ಮಾಗಡಿ ತಾಲೂಕಿನ ಬೆಳಗವಾಡಿ ಗ್ರಾಮದ ತಿಮ್ಮಯ್ಯ ಅವರಿಗೆ ಸೇರಿದ ಸುಸಜ್ಜಿತ ಫಾರಂ ಹೌಸ್ ಮನೆ.
- ಮಾಗಡಿಯ ಬೆಳಗವಾಡಿಯಲ್ಲಿ ಲೋಕಾ ದಾಳಿ
- ಪಿಡಿಓ ತಿಮ್ಮಯ್ಯ ಫಾರಂ ಹೌಸ್ ಮೇಲೆ ದಾಳಿ
- ಸಂಬಂಧಿಕರ ಮನೆಯಲ್ಲೂ ತಲಾಶ್
ಮಾಗಡಿ: ಅಕ್ರಮ ಆಸ್ತ್ರಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ, ಕುಂಬಳಗೂಡು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಿ. ಕೆ. ತಿಮ್ಮಯ್ಯ ಅವರ ಮಾಗಡಿ ತಾಲೂಕಿನ ಬೆಳಗವಾಡಿ ಗ್ರಾಮದ ಪಾರಂ ಹೌಸ್, ಸಂಬಂಧಿಕರ ಮನೆಯ ಮೇಲೆ ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕಿ ಸ್ನೇಹ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.
ಮಾಗಡಿ ತಾಲೂಕಿನ ಬೆಳಗವಾಡಿ ಗ್ರಾಮದ ತಿಮ್ಮಯ್ಯ ಅವರಿಗೆ ಸೇರಿದ ಸುಸಜ್ಜಿತ ಫಾರಂ ಹೌಸ್ ಮನೆ, ಕಚೇರಿ ಹಾಗೂ ಸಂಬಂಧಿಕರ ನಿವಾಸಗಳು ಸೇರಿದಂತೆ ಹಲವು ಕಡೆ ಏಕಕಾಲದಲ್ಲಿ 7 ತಂಡ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಅಧಿಕಾರಿಗಳು ಒಟ್ಟು ಮೂರಕ್ಕೂ ಹೆಚ್ಚು ಪ್ರಮುಖ ಸ್ಥಳಗಳು ಹಾಗೂ ಬೆಂಗಳೂರಿನ ನಾಲ್ಕು ಕಡೆಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಅಂಧ್ರಹಳ್ಳಿಯ ಡಿ-ಗ್ರೂಪ್ ಲೇಔಟ್‌ನಲ್ಲಿರುವ ನಿವಾಸದ ಮೇಲೆ ದಾಳಿ ಮಾಡಲಾಗಿದ್ದು ಪಿಡಿಒ ತಿಮ್ಮಯ್ಯ ಅವರ ಅಣ್ಣ ಹಾಗೂ ಅಕ್ಕನ ಮಗನ ಮನೆಗಳ ಮೇಲೆಯೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಸದ್ಯ ಲೋಕಾಯುಕ್ತ ಅಧಿಕಾರಿಗಳ ತಂಡಗಳು ಬಿ. ಕೆ. ತಿಮ್ಮಯ್ಯ ಅವರಿಗೆ ಸೇರಿದ ಕಚೇರಿ ಮತ್ತು ನಿವಾಸಗಳಲ್ಲಿ ತೀವ್ರ ಶೋಧ ಕಾರ್ಯ ಮುಂದುವರಿಸಿದ್ದು, ಅಕ್ರಮ ಆಸ್ತಿಪಾಸ್ತಿ, ನಗದು, ಚಿನ್ನಾಭರಣ ಹಾಗೂ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಹೆಚ್ಚಿನ ಮಾಹಿತಿ ತನಿಖೆಯ ನಂತರ ಹೊರಬರಬೇಕಿದೆ.