ಹಾರೋಹಳ್ಳಿ
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬಂದಾಗ ದೊಡ್ಡ ಕುರುಬರಹಳ್ಳಿಯ ಬಿಸಿಲು
ಮಾರಮ್ಮ ದೇವಸ್ಥಾನಕ್ಕೆ ಬೀಗ ಜಡಿದು ದೇವರ ದರ್ಶನಕ್ಕೆ ಅವಕಾಶ ನೀಡದ ವಿಷಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಾಟಾಚಾರಕ್ಕೆ ಕ್ಷಮೆ ಕೇಳಿದರೆ ಸಾಲದು, ಕಿಡಿಗೇಡಿಗಳಿಗೆ ಶಿಕ್ಷೆಯಾಗಬೇಕು ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎನ್ ರಾಮು ಒತ್ತಾಯಿಸಿದರು.
ದೊಡ್ಡ ಕುರುಬರಹಳ್ಳಿ ಗ್ರಾಮ ಬಿಸಿಲು ವಾರಮ್ಮ ದೇವಸ್ಥಾನದ ಬಳಿ ಬುಧವಾರ ಸುದ್ದಿಗೋಷ್ಠಿಯಲ್ಲಿ ವಾತನಾಡಿ, ಬೂಟಾಟಿಕೆಯ ಕ್ಷಮೆಯಾಚನೆ ಯಾರೋ ಹೇಳಿಕೊಟ್ಟಂತಿದ್ದು, ಹೇಳಿಕೊಟ್ಟವರು ಯಾರು ಎನ್ನುವುದು ಬಹಿರಂಗವಾಗಬೇಕು ಎಂದರು.
ನಿಖಿಲ್ ಅವರ ದೇವಸ್ಥಾನ ಪ್ರವೇಶ ತಡೆದವರ ವಿರುದ್ಧ ಕ್ರಮವಾಗಿಲ್ಲ. ಅಧಿಕಾರಿಗಳು, ಪೊಲೀಸರು ಸರ್ಕಾರದ ಕೈಗೊಂಬೆಯಾಗಿದ್ದು, ಅವರಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದರು.
ದೇವಸ್ಥಾನ ಯಾರ ಮನೆ ಸ್ವತ್ತಲ್ಲ,ಎಲ್ಲರ ಆಸ್ತಿ. ಜೆಡಿಎಸ್ ಮುಖಂಡರು ದೇವಸ್ಥಾನ ನಿರ್ಮಿಸಲು ದೇಣಿಗೆ ನೀಡಿದ್ದಾರೆ. ಹಿಂದೂ ಧರ್ಮದಲ್ಲಿ ಎಲ್ಲರೂ ಒಂದೇ ಎಂಬ ಭಾವನೆಯಿಂದ ಸುಮ್ಮನಿದ್ದೇವೆ. ಮುಂದೆ ಈ ರೀತಿ ಘಟನೆಗಳು ಮರುಕಳಿಸಿದರೆ ಕೈಕಟ್ಟಿ ಕೂರುವುದಿಲ್ಲ ಎಂದರು.
ಮುಖಂಡರಾದ ರವಿಕುವಾರ್, ಮರಿಯಪ್ಪ, ಗೀತಾ, ಸಿದ್ದಪ್ಪ ವಾತನಾಡಿ, ನಿಖಿಲ್ ದೇವಸ್ಥಾನ ಪ್ರವೇಶ ತಡೆದ ಕಿಡಿಗೇಡಿಗಳು ನಮಗೆ ಪ್ರಾಣಭವಿತ್ತು ಎಂದು ಹೇಳಿರುವುದು ಸುಳ್ಳು. ಒಡವೆ ಕಳವು ವಾಡುತ್ತಾರೆ ಎಂದಿರುವುದು ಹಾಸ್ಯಾಸ್ಪದ. ನಮ್ಮ ಬಳಿ ವಿಡಿಯೋ ಸಾಕ್ಷ್ಯವಿದೆ. ನಿಖಿಲ್ ಬರುವಾಗ ದೇವಸ್ಥಾನ ಬೀಗ ಹಾಕಿದ್ದು ಸರಿಯಲ್ಲ. ನಮ್ಮ ನಾಯಕರನ್ನು ಕಾಂಗ್ರೆಸ್‌ನವರು ಸನ್ಮಾನಿಸಿ ಸ್ವಾಗತಿಸುವುದು ಬೇಕಾಗಿಲ್ಲ. ಕಾಂಗ್ರೆಸ್‌ನವರ ಹಂಗು ನಮಗೆ ಬೇಕಾಗಿಲ್ಲ. ನಿಖಿಲರನ್ನು ದೇವಸ್ಥಾನಕ್ಕೆ ಕರೆತಂದು ದೇವರ ದರ್ಶನ ವಾಡಿಸುತ್ತೇವೆ ಎಂದು ಹೇಳಿದರು.
ಹೋಬಳಿ ಅಧ್ಯಕ್ಷ ಮಲ್ಲಪ್ಪ, ಮುಖಂಡರಾದ ನಾಗರಾಜು, ರವೀಶ, ಈರೇಗೌಡ, ಮಹದೇವ್, ಮೂರ್ತಿ, ಚೇತನ್, ಕೃಷ್ಣಮೂರ್ತಿ, ತಿಮ್ಮಪ್ಪ, ಸಂದೀಪ್ ಕುವಾರ್, ಸುಶೀಲಮ್ಮ, ವರಲಕ್ಷ್ಮೀ, ಸರೋಜಮ್ಮ, ಮಮತಾ ಇತರರು ಇದ್ದರು.