ಕನಕಪುರ: ಪ್ರೀತಿಸಿದ ಹುಡುಗಿಯನ್ನು ಕ್ಷುಲ್ಲಕ ಕಾರಣಕ್ಕೆ ನಾಡ ಬಂದೂಕಿನಿಂದ ಪ್ರಿಯಕರನೇ ಹತ್ಯೆ ಮಾಡಿ
ಹೂತಿರುವ ಶವವನ್ನು ಶನಿವಾರ ಹೊರ ತೆಗೆದು ಮರಣೋತ್ತರ ಪರೀೆ ನಡೆಸಲಾಯಿತು.
ಕೋಡಿಹಳ್ಳಿ ಠಾಣಾ ವ್ಯಾಪ್ತಿಯ ಕೆಂಪಾಲನಾಥ ಗ್ರಾಮದ ಅಪ್ರಾಪ್ತ ಬಾಲಕ ಸಾತನಹಳ್ಳಿ ಕುರಬೂರ ಗ್ರಾಮದ ಬಾಲಕಿಯನ್ನು ಪ್ರೀತಿಸಿ ಕರೆತಂದು ಗ್ರಾಮದ ಹೊರ ವಲಯದಲ್ಲಿರುವ ಮನೆಯಲ್ಲಿ ಇರಿಸಿಕೊಂಡಿದ್ದ. ಇಬ್ಬರೂ ಜಗಳವಾಡಿಕೊಂಡಿದ್ದು, ಬಾಲಕ ನಾಡ ಬಂದೂಕಿನಿಂದ ಆಕೆಯನ್ನು ಹತ್ಯೆ ಮಾಡಿದ್ದಾನೆ. ನಂತರ ತನ್ನ ಚಿಕ್ಕಪ್ಪ ಹರೀಶ್ ಹಾಗೂ ಪುಟ್ಟಮಾದು ಸಹಕಾರದಿಂದ ಸಮೀಪದ ಮಜ್ಜನತೊರೆ ಹಳ್ಳದಲ್ಲಿ ಶವ ಹೂತುಹಾಕಲಾಗಿತ್ತು. ಟನೆ ಆದ ಮೂರು ದಿನಗಳ ನಂತರ ಚಿಕ್ಕಪ್ಪ ಹರೀಶ್ ಕುಡಿದ ಮತ್ತಿನಲ್ಲಿ ಸ್ನೇಹಿತರ ಬಳಿ ವಿಷಯ ಬಾಯಿಬಿಟ್ಟಿದ್ದಾನೆ.
ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಕೋಡಿಹಳ್ಳಿ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಶುಕ್ರವಾರ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಶನಿವಾರ ಗ್ರೇಡ್&2 ತಹಸೀಲ್ದಾರ್ ಮನೋಹರ್ ಸಮ್ಮುಖದಲ್ಲಿ ಶವ ಹೊರತೆಗೆಲಾಯಿತು. ಸ್ಥಳದಲ್ಲೇ ವಿಧಿವಿಜ್ಞಾನ ತ ಡಾ.ಗಿರೀಶ್ ಮರಣೋತ್ತರ ಪರೀೆ ನಡೆಸಿದರು. ನಂತರ ಬಾಲಕಿಯ ಶವವನ್ನು ಪಾಲಕರಿಗೆ ಹಸ್ತಾಂತರಿಸಿದರು. ಸರ್ಕಲ್ ಇನ್ಸ್ಪೆಕ್ಟರ್ ವಿಕಾಸ್ಗೌಡ, ಸಬ್ಇನ್ಸ್ಪೆಕ್ಟರ್ ಪ್ರದಿಪ್ ಕುಮಾರ್, ಮುಖ್ಯಪೇದೆ ಮೋಹನ್, ಸಿಬ್ಬಂದಿ ಇ್ಲದ್ದರು.