ಚನ್ನಪಟ್ಟಣದ ಶಾಲೆಯೊಂದರಲ್ಲಿ ಕೊಠಡಿಗೆ ಬಣ್ಣ ಬಳಿಯುತ್ತಿರುವ ತಹಸೀಲ್ದಾರ್ ಗಿರೀಶ್.  
ಬೆಂಗಳೂರು ದಕ್ಷಿಣ

ತಹಸೀಲ್ದಾರ್ ಕಾರ್ಯಕ್ಕೆ ಜನರ ಶಬ್ಬಾಷ್‌ಗಿರಿ

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿಯುವ ಚನ್ನಪಟ್ಟಣ ತಾಲೂಕು ದಂಡಾಧಿಕಾರಿ
  • ಸರ್ಕಾರಿ ಕೆಲಸಕ್ಕೂ ಸೈ.. ಸಮಾಜ ಸೇವೆಗೂ ಜೈ.. ಎಂದ ಅಧಿಕಾರಿ

ರಾಮನಗರ:

ಎಸಿ ಕಚೇರಿಯಲ್ಲಿ ತಣ್ಣಗೆ ಕುಳಿತು, ಗಂಟೆಹೊಡಿ ಸಂಬಳ ಪಡಿ ಎನ್ನುವ ಪರಿಪಾಠಬೆಳೆಸಿಕೊಂಡಿರುವ ಕೆಲ ಸರ್ಕಾರಿ ಅಧಿಕಾರಿಗಳ ನಡುವೆ ಚನ್ನಪಟ್ಟಣ ತಹಸೀಲ್ದಾರ್ ಬಿ. ಎನ್. ಗಿರೀಶ್ಸಾಮಾಜಿಕ ಕಾಳಜಿಯಿಂದಾಗಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಹೌದು... ಸರ್ಕಾರಿ ಕೆಲಸ ದೇವರ ಕೆಲಸ ಎನ್ನುವ ಮಾತಿದೆ. ಈ ನಾಣ್ಣುಡಿಗೆತಕ್ಕಂತೆ ತಾಲೂಕಿನ ದಂಡಾಧಿಕಾರಿ ವಿಶೇಷವಾದ ಕಾರ್ಯವೈಖರಿ ಹೊಂದಿದ್ದು, ಕಚೇರಿಗೆ ಸಿಮೀತಗೊಳ್ಳದೆ,ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಾದರಿ ಅಧಿಕಾರಿ ಎನಿಸಿಕೊಂಡಿದ್ದು ಸಾರ್ವಜನಿಕರಿಂದವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ಕುಂಚ ಹಿಡಿದ ದಂಡಾಧಿಕಾರಿ!!

ಬಿಡುವಿಲ್ಲದ ಕರ್ತವ್ಯದ ಮಧ್ಯೆಯೂ ತಹಸೀಲ್ದಾರ್, ಸ್ವತಹ ಕೈಯಲ್ಲಿ ಕುಂಚಹಿಡಿದು ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿಯುವ ಕೆಲಸ ಮಾಡುತ್ತಾರೆ. ಭಾನುವಾರ ಸೇರಿ ರಜಾದಿನವನ್ನು ಈಕಾರ್ಯಕ್ಕೆ ವಿನಿಯೋಗಿಸಿದ್ದಾರೆ. ಸರ್ಕಾರಿ ಶಾಲೆಗಳನ್ನು ಉಳಿಸೋಣ ಹಾಗೂ ಬೆಳೆಸೋಣ ಎಂಬ ಅಭಿಯಾನದಡಿ,ಪ್ರಾರಂಭದಲ್ಲಿ ತಾಲೂಕಿನ ಸರ್ಕಾರಿ ಪ್ರೌಢಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈಗಾಗಲೇ ನಗರದಒಲ್ಡ್ ಡೇರಾ ಶಾಲೆಗೆ ಬಣ್ಣ ಬಳಿಯುವ ಕಾರ್ಯ ಮುಗಿಸಿದ್ದು, ಭಾನುವಾರ ಟಿಪ್ಪುನಗರ ಸರ್ಕಾರಿ ಪ್ರೌಢಶಾಲೆಗೆಬಣ್ಣ ಬಳಿಯುವ ಮೂಲಕ, ಸಾಮಾಜಿಕ ಕೈಂಕರ್ಯವನ್ನು ಮುಂದುವರಿಸಿದ್ದಾರೆ.

ತಾಲೂಕಿಗೆ ಆಗಮಿಸಿದಾಗಿನಿಂದಲೂ ಶಿಕ್ಷಣ ಹಾಗೂ ಸಮಾಜಮುಖಿ ಕಾರ್ಯಗಳಿಗೆಹೆಚ್ಚಿನ ಒತ್ತು ನೀಡುತ್ತಿರುವ ಅವರು, ಮಾತಿಗೆ ಸೀಮಿತಗೊಳಿಸದೇ ಹಂತ ಹಂತವಾಗಿ ಕಾರ್ಯರೂಪಕ್ಕೆ ತರುವಮೂಲಕ ವಿಭಿನ್ನ ವ್ಯಕ್ತಿ ಎಂಬುದನ್ನು ನಿರೂಪಿಸಿದ್ದಾರೆ. ಈ ಅಭಿಯಾನಕ್ಕೆ ದಾನಿಗಳು, ಸಂಘ-ಸಂಸ್ಥೆಗಳಪದಾಧಿಕಾರಿಗಳು ಹಾಗೂ ಸಮಾನ ಮನಸ್ಕ ಅಧಿಕಾರಿ ವರ್ಗ ಸಾಥ್ ನೀಡುತ್ತಿದೆ.

ಫಲಿತಾಂಶ ಹೆಚ್ಚಳಕ್ಕೂ ಪಣ!!

ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕು ಹೆಚ್ಚಿನ ಫಲಿತಾಂಶದಾಖಲಿಸಬೇಕೆಂಬುದು ಇವರ ಆಶಯವಾಗಿದ್ದು, ಅದಕ್ಕಾಗಿ ವಿದ್ಯಾರ್ಥಿಗಳನ್ನು ಅವರ ಮನೆಗೆ ತೆರಳಿ ಹುರಿದುಂಬಿಸುವಕೆಲಸ ಆರಂಭಿಸಿದ್ದಾರೆ. ಶಾಲಾ ಮುಖ್ಯಸ್ಥರ ಸಭೆಗಳು, ಫಲಿತಾಂಶಗಳ ವಿಶ್ಲೇಷಣೆ, ಎಸ್‌ಎಸ್‌ಎಲ್‌ಸಿ ಮಕ್ಕಳಿಗೆವಿಶೇಷ ಕಾರ್ಯಾಗಾರ ಸೇರಿ ಮನೆ ಮನೆ ಭೇಟಿ ಮೊದಲಾದ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಫಲಿತಾಂಶವನ್ನುಉತ್ತಮಪಡಿಸಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ.

ಇಲಾಖೆ ಕೆಲಸದಲ್ಲೂ ಸರ್ವೋತ್ತಮ!!!

ಸಾಮಾಜಿಕ ಕೆಲಸವಷ್ಟೇ ಅಲ್ಲದೇ ಇಲಾಖೆ ಕೆಲಸದಲ್ಲೂ ಛಾಪು ಮೂಡಿಸಿದ್ದು,ಮತದಾರರ ಮ್ಯಾಪಿಂಗ್ ಕಾರ್ಯಸಾಧನೆ ಹಾಗೂ ಕಂದಾಯ ಇಲಾಖೆಯ ಭೂಮಿ ರ‌್ಯಾಂಕಿಂಗ್‌ನಲ್ಲಿ ಜಿಲ್ಲೆಯಲ್ಲಿಮೊದಲ ಸ್ಥಾನದಲ್ಲಿರುವುದು ಇದಕ್ಕೆ ಉದಾಹರಣೆಯಾಗಿದೆ. ಈ ಹಿಂದೆ ಶಿವಮೊಗ್ಗ ಸೇರಿ ವಿವಿಧೆಡೆಯೂ ಉತ್ತಮಸೇವೆ ಸಲ್ಲಿಸಿರುವ ಇವರು, ಕರ್ನಾಟಕ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ಸರ್ವೋತ್ತಮ ಸೇವಾ ಪ್ರಶಸ್ತಿಗೂಭಾಜನರಾಗಿದ್ದಾರೆ.

==