ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಒತ್ತಾಯಿಸಿ ನೆಲಮಂಗದಲ್ಲಿ ಕರವೇ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಕರವೇ ಉಪಾಧ್ಯಕ್ಷ ಜಿ.ಉಮೇಶ್ಗೌಡ, ತಾಲೂಕು ಅಧ್ಯಕ್ಷ ರಾವೇಂದ್ರ, ಮಹಿಳಾ ಟಕ ಅಧ್ಯೆ ಶೈಲಜಾ, ನಗರ ಅಧ್ಯಕ್ಷ ರಂಗಸ್ವಾಮಿ, ವಿದ್ಯಾರ್ಥಿ ಟಕ ಅಧ್ಯಕ್ಷ ದಿಲೀಪ್, ಯುವ ಟಕ ಅಧ್ಯಕ್ಷ ಅಮ್ಜದ್ಖಾನ್ ಇದ್ದರು.
ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಕಾವೇರಿ ನೀರಾವರಿ ಪ್ರಾಧಿಕಾರ ಆದೇಶಿಸಿರುವುದು ಹಾಗೂ ಏಕಾಏಕಿ ತಮಿಳುನಾಡಿಗೆ ನೀರು ಬಿಟ್ಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವಿಣ್ಶೆಟ್ಟಿ ಬಣ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಪ್ರವಾಸಿ ಮಂದಿರ ಬಳಿ ಸಮಾವೇಶಗೊಂಡ ನೂರಾರು ಮಂದಿ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ೂಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತೀವ್ರ ಬರಗಾಲದ ಸಂಕಷ್ಟದ ಪರಿಸ್ಥಿತಿ ನಡುವೆಯೂ ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ನಗರದ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕರವೇ ಉಪಾಧ್ಯಕ್ಷ ಜಿ.ಉಮೇಶ್ಗೌಡ ಮಾತನಾಡಿ, ಕಾವೇರಿ ನೀರು ಬಿಡುಗಡೆಗೆ ಆದೇಶ ಹೊರಬಂದಿರುವುದು ಕರ್ನಾಟಕ ಜನರ ಮರಣ ಶಾಸನದಂತಿದೆ. ಪ್ರತಿಬಾರಿ ಮಳೆ ಇಲ್ಲದಾಗ, ಬರದ ಎದುರಾದಾಗಲೆಲ್ಲ ಕಾವೇರಿ ನೀರನ್ನು ಕಳ್ಳತನ ಮಾಡುವ ಹುನ್ನಾರ ತಮಿಳುನಾಡು ಸರ್ಕಾರ ಮಾಡಿಕೊಂಡು ಬಂದಿದೆ. ಮೊದಲಿನಿಂದಲೂ ಕೇಂದ್ರ ಮತ್ತು ರಾಜ್ಯ ಸರ್ಕಾರ ತಮಿಳುನಾಡು ಸರ್ಕಾರಕ್ಕೆ ಶಕ್ತಿ ತುಂಬುವುದನ್ನೇ ರೂಢಿಸಿಕೊಂಡು ಬಂದಿದೆ. ನಾಡಿನ ನೀರನ್ನು ರಕ್ಷಣೆ ಮಾಡದೇ ಮೌನಕ್ಕೆ ಶರಣಾಗುವ ಜನಪ್ರತಿನಿಧಿಗಳನ್ನು ನಾಡಿನ ಜನತೆ ಕ್ಷಮಿಸುವುದಿಲ್ಲ ಎಂದರು.
ಸಂಟನೆ ಪಧಾದಿಕಾರಿಗಳಾದ ರಶೀದ್, ಗಂಗರಾಜು, ಸದಾಮ್, ವಿಜಯ್ಕುಮಾರ್, ಸಿದ್ದಪ್ಪ, ಸುಹೇಲ್, ಗೌರಮ್ಮ, ಆನಂದ್, ಮೂರ್ತಿ, ಸೌಮ್ಯಾ, ವಿನೋದ್, ಶಶೀಧರ್, ವೇಣು , ಗೋವಿಂದರಾಜು, ಯಶವಂತ್ ಇದ್ದರು
ಕಾಲಿ ಬಿಂದಿಗೆ ಹಿಡಿದು ಪ್ರತಿಭಟನೆ
ತಮಿಳುನಾಡಿಗೆ ಕಾವೇರಿ ನೀರು ಬಿಡವಂತೆ ಆಗ್ರಹಿಸಿ ಕರವೇ ಸಂಟನೆಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನೂರಾರು ಮಹಿಳೆಯರು ಕಾಲಿ ಬಿಂದಿಗೆ ಹಿಡಿದುಕೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.