ಕನಕಪುರ: ಚನ್ನಪಟ್ಟಣ ರಸ್ತೆ ರಾಮೇಗೌಡನದೊಡ್ಡಿ ಬಳಿ ಮಂಗಳವಾರ ರಾತ್ರಿ ಆಟೋ ರಿಾ ಮತ್ತು ಕಾರು ನಡುವೆ ಡಿಕ್ಕಿಯಾಗಿ ಒಬ್ಬ ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಸಾತನೂರು ಪೋಲಿಸ್ ಠಾಣಾ ವ್ಯಾಪ್ತಿಯ ಚನ್ನಪಟ್ಟಣ ರಸ್ತೆ ರಾಮೇಗೌಡನದೊಡ್ಡಿ ಸಮೀಪ ಮಂಗಳವಾರ ರಾತ್ರಿ ಈ ಅಪಘಾತವಾಗಿದ್ದು ಬೆಂಗಳೂರು ಮಲ್ಲೇಶ್ವರಂನ ಲೋಕೇಶ್ (48) ಮೃತ. ಸ್ನೇಹಿತರಾದ ಪ್ರದಿಪ್ ಮತ್ತು ಶಿವಕುಮಾರ್ ಗಾಯಗೊಂಡಿದ್ದಾರೆ.
ಮಲ್ಲೇಶ್ವರಂನಿಂದ ಚನ್ನಪಟ್ಟಣ ಮಾರ್ಗವಾಗಿ ಕಬ್ಬಾಳು ದೇವಸ್ಥಾನಕ್ಕೆ ಬರುತ್ತಿದ್ದ ವೇಳೆ ಎದುರಿನಿಂದ ಬಂದ ಕಾರಿಗೆ ಢಿಕ್ಕಿಯಾಗಿದೆ.
ಅಪಘಾತದ ರಭಸಕ್ಕೆ ಆಟೋ ನಜ್ಜುಗುಜ್ಜಾಗಿದೆ. ವಿಷಯ ತಿಳಿದ ಸಾತನೂರು ಪೊಲೀಸರು ಸ್ಥಳ ಪರಿಶೀಲಿಸಿ, ಎರಡು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಲೋಕೇಶ್ ಮೃತದೇಹವನ್ನು ಚನ್ನಪಟ್ಟಣ ಆಸ್ಪತ್ರೆಯಲ್ಲಿ ಮರಣೋತ್ತರ ಪರೀೆ ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.