆನೆಯನ್ನು ರಕ್ಷಿಸಿದ್ದಾರೆ.
ಕಾವೇರಿ ವನ್ಯಜೀವಿಧಾಮದಿಂದ ಕಾಡಂಚಿನ ರೈತರ ಜಮೀನಿಗೆ ರಾತ್ರಿ ಬಂದಿದ್ದ ಕಾಡಾನೆ ಮೇವು ತಿಂದಿತ್ತು. ನಸುಕಿನಲ್ಲಿ ಕಾಡಿಗೆ ಹಿಂದಿರುಗುವಾಗ ಬ್ಯಾರಿಕೇಡ್‌ ಮಧ್ಯೆ ದನಕರುಗಳು ಅರಣ್ಯಕ್ಕೆ ಹೋಗಿ ಬರಲು ಸಣ್ಣದಾದ ಕಿಂಡಿಯಲ್ಲಿ ವಾಪಸ್ ಹೋಗಲು ಆನೆ ಮುಂದಾಗಿದೆ.
ಅರ್ಧದಷ್ಟು ಮುಂದಕ್ಕೆ ಹೋದ ಕಾಡಾನೆಗೆ ಪೂರ್ತಿ ಹೋಗಲು ಸಾಧ್ಯವಾಗಿಲ್ಲ. ಮಧ್ಯದಲ್ಲೇ ಸಿಲುಕಿಕೊಂಡು ನೋವಿನಿಂದ ನರಳುತ್ತಿತ್ತು. ಬೆಳಿಗ್ಗೆ ಜಮೀನಿಗೆ ಬಂದಿದ್ದ ರೈತರು ಬ್ಯಾರಿಕೇಡ್ ನಡುವೆ ಆನೆ ಸಿಲುಕಿರುವುದನ್ನು ಗಮನಿಸಿ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದರು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.
ವಿಷಯ ತಿಳಿದು ಸ್ಥಳಕ್ಕೆ ತೆರಳಿ ಪರಿಶೀಲಿಸಲಾಯಿತು. ಬಳಿಕ ಪಶು ವೈದ್ಯಾಧಿಕಾರಿಗಳು ಹಾಗೂ ಕಬ್ಬಿಣ ಕತ್ತರಿಸುವ ಯಂತ್ರವನ್ನು ಸ್ಥಳಕ್ಕೆ ತರಿಸಲಾಯಿತು. ವೈದ್ಯರು ಆನೆಗೆ ಅನಸ್ತೇಷಿಯಾ ಕೊಟ್ಟ ಕೆಲ ಕ್ಷಣದಲ್ಲೇ ಪ್ರಜ್ಞೆ ತಪ್ಪಿತು ಎಂದು ಹೇಳಿದರು.
ಬಳಿಕ ಯಂತ್ರದಿಂದ ಆನೆ ಸಾಗಲು ಅನುಕೂಲವಾಗುವಷ್ಟು ಬ್ಯಾರಿಕೇಡ್‌ ಕತ್ತರಿಸಲಾಯಿತು. ಮಧ್ಯಾಹ್ನ 12.30ರ ಸುಮಾರಿಗೆ ಆನೆಗೆ ಪ್ರಜ್ಞೆ ಬಂದ ಬಳಿಕ ಮರಳಿ ಕಾವೇರಿ ವನ್ಯಜೀವಿಧಾಮದ ಕಡೆಗೆ ಓಡಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸ್ಥಳಕ್ಕೆ ಕಾವೇರಿ ವನ್ಯಜೀವಿಧಾಮದ ಎಸಿಎಫ್ ನಾಗೇಂದ್ರ, ಆರ್‌ಎಫ್‌ಒ ಶ್ರೀಧರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ