ಬಿಡದಿಯ ಬೆಂಗಳೂರು&ಮೈಸೂರು ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ಮದ್ಯೆ ಬೆಳೆದು ನಿಂತಿರುವ ಗಿಡ ಗಂಟಿಗಳು.
ಬಿಡದಿ: ರಾಷ್ಟ್ರೀಯ ಹೆದ್ದಾರಿ ರಸ್ತೆ ವಿಭಜಕದ ಮೇಲೆ ಕಿಲೋಮೀಟರ್ ಗಟ್ಟಲೆ ಗಿಡ&ಗಂಟಿಗಳು ಬೆಳೆದು ನಿಂತಿದ್ದು, ರಸ್ತೆ ಯಾವುದು ಡಿವೈಡರ್ ಯಾವುದು ಎಂಬುದು ಗೋಚರವಾಗದ ಸ್ಥಿತಿ ನಿರ್ಮಾಣವಾಗಿದೆ.
ಹೌದು... ಬೆಂಗಳೂರು&ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಯ ರಸ್ತೆ ಕಾಣದ ರೀತಿಯಲ್ಲಿ ಗಿಡಗಳು ಬೆಳೆದುಕೊಂಡಿವೆ. ಸರಿಯಾದ ನಿರ್ವಹಣೆ ಇಲ್ಲದೆ ಗಿಡಗಳು ಮರದ ಹಾಗೆ ಬೆಳೆದು ಸಂಚಾರಕ್ಕೆ ಅಡ್ಡಿ ಪಡಿಸುತ್ತಿವೆ.
ವಾಹನಗಳ ಸುಗಮ ಸಂಚಾರಕ್ಕಾಗಿ ಹೆದ್ದಾರಿಯಲ್ಲಿ ಎರಡು ಪಥ ಮಾಡಿ ಮಧ್ಯೆ ಡಿವೈಡರ್ ನಿರ್ಮಿಸಲಾಗುತ್ತದೆ. ಅಂತೆಯೇ ಇಲ್ಲಿಯೂ ಹೆದ್ದಾರಿ ಮಧ್ಯಭಾಗದಲ್ಲಿ ಡಿವೈಡರ್ ನಿರ್ಮಿಸಿ ಕಬ್ಬಿಣದ ಜಾಲರಿ ಹಾಕಲಾಗಿದೆ. ಆದರೆ, ಹೆಗ್ಗಡಗೆರೆ ಕ್ರಾಸ್ನಿಂದ ಕಾಡುಮನೆ ಕ್ರಾಸ್ವರೆಗೆ ಈ ವಿಭಜಕದ ತುಂಬ ಗಿಡ&ಗಂಟಿಗಳು, ಕುರುಚಲು ಹುಲ್ಲು ಬೆಳೆದು ನಿಂತಿವೆ. ಹಲವೆಡೆ ಗಿಡಗಳು ರಸ್ತೆಗೂ ಚಾಚಿವೆ. ಇದರಿಂದ ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ. ಡಿವೈಡರ್ಗಳ ಮೇಲೆ ಅಳವಡಿಸಿರುವ ಬೀದಿ ದೀಪ ಕಂಬಗಳ ಉದ್ದಕ್ಕೂ ಹಬ್ಬಿಕೊಂಡಿವೆ.
ಜವಾಬ್ದಾರಿ ಮರೆತ ಅಧಿಕಾರಿಗಳು
ಹೆದ್ದಾರಿಯ ಡಿವೈಡರ್ ಹಾಗೂ ಇಕ್ಕೆಲಗಳಲ್ಲಿ ಬೆಳೆದ ಗಿಡಗಳನ್ನು ಕತ್ತರಿಸಿ ಸೂಕ್ತ ನಿರ್ವಹಣೆ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾದುದು ಲೋಕೋಪಯೋಗಿ ಇಲಾಖೆಯ ಜವಬ್ದಾರಿ. ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರಸ್ತೆ ನಿರ್ವಹಣೆ ಮಾಡಲಾಗುತಿತ್ತು. ಆದರೆ, ಹೊಸದಾಗಿ ಬೈಪಾಸ್ ರಸ್ತೆ ನಿರ್ಮಾಣವಾದ ನಂತರ ಎರಡು ಕಡೆ ನಿರ್ವಾಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹಳೇ ರಸ್ತೆಯ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆಯ ಸುಪರ್ದಿಗೆ ನೀಡಲಾಗಿದೆ. ಆದರೆ, ಅಧಿಕಾರಿಗಳು ತಮ್ಮ ಜವಾಬ್ದಾರಿ ಮರೆತು ನಮಗೂ ರಸ್ತೆಗೂ ಸಂಬಂಧವಿಲ್ಲವೆಂಬಂತೆ ಕಣ್ಮುಚ್ಚಿ ಕುಳಿತಿದ್ದಾರೆ. ಬೈಪಾಸ್ ಹೆದ್ದಾರಿ ನಿರ್ಮಾಣವಾದ ನಂತರ ಹಳೇ ಬೆಂಗಳೂರು& ಮೈಸೂರು ಹೆದ್ದಾರಿಯನ್ನು ಮರೆತಿದ್ದಾರೆ.
"
ಬೆಂಗಳೂರು&ಮೈಸೂರು ಹೆದ್ದಾರಿಯಲ್ಲಿನ ಡಿವೈಡರ್ಗಳಲ್ಲಿ ಗಿಡ&ಗಂಟಿಗಳು ಮರದ ಹಾಗೆ ಬೆಳೆದುನಿಂತಿವೆ. ಹಲವೆಡೆ ರಸ್ತೆಗೂ ಬಾಗಿಕೊಂಡಿವೆ. ಅದರಲ್ಲಿನ ಮುಳ್ಳಿನ ಗಿಡಗಳು ಬೈಕ್ನಲ್ಲಿ ಹೋಗುವಾಗ ಪರಚಿರುವ ಹಲವು ಉದಾಹರಣೆಗಳಿವೆ. ಒಂದೆಡೆ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದರೆ ಮತ್ತೊಂದು ಕಡೆ ಸಂಚಾರ ಮಾಡುವ ವಾಹನಗಳು ಕಾಣಿಸದಿರುವಷ್ಟು ಮಟ್ಟಿಗೆ ಗಿಡಗಳು ಬೆಳೆದಿವೆ. ಹಾಗಾಗಿ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು.
— > ಸುರೇಶ್ ಕೆಂಚನಕುಪ್ಪೆ, ಬೈಕ್ ಸವಾರ