ವಶಪಡಿಸಿಕೊಳ್ಳಲಾದ ಪಡಿತರ, ವಾಹನದೊಂದಿಗೆ ಆಹಾರ ಮತ್ತು ಪೊಲೀಸ್ ಅಧಿಕಾರಿಗಳು.
ಕುದೂರು: ಅಕ್ರಮವಾಗಿ ಪಡಿತರ ಅಕ್ಕಿ ತುಂಬಿಕೊಂಡು ಹಾಸನ ಕಡೆಗೆ ಹೊರಟಿದ್ದ ವಾಹನವನ್ನು ಹೋಬಳಿಯ ರಾಷ್ಟ್ರೀಯ ಹೆದ್ದಾರಿ&75ರ ಮರೂರು ಹ್ಯಾಂಡ್ ಪೋಸ್ಟ್ ಬಳಿ ಕೆಆರ್ಎಸ್ ಪ್ರಧಾನ ಕಾರ್ಯದರ್ಶಿ ಸುಹಾಸ್ ಮತ್ತು ಚಂದ್ರಶೇಖರ್ ತಡೆದು ನಿಲ್ಲಿಸಿ, ವಾಹನವನ್ನು ಕುದೂರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಹೆದ್ದಾರಿಯಲ್ಲಿ ಬುಧವಾರ ಹೋಗುತ್ತಿದ್ದ ವಾಹನವನ್ನು ಕೆಆರ್ಎಸ್ ಪದಾಧಿಕಾರಿಗಳು
ತಡೆದು, ವಿಚಾರಿಸಿದಾಗ ಅಕ್ಕಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆ ನೀಡದ ಕಾರಣ ಕುದೂರು ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. ಸಂಜೆ ಪೊಲೀಸರ ಸಮ್ಮುಖದಲ್ಲಿ ಮಾಗಡಿ ತಾಲೂಕು ಆಹಾರ ನಿರೀಕ ಶ್ರೀನಿವಾಸ್ ಮತ್ತು ಆಹಾರ ಶಿರಸ್ತೇದಾರ್ ಎಚ್.ಆರ್.ಗಣೇಶ್ ತಪಾಸಣೆ ಕೈಗೊಂಡಾಗ, ವಾಹನದಲ್ಲಿ 100&120 ಪ್ಲಾಸ್ಟಿಕ್ ಮೂಟೆ ಅಕ್ಕಿ ಸಿಕ್ಕಿದ್ದು, ಒಂದೊಂದು ಚೀಲವು 25&30 ಕೆಜಿ ಇರಬಹುದು ಎಂದು ಅಂದಾಜಿಸಲಾಗಿದೆ.
ಅಕ್ರಮ ಪಡಿತರ ಸಾಗಣೆ ಆರೋಪದಡಿ ತಾಲೂಕು ಆಹಾರ ನಿರೀಕರು ಕುದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಒಟ್ಟು 7,319 ಕೆಜಿ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.