ಮಾಗಡಿ: ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿರುವ ತಾಲೂಕಿನ ಹಾಲು ಉತ್ಪಾದಕರಿಗೆ ಬೆಂಗಳೂರು ಹಾಲು ಒಕ್ಕೂಟ ವಂಚಿಸಿದೆಯೇ? ಎಂಬ ಅನುಮಾನ ತಾಲೂಕಿನ ರೈತ ವಲಯದಲ್ಲಿ ಮೂಡಿದೆ.
ಆರು ತಿಂಗಳ ಹಿಂದೆಯೇ ಬಮುಲ್ ವ್ಯವಸ್ಥಾಪಕ ನಿರ್ದೇಶಕರ ಹೆಸರಿನಲ್ಲಿ ಡೇರಿಗಳ ಕಾರ್ಯದರ್ಶಿಗಳು ಉತ್ಪಾದಕರ ಹೆಸರಿನಲ್ಲಿ ಡಿಡಿ ತೆಗೆದು ಲಾಂತರ ಹಣ ಪಾವತಿಸಿದ್ದು, ಇಂದಿಗೂ ಹಾಲು ಕರೆಯುವ ಯಂತ್ರವನ್ನಾಗಲಿ, ರಬ್ಬರ್ ಮ್ಯಾಟ್ಗಳನ್ನಾಗಲೀ ವಿತರಿಸದಿರುವುದು ಅನುಮಾನ ಮೂಡಲು ಕಾರಣವಾಗಿದೆ.
ಹಣ ಪಡೆದು 6 ತಿಂಗಳಾದರೂ ವಿತರಣೆಯಿಲ್ಲ!:
ಮಾಗಡಿ ತಾಲೂಕಿನಾದ್ಯಂತ 300 ಹಾಲು ಉತ್ಪಾದಕ ಸಹಕಾರ ಸಂಗಳಿಂದ 10 ಸಾವಿರ ರಬ್ಬರ್ ಮ್ಯಾಟ್ ಹಾಗೂ 100 ಹಾಲು ಕರೆಯುವ ಯಂತ್ರಗಳ ಖರೀದಿಗೆ ರೈತರು ಆರು ತಿಂಗಳ ಹಿಂದೆಯೇ ಡಿಡಿ ಮೂಲಕ ಒಕ್ಕೂಟದ ನಿಯಮಾವಳಿಯಂತೆ ಹಣ ಪಾವತಿಸಲಾಗಿದೆ. ಒಂದು ಹಾಲು ಕರೆಯುವ ಯಂತ್ರಕ್ಕೆ 18 ಸಾವಿರದಂತೆ ಡಿಡಿ ಮೂಲಕ ಬಮುಲ್ ಖಾತೆಗೆ ರೈತರು ಜಮೆ ಮಾಡಿದ್ದಾರೆ.
ಆದರೆ, ಹಣ ಪಡೆದ ಒಕ್ಕೂಟದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಹಾಲು ಉತ್ಪಾದಕ ಸಹಕಾರ ಸಂಗಳ ಮೂಲಕ ರೈತರು ಬಮುಲ್ ಉಪವ್ಯವಸ್ಥಾಪಕರು ಹಾಗೂ ನಿರ್ದೇಶಕರಿಗೆ ಹತ್ತಾರು ಬಾರಿ ಮನವಿ ಮಾಡಿದ್ದಾರೆ. 3 ತಿಂಗಳ ಹಿಂದೆ ಕೇಳಿದಾಗ ವಾರದಲ್ಲಿ ವಿತರಿಸುತ್ತೇವೆಂದು ಭರವಸೆ ನೀಡಿದ್ದ ಅಧಿಕಾರಿಗಳು, ಇಂದಿಗೂ ಭರವಸೆ ಈಡೇರಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ಹಾಲು ಉತ್ಪಾದಕರು ಬಮುಲ್ನ ಅಧಿಕೃತ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಕೇಳಿದರೂ ಸಮರ್ಪಕ ಉತ್ತರ ಸಿಗುತ್ತಿಲ್ಲ. ಕೇವಲ ಹಾರಿಕೆ ಉತ್ತರದ ಮೂಲಕ ರೈತರ ಹಾದಿ ತಪ್ಪಿಸಲಾಗುತ್ತಿದೆ. ಇದರಿಂದ ಸಹಾಯವಾಣಿಗೆ ಯಾವುದೇ ಕಿಮ್ಮತ್ತಿಲ್ಲ ಎಂದು ಹಿಡಿ ಶಾಪಹಾಕಿದ್ದಾರೆ.
ಅಧ್ಯಕ್ಷ ಡಿ.ಕೆ. ಸುರೇಶ್ ಗಮನಕ್ಕೆ..!
ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ಅಧಿಕಾರ ವಹಿಸಿಕೊಂಡ ನಂತರ ಬಮುಲ್ನಲ್ಲಿ ಸಾಕಷ್ಟು ಸುಧಾರಣೆಗಳನ್ನು ಕೈಗೊಳ್ಳುತ್ತಾ ಬಂದಿದ್ದಾರೆ. ಆದರೆ, ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಅಧ್ಯಕ್ಷರಿಗೆ ಕೆಟ್ಟ ಹೆಸರು ಬರುವಂತಾಗಿದೆ. ಆದ್ದರಿಂದ, ಡಿ.ಕೆ. ಸುರೇಶ್ ಕೂಡಲೇ ಮಾಗಡಿ ತಾಲೂಕಿನ ರೈತರ ಸಮಸ್ಯೆ ಬಗೆಹರಿಸಬೇಕು, ಯಾವ ಅಧಿಕಾರಿಗಳ ರ್ನಿಲಕ್ಷ$್ಯದಿಂದ ವಿಳಂಬವಾಗಿದೆ ಎಂಬುದನ್ನು ಪತ್ತೆಹಚ್ಚಿ ಶ್ರೀ ಅರ್ಹ ಹಾಲು ಉತ್ಪಾದಕರಿಗೆ ಮ್ಯಾಟ್ ಹಾಗೂ ಹಾಲು ಕರೆಯುವ ಯಂತ್ರಗಳನ್ನು ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದು ತಾಲೂಕಿನ ಹೈನುಗಾರರು ಒತ್ತಾಯಿಸಿದ್ದಾರೆ.
ಹೈನುಗಾರರನ್ನು ಸತಾಯಿಸಿದರೆ, ಮುಂಬರುವ ದಿನಗಳಲ್ಲಿ ಎಲ್ಲ ಹಾಲು ಉತ್ಪಾದಕ ಸಹಕಾರ ಸಂಗಳಿಗೆ ಬೀಗ ಹಾಕಿ, ಬೆಂಗಳೂರಿನ "ರ ಭವನ'ದ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಹಾಲಿನ ಸರಬರಾಜನ್ನು ಸ್ಥಗಿತಗೊಳಿಸಿದರೆ ಉಂಟಾಗುವ ನಷ್ಟಕ್ಕೆ ಬಮುಲ್ ಆಡಳಿತ ಮಂಡಳಿಯೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಹಾಲು ಉತ್ಪಾದಕರು ಎಚ್ಚರಿಸಿದ್ದಾರೆ.
"
ಸಾಲ ಮಾಡಿ ಮ್ಯಾಟ್ ಮತ್ತು ಯಂತ್ರಕ್ಕೆ ಹಣ ಕಟ್ಟಿ 6 ತಿಂಗಳಾಯಿತು. ನಮ್ಮಲ್ಲಿ 6 ಹಸುಗಳಿವೆ. ಪ್ರತಿದಿನ 50 ಲೀಟರ್ ಹಾಲು ಕರೆಯಬೇಕು. ಒಬ್ಬರೇ ಇದನ್ನು ಮಾಡಲು ಹೇಗೆ ಸಾಧ್ಯ? ಕೆಲಸಕ್ಕೆ ಯಾರೂ ಬರುವುದಿಲ್ಲ ಎಂಬ ಕಾರಣಕ್ಕೆ ಕಷ್ಟಪಟ್ಟು ಹಣ ಹೊಂದಿಸಿ ಯಂತ್ರಕ್ಕೆ ಕಟ್ಟಿದ್ದೆವು. ಈಗ ಹಣವೂ ಇಲ್ಲ, ಯಂತ್ರವೂ ಇಲ್ಲ.
— > ವಿ.ಎಸ್. ಶಿವಕುಮಾರ್, ವೀರೇಗೌಡನ ದೊಡ್ಡಿ ಹಾಲು ಉತ್ಪಾದಕ
"
ಶ್ರೀದಲ್ಲೇ ನಮಗೆ ಬರಬೇಕಾದ ಮ್ಯಾಟ್ ಹಾಗೂ ಯಂತ್ರಗಳನ್ನು ವಿತರಿಸದಿದ್ದರೆ ಪ್ರತಿಭಟಿಸಲಾಗುವುದು. ಒಕ್ಕೂಟದ ಈ ನಡೆ ರೈತ ವಿರೋಧಿಯಾಗಿದೆ.
— > ವಿಜಯ್ ಕುಮಾರ್, ಲೋಹಿತ್ ವೈ, ವೀರೇಶ್ ವೀರೇಗೌಡನ ದೊಡ್ಡಿ ಹಾಲು ಉತ್ಪಾದಕರು.
"
ಹೈನುಗಾರರಿಗೆ ಹಾಲು ಕರೆಯುವ ಯಂತ್ರ ಅಥವಾ ರಬ್ಬರ್ ಮ್ಯಾಟ್ ಬಮುಲ್ ಕೇಂದ್ರ ಕಚೇರಿಯಿಂದ ಬರಬೇಕು. ಬಂದ ನಂತರ ಎಲ್ಲ ಲಾನುಭವಿಗಳಿಗೂ ವಿತರಿಸಲಾಗುವುದು.
— > ಮಾಗಡಿ ಬಮುಲ್ ಉಪ ವ್ಯವಸ್ಥಾಪಕ ಅಂಜಯ್ ಕುಮಾರ್