ದೇವಸ್ಥಾನದ ಉದ್ಘಾಟನೆ ವೇಳೆ ನಿಖಿಲ್ ಕುಮಾರಸ್ವಾಮಿ ಅವರನ್ನು ಸನ್ಮಾನಿಸಿದ ಗ್ರಾಮಸ್ಥರು.
- ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್
- ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ
- ಮಾತು ತಪ್ಪಿದ ಸಿದ್ದು ಸರ್ಕಾರ
ಧಾರವಾಡದಲ್ಲಿ ಯುವಕರ ಕಿಚ್ಚು ಆರಂಭವಾಗಿದೆ. ಇದು ಇಡೀ ರಾಜ್ಯ ವ್ಯಾಪಿಯಲ್ಲಿ ಹತ್ತಿ ಉರಿಯುವುದಲ್ಲಿ ಸಂಶಯವಿಲ್ಲ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಉದ್ಯೋಗ ಸೃಷ್ಟಿ ಮಾಡಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.
ತಾಲೂಕಿನ ಕೈಲಾಂಚ ಹೋಬಳಿಯ ತೆಂಗಿನಕಲ್ಲು ಮತ್ತು ಕಡ್ಲೆಸುಬ್ಬಯ್ಯನದೊಡ್ಡಿ ಗ್ರಾಮದ ಕೋಟೆ ಮಾರಮ್ಮ ದೇವಿಯ ನೂತನ ಶಿಲಾ ಮೂರ್ತಿ ಪ್ರತಿಷ್ಠಾಪನೆ ಹಾಗೂ ನೂತನ ದೇವಾಲಯ ಉದ್ಘಾಟನೆ ಹಾಗೂ ನೂತನ ವಿಮಾನ ಗೋಪುರ ಕುಂಭಾಭಿಷೇಕ ಮಹೋತ್ಸವದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು ಕಾಂಗ್ರೆಸ್. ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆಯುತ್ತಾ ಬಂದಿದೆ. ಒಂದೇ ಒಂದು ಹುದ್ದೆಯನ್ನು ಭರ್ತಿ ಮಾಡಿಲ್ಲ. ಅಧಿಕಾರಕ್ಕೆ ಬಂದು ಒಂದು ವರ್ಷದಲ್ಲಿ ಯುವಕರಿಗೆ ಉದ್ಯೋಗ ಒದಗಿಸುವುದಾಗಿ ಹೇಳಿದ್ದ ಕಾಂಗ್ರೆಸ್ ಸರ್ಕಾರ ಕುರ್ಚಿಗಾಗಿ ಫೈಟ್ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.
ಸ್ವಾಭಿಮಾನದ ಬದುಕು ಕೊಡಿ
ಯುವನಿಧಿಯಲ್ಲಿ ಮೂರು ಸಾವಿರ ಕೊಡುತ್ತಿz್ದೆÃವೆ ಎಂದಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಲಘುವಾಗಿ ಮಾತನಾಡಿದ್ದಾರೆ. ಯುವನಿಧಿ ನಂಬಿಕೊAಡು ಯಾವ ಯುವಕರು ಇಲ್ಲ, ಯುವಕರಿಗೆ ಸ್ವಾಭಿಮಾನ ಬದುಕು ರೂಪಿಸಿ, ಉದ್ಯೋಗ ಸೃಷ್ಟಿ ಮಾಡುವುದು ಸರ್ಕಾರಗಳ ಜವಾಬ್ದಾರಿ ಕೊಟ್ಟ ಮಾತಿನಂತೆ ಉಳಿಸಿಕೊಂಡಿಲ್ಲ, ಮಾತು ತಪ್ಪಿದ್ದಾರೆ ಎಂದು ಕುಟುಕಿದರು.
ಕಳೆದ ವರ್ಷ ಮೇ ತಿಂಗಳಲ್ಲಿ ಕೊಟ್ಟಿದ್ದ ಮಾತನ್ನ ಕಾಂಗ್ರೆಸ್ ಸರ್ಕಾರ ತಪ್ಪಿದ್ದಾರೆ. 2.85 ಲಕ್ಷಕ್ಕೂ ಹೆಚ್ಚು ಹುದ್ದೆಗಳ ಭರ್ತಿ ಮಾಡುತ್ತೇವೆ ಎಂದು ಹೇಳಿ ಒಂದು ವರ್ಷ ಕಳೆದಿದೆ. ಆದರೆ ಒಂದು ಉದ್ಯೋಗ ಕೂಡ ಭರ್ತಿ ಅಗಿಲ್ಲ ಇದು ನಿಜಕ್ಕೂ ಖಂಡನೀಯ ಎಂದು ಹೇಳಿದರು.
ಸಿದ್ದರಾಮಯ್ಯಗೆ ಮತ್ತೇನು ಬೇಕು?
ಸಿಎಂ ಸಿದ್ದರಾಮಯ್ಯರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ಅವರು, 8 ವರ್ಷ ಮುಖ್ಯಮಂತ್ರಿಯಾಗಿ, 35 ವರ್ಷ ಅಧಿಕಾರ ಅನುಭವಿಸಿದ್ದಾರೆ, ದೇವರಾಜು ಅರಸು ದಾಖಲೆ ಬ್ರೇಕ್ ಮಾಡಿದ್ದಾರೆ. ಇಷ್ಟೆಲ್ಲಾ ಯೋಗ ಮಾಡಿರುವಂತ ಮುಖ್ಯಮಂತ್ರಿ ಬಾಯಲ್ಲಿ ಇಂಥ ಮಾತು ನಿರೀಕ್ಷಿಸಿರಲಿಲ್ಲ ಎಂದು ಕಿಡಿಕಾರಿದರು.
ಸಮಾಜ ಮತ್ತು ಸಮುದಾಯವನ್ನು ಮುಂದಿಟ್ಟುಕೊAಡು ರಕ್ಷಣೆ ಪಡೆಯುವಂತ ಕೆಲಸ ಮಾಡಬೇಡಿ. ನೀವು ಈ ರಾಜ್ಯದ ಮುಖ್ಯಮಂತ್ರಿಯಾಗಿ 18ನೇ ಬಜೆಟ್ ಮಂಡನೆ ಮಾಡುತ್ತಿದ್ದೀರಿ ಎಂದರೆ ಅದಕ್ಕೆ ದೇವೇಗೌಡರು ಹಾಗೂ ಜನತಾದಳ ಪಕ್ಷವೇ ಕಾರಣ., ಅಂದು ಪಕ್ಷದಲ್ಲಿ ಅಗ್ರಗಣ್ಯ ನಾಯಕರಿದ್ದರೂ ಸಿದ್ದರಾಮಯ್ಯ ಅವರ ಕೈಯಲ್ಲಿ ಸಾಮಾಜಿಕ ನ್ಯಾಯ ಬದ್ಧತೆಯಿಂದ ಬಜೆಟ್ ಮಂಡನೆ ಮಾಡಿಸಿದ್ದು ಇದೇ ದೇವೇಗೌಡರು ಎಂದು ಹೇಳಿದರು.
ಅಂದು ದೇವೇಗೌಡರು ಬಜೆಟ್ ಮಂಡನೆ ಮಾಡಿಸಿಲ್ಲ ಎಂದಿದ್ದರೆ, ಇಂದು ಸಿದ್ದರಾಮಯ್ಯ ಅವರು 18ನೇ ಬಜೆಟ್ ಮಂಡಿಸುತ್ತಿದ್ರಾ..? ಇತಿಹಾಸ ತಿಳಿದುಕೊಂಡು ಮಾತಾಡೋಣ ಎಂದು ಸಿಎಂಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದರು.
ಚುನಾವಣೆ ನಡೆದರೆ ಕಾಂಗ್ರೆಸ್ ಬೀದಿಗೆ
31ಕಾಂಗ್ರೆಸ್ ಶಾಸಕರ ಪತ್ರ ವಿಚಾರಕ್ಕೆ ಮಾತನಾಡಿದ ಅವರು, ಸಚಿವರ ಬದಲಾವಣೆಯಲ್ಲ, ಕಾಂಗ್ರೆಸ್ ಸರ್ಕಾರವನ್ನೇ ಬದಲಾವಣೆ ಮಾಡುವ ಕೆಲಸ ಮಾಡಬೇಕು ಎಂದು ಏಳೂ ಕೋಟಿ ಕನ್ನಡಿಗರು ಚರ್ಚೆ ಮಾಡುತ್ತಿದ್ದಾರೆ. 9 ಸಾವಿರ ಕಿ.ಮೀ ಪ್ರವಾಸ ಮಾಡಿz್ದÉÃನೆ, ಈ ಕೂಡಲೇ ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡಿ, ಬೀದಿಗೆ ತಳ್ಳುತ್ತಾರೆ ಎಂದು ಕಿಡಿ ಕಾರಿದರು.
ರಾಜ್ಯದ ಅಭಿವೃದ್ಧಿ ಎಂದಿಗೂ ಇವರಿಂದ ಕಾಣುವುದಿಲ್ಲ. ಇವರ ಮನಸ್ಥಿತಿ ಇನ್ನು ಎರಡು ವರ್ಷದಲ್ಲಿ ಎಷ್ಟಾಗುತ್ತೋ ಲೂಟಿ ಮಾಡಿ ಜನ ಸಾಮಾನ್ಯರನ್ನ ಸಾಲಗಾರರನ್ನಾಗಿ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದರು.
ರಾಮನಗರಕ್ಕೆ ಫಿಕ್ಸ್ ಆಗಿದ್ದೀನಿ
ನಾನು ರಾಮನಗರಕ್ಕೆ ಪಿಕ್ಸ್ ಆಗಿz್ದÉÃನೆ, ಯಾವುದೇ ಅನುಮಾನ ಬೇಡ. ನಾನು ಪಲಾಯನವಾದಿ ರಾಜಕಾರಣ ಮಾಡಲ್ಲ, ನಮ್ಮ ಕಾರ್ಯಕರ್ತರ ಆದೇಶವೇ ಅಂತಿಮ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ಮುಂದಿನ ಚುನಾವಣೆಯಲ್ಲಿ ತಮ್ಮ ಸ್ಪರ್ಧೆ ವಿಚಾರಕ್ಕೆ ಸಂಬAಧಿಸಿದAತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ,ಪದೇ ಪದೇ ಈ ಬಗ್ಗೆ ಪ್ರಶ್ನೆ ಕೇಳಬೇಡಿ. ಅಷ್ಟೊಂದು ಅನುಮಾನ ಬೇಡ. ನನ್ನನ್ನ ಎಲ್ಲಾ ಕಡೆಯಿಂದ ವಿರೋಧಿಗಳು ರೌಂಡಪ್ ಆಗ್ತಾರೆ. ಮುಂದೆಯೂ ಕೂಡಾ ರೌಂಡಪ್ ಮಾಡ್ತಾರೆ. ಆದರೆ ಜನ ನಮ್ಮನ್ನ ಕಾಪಾಡುವ ಸಂಪೂರ್ಣ ವಿಶ್ವಾಸ ಇದೆ ಎಂದು ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿದರು.