ಟ್ರಾಫಿಕ್ ನ ಸಂಗ್ರಹ ಚಿತ್ರ 
ಬೆಂಗಳೂರು ದಕ್ಷಿಣ

ರಾಮನಗರದಲ್ಲಿ ಪಾರ್ಕಿಂಗ್​ ಸಂಹಿತೆ ಜಾರಿ

ಪ್ರಮುಖ ಮುಖ್ಯಾಂಶಗಳು

  • ಸಂಚಾರ ನಿಯಮ ಪಾಲನೆಗೆ ಸೂಚನೆ
  • ಸಂಚಾರ ಸಿಕ್ಕಿಗೆ ಪರಿಹಾರ
ರಾಮನಗರ
ಜಿಲ್ಲಾ ಕೇಂದ್ರ ರಾಮನಗರದಲ್ಲಿ ವಾಹನಗಳ ಪಾರ್ಕಿಂಗ್​ ವ್ಯವಸ್ಥೆಯನ್ನು ಹಳಿಗೆ ತರುವ ನಿಟ್ಟಿನಲ್ಲಿ ಕೆಲ ತಿಂಗಳ ಹಿಂದೆ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ಸಂಚಾರ ಪೊಲೀಸರು ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ.
ಇದರಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ನಗರಸಭೆ ಸಹಕಾರದೊಂದಿಗೆ ಸಂಚಾರ ಪೊಲೀಸರು ಪಾರ್ಕಿಂಗ್​, ನೋ ಪಾರ್ಕಿಂಗ್​ ಸೂಚನಾ ಲಕ ಅಳವಡಿಸುತ್ತಿದ್ದಾರೆ.
ರಾಜಧಾನಿ ಬೆಂಗಳೂರು ಮಹಾನಗರಕ್ಕೆ ಬೆಂಗಳೂರು ದಣ ಜಿಲ್ಲೆ ರಾಮನಗರ ಹತ್ತಿರವಾಗಿರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ. ಪ್ರತಿನಿತ್ಯ ಸಾವಿರಾರು ಕಾರುಗಳು, ದ್ವಿಚಕ್ರ ವಾಹನಗಳು, ಆಟೋ ಮತ್ತಿತರ ಮೋಟಾರು ವಾಹನಗಳ ಸಂಚಾರ ಹೆಚ್ಚಿದೆ. ಇಡೀ ನಗರವೇ ಸಂಚಾರ ವ್ಯವಸ್ಥೆಯ ಸಿಕ್ಕಿನಲ್ಲಿ ಸಿಲುಕಿ ಜನ ತೊಂದರೆಗೆ ಒಳಗಾಗುತ್ತಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಇಲಾಖೆ ಈಗ ಕ್ರಮವಹಿಸಿದೆ.

ಎಲ್ಲೆಲ್ಲಿ ವಾಹನ ನಿಲುಗಡೆಗೆ ಅವಕಾಶ/ನಿಷೇಧ?

ನಗರದ ಡಿಪಿಒ ಸರ್ಕಲ್​ನಿಂದ ವಾಟರ್​ ಟ್ಯಾಂಕ್​ ಸರ್ಕಲ್​ರವರೆಗೂ ಜಿಲ್ಲಾ ಕ್ರೀಡಾಂಗಣ ಕಡೆಗೆ ಮತ್ತು ವಾಟರ್​ ಟ್ಯಾಂಕ್​ ಸರ್ಕಲ್​ನಿಂದ ಕೆಪಿಟಿಸಿಎಲ್​ (ಬೆಸ್ಕಾಂ) ಕಚೇರಿವರೆಗೆ, ನಗರಸಭೆ ಕಡೆಗೆ ದ್ವಿಚಕ್ರ ವಾಹನ ನಿಲುಗಡೆ ಮತ್ತು ಪರಿವೀಕ್ಷಣಾ ಮಂದಿರದ ಕಡೆಗೆ ನಾಲ್ಕು ಚಕ್ರ ವಾಹನ ಹಾಗೂ ಕೆಪಿಟಿಸಿಎಲ್​ (ಬೆಸ್ಕಾಂ) ಕಚೇರಿಯಿಂದ ರೇಲ್ವೆ ನಿಲ್ದಾಣದ ಸರ್ಕಲ್​ವರೆಗೂ ಅಂಚೆ ಕಚೇರಿ ಕಡೆಗೆ ದ್ವಿಚಕ್ರ ವಾಹನಗಳನ್ನು ವಾರದ ಎಲ್ಲ ದಿನಗಳಲ್ಲೂ ನಿಲುಗಡೆಗೆ ಅವಕಾಶ ಮಾಡಲಾಗಿದೆ.
ರೇಲ್ವೆ ನಿಲ್ದಾಣದ ಸರ್ಕಲ್​ನಿಂದ ಅರ್ಕಾವತಿ ಬ್ರಿಡ್ಜ್​ವರೆಗೂ (ಹಳೆ ಬಸ್​ ನಿಲ್ದಾಣದ ರಸ್ತೆ) ಉತ್ತರದ ಕಡೆಗೆ ಭಾನುವಾರ, ಮಂಗಳವಾರ, ಗುರುವಾರ ಶನಿವಾರ, ದಣದ ಕಡೆಗೆ ಸೋಮವಾರ, ಬುಧವಾರ, ಶುಕ್ರವಾರ ದ್ವಿ&ಚಕ್ರ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿದ್ದು, ನಾಲ್ಕು ಚಕ್ರ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಬಜಾರ್​ ಸರ್ಕಲ್​ನಿಂದ ಮಂಡಿಪೇಟೆ ರಸ್ತೆ ಉತ್ತರ&ದಣವಾಗಿದ್ದು, ರಸ್ತೆಯ ಪೂರ್ವದ ಕಡೆಗೆ ಭಾನುವಾರ, ಮಂಗಳವಾರ, ಗುರುವಾರ, ಶನಿವಾರ, ಪಶ್ಚಿಮದ ಕಡೆಗೆ ಸೋಮವಾರ, ಬುಧವಾರ, ಶುಕ್ರವಾರ ದ್ವಿ&ಚಕ್ರ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿದ್ದು ನಾಲ್ಕು ಚಕ್ರ ವಾಹನ ನಿಲುಗಡೆಗೆ ನಿಷೇಧಿಸಲಾಗಿದೆ.
ಬಜಾರ್​ ಸರ್ಕಲ್​ನಿಂದ ಆಲದ ಮರ ಸರ್ಕಲ್​ ಕಾಮನಗುಡಿ ಸರ್ಕಲ್​ ಮಾರ್ಗವಾಗಿ ರಸ್ತೆಯ ಪೂರ್ವದ ಕಡೆಗೆ ಭಾನುವಾರ, ಮಂಗಳವಾರ, ಗುರುವಾರ ಶನಿವಾರ, ಪಶ್ಚಿಮದ ಕಡೆಗೆ ಸೋಮವಾರ, ಬುಧವಾರ, ಶುಕ್ರವಾರ ದ್ವಿ&ಚಕ್ರ ವಾಹನ ನಿಲುಗಡೆಗೆ ಅವಕಾಶ ಮಾಡುವಂತೆ ಮತ್ತು ನಾಲ್ಕು ಚಕ್ರ ವಾಹನ ನಿಲುಗಡೆಗೆ ನಿಷೇಧಿಸಲಾಗಿದೆ.
ಬಜಾರ್​ ರಸ್ತೆಯಿಂದ ಛತ್ರದ ಬೀದಿ ರಸ್ತೆಯಲ್ಲಿ ಪೂರ್ವದ ಕಡೆಗೆ ಭಾನುವಾರ, ಮಂಗಳವಾರ, ಗುರುವಾರ ಶನಿವಾರ, ಪಶ್ಚಿಮದ ಕಡೆಗೆ ಸೋಮವಾರ, ಬುಧವಾರ, ಶುಕ್ರವಾರ ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ ಮಾಡುವಂತೆ ಮತ್ತು ನಾಲ್ಕು ಚಕ್ರ ವಾಹನ ನಿಲುಗಡೆಗೆ ನಿಷೇಧಿಸಲಾಗಿದೆ.
ಅರ್ಕಾವತಿ ಸೇತುವೆ ಅಂಚಿನಿಂದ ಹಳೇ ಬಸ್​ ನಿಲ್ದಾಣದ ಸರ್ಕಲ್​ನಲ್ಲಿ ಹಳೇ ಬಸ್​ ನಿಲ್ದಾಣದ ಬಸವೇಶ್ವರ ದೇವಸ್ಥಾನ ಮುಂದೆ ಹೊರತುಪಡಿಸಿ ರಸ್ತೆ ಬಿಳಿ ಪಟ್ಟಿಯ ಒಳಗೆ ದ್ವಿ&ಚಕ್ರ ವಾಹನಗಳನ್ನು ವಾರದ ಎಲ್ಲ ದಿನಗಳು ನಿಲುಗಡೆ ಮಾಡಬಹುದಾಗಿದ್ದು, ನಾಲ್ಕು ಚಕ್ರ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಹಳೇ ಬಸ್​ ನಿಲ್ದಾಣದ ಸಿಟಿ ಬಸ್​ ನಿಲ್ದಾಣದಲ್ಲಿ ವಾರದ ಎಲ್ಲ ದಿನಗಳಲ್ಲಿ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನ ನಿಲುಗಡೆ ಮಾಡಬಹುದು.
ಹಳೇ ಬಸ್​ ನಿಲ್ದಾಣದ ಬಳಿ ಇರುವ ಅರಳಿ ಮರದಿಂದ ಪಿಎಲ್​ಡಿ ಬ್ಯಾಂಕ್​ ಕಡೆಗೆ ಹೋಗುವ ರಸ್ತೆ ಎಡ ಭಾಗದಲ್ಲಿ ದ್ವಿ&ಚಕ್ರ ವಾಹನ ನಿಲುಗಡೆ (ಆಸ್ಪತ್ರೆಯ ಕಾಂಪೌಂಡ್​ ಕಡೆಗೆ) ವಾರದ ಎಲ್ಲ ದಿನ ನಿಲುಗಡೆ ಮಾಡುವಂತೆ, ನಾಲ್ಕು ಚಕ್ರದ ವಾಹನ ನಿಲುಗಡೆ ನಿಷೇಧಿಸಿದೆ.
ಹಳೇ ಬಸ್​ ನಿಲ್ದಾಣದದಿಂದ ಐಜೂರು ಸರ್ಕಲ್​ ಕಡೆಗೆ 1ನೇ ಕ್ರಾಸ್​ವರೆಗೂ ರಸ್ತೆಯ ಎರಡು ಬದಿಯಲ್ಲಿ ದ್ವಿ&ಚಕ್ರ ವಾಹನ ವಾರದ ಎಲ್ಲ ದಿನ ನಿಲುಗಡೆ ಮಾಡುವಂತೆ, ನಾಲ್ಕು ಚಕ್ರದ ವಾಹನ ನಿಲುಗಡೆ ನಿಷೇಧಿಸಿ, ನಂತರ 1ನೇ ಕ್ರಾಸ್​ನಿಂದ ಐಜೂರು ಸರ್ಕಲ್​ ಸಿಗ್ನಲ್​ವರೆಗೂ ವಾಹನ ನಿಲುಗಡೆ ಸಂಪೂರ್ಣ ನಿಷೇಧಿಸಲಾಗಿದೆ.
ಬೆನಕಾ ಬಜಾರ್​ ರಸ್ತೆ ಎರಡು ಬದಿಯಲ್ಲಿ ದ್ವಿಚಕ್ರ ವಾಹನಗಳನ್ನು ವಾರದ ಎಲ್ಲ ದಿನ ನಿಲುಗಡೆ ಮಾಡುವಂತೆ, ನಾಲ್ಕು ಚಕ್ರದ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಐಜೂರು ಸರ್ಕಲ್​ನಿಂದ ಲಕ್ಷ್ಮೀ ವೆಂಕಟೇಶ್ವರ ಟ್ರೇಡರ್ಸ್​ವರೆಗೂ (ಮಾಗಡಿ&ಜಾಲಮಂಗಲ ರಸ್ತೆ) ವಾರದ ಎಲ್ಲ ದಿನ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಲಕ್ಷ್ಮೀ ವೆಂಕಟೇಶ್ವರ ಟ್ರೇಡರ್ಸ್​ನಿಂದ ಕೆಂಪೇಗೌಡ ಸರ್ಕಲ್​ವರೆಗೂ ವಾರದ ಎಲ್ಲ ದಿನ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಈ ರಸ್ತೆಯ ಕಡೆಗಳಲ್ಲಿ ವಾಹನ ನಿಲುಗಡೆ (ಪಾರ್ಕಿಂಗ್​&ನೋ ಪಾರ್ಕಿಂಗ್​) ಮಾಡಲು ಜಿಲ್ಲಾಧಿಕಾರಿ ಆದೇಶಿಸಿದ್ದರು.
ಬಾಕ್ಸ್​)))
ಜಿಲ್ಲಾಧಿಕಾರಿ ಆದೇಶ
ಜಿಲ್ಲಾಧಿ-ಕಾರಿ ಸಾರ್ವಜನಿಕ ಹಿತದಷ್ಟಿಯಿಂದ ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್​ ಮತ್ತು ನೋ ಪಾರ್ಕಿಂಗ್​ ವಲಯಗಳನ್ನು 2025ರ ಆಗಸ್ಟ್​ನಲ್ಲಿ ೂಷಿಸಿದ್ದರು. ಈಗ ಈ ಆದೇಶವನ್ನು ಜಾರಿಗೆ ತರಲು ಸಂಚಾರಿ ಪೊಲೀಸರು ನಗರದಲ್ಲಿ ಪಾರ್ಕಿಂಗ್​ ಸೇರಿದಂತೆ ಸಂಚಾರ ಸೂಚನಾ ಲಕ ಅಳವಡಿಸುತ್ತಿದ್ದಾರೆ. ಇದಕ್ಕಾಗಿ ನಗರಸಭೆಯಿಂದ 8 ಲ ರೂ. ಅನುದಾನ ಒದಗಿಸಲಾಗಿದ್ದು, ನಗರದ ಪ್ರಮುಖ ರಸ್ತೆಗಳ 110 ಸ್ಥಳಗಳಲ್ಲಿ ಸೂಚನಾ ಲಕ ಅಳವಡಿಸಲಾಗಿದೆ.

ಎಚ್ಚೆತ್ತುಕೊಳ್ಳದಿದ್ದರೆ ದಂಡ

ನಗರದ ಸಂಚಾರ ದಟ್ಟಣ ನಿಯಂತ್ರಣಕ್ಕೆ ಸೂಚನಾ ಫಲಕಗಳನ್ನು ಅಳವಡಿಸಲಾಗುತ್ತಿದೆಯಾದರೂ, ಏಕಾಏಕಿ ದಂಡ ಪ್ರಯೋಗ ಮಾಡುವುದಿಲ್ಲ. ಮೊದಲಿಗೆ ವಾಹನ ಸವಾರರಿಗೆ ಜಾಗೃತಿ ಮೂಡಿಸಿ, ನಂತರ ನೋ ಪಾರ್ಕಿಂಗ್​ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡಿದರೆ ರೂ. 500 ದಂಡ ಹಾಕುವ ಕಾರ್ಯಕ್ಕೆ ಕೈ ಹಾಕಲಿದ್ದಾರೆ. ಪೊಲೀಸರು ಅಳವಡಿಸಿರುವ ಸೂಚನಾ ಫಲಕಗಳನ್ನು ಗಮನಿಸಿ ವಾಹನಗಳ ಪಾರ್ಕಿಂಗ್​ ಮಾಡಬೇಕು ಎನ್ನುವುದು ಸಂಚಾರಿ ಪೊಲೀಸರ ಸಲಹೆ.
ನಗರದ ಸೌಂದರ್ಯ ಸಂಚಾರ ದಟ್ಟಣೆ ಮೇಲೂ ಅವಲಂಬಿತವಾಗಿರುತ್ತದೆ. ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಸಂಚಾರ ಶಿಸ್ತು ಮೂಡಿಸಲು ಸಂಚಾರಿ ಪೊಲೀಸರ ಪ್ರಸ್ತಾವನೆ ಮೇರೆಗೆ ಸೂಚನಾ ಫಲಕಗಳನ್ನು ಅಳವಡಿಸಲು ನಗರಸಭೆ 8 ಲಕ್ಷ ರೂ. ಅನುದಾನದ ನೀಡಿದೆ. ನಿಗದಿತ ಸ್ಥಳದಲ್ಲೇ ವಾಹನ ನಿಲ್ಲಿಸಿ ವಾಹನ ಸವಾರರು ಸಂಚಾರಿ ಶಿಸ್ತು ಪಾಲಿಸಬೇಕು, ಸುಗಮ ವಾಹನ ಸಂಚಾರಕ್ಕೆ ಸಹಕಾರ ನೀಡಬೇಕು.
ಕೆ.ಶೇಷಾದ್ರಿ,
ಅಧ್ಯಕ್ಷರು, ನಗರಸಭೆ ರಾಮನಗರ