ಹಾರೋಹಳ್ಳಿ ತಾಲೂಕಿನ ಚಿಕ್ಕ ಕಲ್ಲು ಬಾಳು ಗ್ರಾಮದ ಸಿಂಧ್ಯಾನಗರ ಸಮೀಪದ ಮುನೇಶ್ವರ ಸ್ವಾಮಿ ದೇವಾಲಯದಲ್ಲಿ ಬೃಹತ್​ ಪ್ರತ್ಯಂಗಿರಾ ದೇವಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಲ್ಲಿ ಶಾಸಕ ಇಕ್ಬಾಲ್​ ಹುಸೇನ್​, ಬ್ಲಾಕ್​ ಕಾಂಗ್ರೆಸ್​ ಅಧ್ಯ ಜೆಸಿಬಿ ಅಶೋಕ್​, ಜಿಪಂ ಮಾಜಿ ಸದಸ್ಯ ವೆಂಕಟೇಶ್​, ಮುಖಂಡರಾದ ಪರಮೇಶ್​, ಪುಟ್ಟಸ್ವಾಮಿ, ನಂಜುಂಡಸ್ವಾಮಿ, ಸಾಮಂದಿ, ಚಾಮರಾಜು, ರವಿ, ಕುಮಾರ್​ ಸಿದ್ದಯ್ಯ, ಬಸವರಾಜು ರವಿಕುಮಾರ್​, ಕಾಂತರಾಜು, ರಾಜೇಶ್​, ಸವಿತಾ, ಪವಿತ್ರಾ ಇತರರು ಇದ್ದರು.  
ಬೆಂಗಳೂರು ದಕ್ಷಿಣ

ಧಾರ್ಮಿಕ ಕ್ಷೇತ್ರಗಳು ನೆಮ್ಮದಿಯ ತಾಣಗಳು

ಹಾರೋಹಳ್ಳಿ:

ಧಾರ್ಮಿಕ ಕ್ಷೇತ್ರಗಳು ನೆಮ್ಮದಿ ತಾಣಗಳು. ಧರ್ಮದಿಂದ ಮಾನವನಿಗೆ ಒಳಿತಾಗುತ್ತದೆ ಎಂದು ಶ್ರೀಕ್ಷೇತ್ರ

ಸುತ್ತೂರು ಮಠದ ಪೀಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಪ್ರತಿಯೊಬ್ಬರೂ ಧರ್ಮದ ದಾರಿಯಲ್ಲಿ ಸಾಗಬೇಕು. ಧರ್ಮವನ್ನು ನಾವು ಕಾಪಾಡಿದರೆ ಧರ್ಮವು ನಮ್ಮನ್ನು ಕಾಪಾಡುತ್ತದೆ. ಮುನೇಶ್ವರ ಸ್ವಾಮಿ ಕ್ಷೇತ್ರ

ದಲ್ಲಿ ಪ್ರತ್ಯಂಗಿರಾ ದೇವಿಯ ಬೃಹತ್​ ವಿಗ್ರಹ ಪ್ರತಿಷ್ಠಾಪನೆ ಮಾಡಿರುವುದು ಉತ್ತಮ ಸಂಗತಿ ಎಂದರು.

ಧರ್ಮದರ್ಶಿ ಸಿ.ಪಿ. ಕೃಷ್ಣೇಗೌಡ ಮಾತನಾಡಿ, ತಲೆತಲಾಂತರದಿಂದ ಪೂರ್ವಿಕರು ಈ ಕ್ಷೇತ್ರ

ದಲ್ಲಿ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದು, ದೇವಿ ಕನಸಿನಲ್ಲಿ ಬಂದು ನನ್ನನ್ನು ಇಲ್ಲಿ ಪ್ರತಿಷ್ಠಾಪಿಸಬೇಕು ಎಂದು ಹೇಳಿದ್ದರಿಂದ ಈ ಸ್ಥಳದಲ್ಲಿ ಪ್ರತ್ಯಂಗಿರಾ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಭಕ್ತರ ಸಹಕಾರ ಅಗತ್ಯ ಎಂದರು.

ಶಾಸಕ ಇಕ್ಬಾಲ್​ ಹುಸೇನ್​ ಮಾತನಾಡಿ, ಎಲ್ಲ ಧರ್ಮಗಳು ಒಂದೇ. ಪ್ರತಿಯೊಬ್ಬರೂ ಧರ್ಮದ ಮಾರ್ಗದಲ್ಲಿ ನಡೆಯಬೇಕು ಎಂದರು.

ಯಾಗ ಶಾಲಾ ಪ್ರವೇಶ

ಋತ್ವಿಜಾಧಿಕಾರ ಸ್ವೀಕಾರ, ಯಾಗ ಶಾಲಾ ಪ್ರವೇಶ, ಪುಣ್ಯಾಹ, ವಾಸ್ತು ರೋಘ್ನಾ, ಮಹಾಗಣಪತಿ ಭಕ್ತ ದ್ರವ್ಯ ಹೋಮ, ಪೂರ್ವಕ ನವಗ್ರಹಾದಿ ವಾಸ್ತು ಹೋಮ, ಬಿಂಬಶುದ್ದಿ ಜಲಾದಿ ಸಂಸ್ಕಾರ ವಾಸ ಹಾಗೂ ಶುಕ್ರವಾರ ಬ್ರಾಹ್ಮಿ ಮುಹೂರ್ತದಲ್ಲಿ ದೇವಿ ಅಷ್ಟಬಂಧನ, ಪ್ರಾಣ ಪ್ರತಿಷ್ಠೆ, ಪ್ರತ್ಯಂಗಿರಾ ದೇವಿ ಪ್ರಧಾನ ಭಗವತಿ ಸೇವೆ, ಅಭಿಷೇಕ, ಹೋಮ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಸೇರಿ ವಿವಿಧ ಧಾರ್ಮಿಕ ಕೈಂಕರ್ಯ ನೆರವೇರಿದವು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.