ಸಾಂದರ್ಭಿಕ ಚಿತ್ರ 
ಬೆಂಗಳೂರು ದಕ್ಷಿಣ

ಪತ್ನಿಯ ಕಿರುಕುಳಕ್ಕೆ ನವವಿವಾಹಿತ ಆತ್ಮಹತ್ಯೆ

ಕನಕಪುರ:

ಪತ್ನಿಯ ಕಿರುಕುಳಕ್ಕೆ ಬೇಸತ್ತ ನವವಿವಾಹಿತ ಸಾಫ್ಟ್​ವೇರ್​ ಇಂಜಿನಿಯರ್​ ಹರಟಬೆಲೆ ಗ್ರಾಮದ ಹೊರ ವಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಂಗಳೂರಿನ ಜಯನಗರದ ಖಾಸಗಿ ಕಂಪನಿಯಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿದ್ದ ಈತ, ಆತ್ಮಹತ್ಯೆಗೂ ಮುನ್ನ ತನ್ನ ಮೊಬೈಲ್​ನಲ್ಲಿ ನನ್ನ ಸಾವಿಗೆ ಪತ್ನಿ ಇಕ್ರಾ ಫಾತಿಮಾ ಹಾಗೂ ಅವಳ ಕುಟುಂಬದವರೇ ಕಾರಣ ಎಂದು ಸ್ಕ್ರೀನ್​ನಲ್ಲಿ ಬರೆದಿರುವುದು ಸಿಕ್ಕಿದೆ.

ಒಂದು ತಿಂಗಳ ಹಿಂದಷ್ಟೇ ಮದುವೆ: ಮಳವಳ್ಳಿ ತಾಲೂಕು ಶಿಂಶಾಪುರದ ಅನ್ವರ್​ ಖಾನ್​ ಅವರ ಪುತ್ರ ರೋಷನ್​ ಜಮೀರ್​ ಹಾಗೂ ಬೆಂಗಳೂರು ಇಲಿಯಾಜ್​ ನಗರ ರಪರ್​ ಪುತ್ರಿ ಇಕ್ರಾ ಫಾತಿಮಾ ಮದುವೆ ಒಂದು ತಿಂಗಳ ಹಿಂದಷ್ಟೇ ನಡೆದಿತ್ತು.

ಆ.6ರಂದು ಸ್ನೇಹಿತನ ಮನೆಗೆ ಹೋಗಿದ್ದ ರೋಷನ್​ 7ರ ಮಧ್ಯಾಹ್ನ ಹರಟಬೆಲೆ ಗ್ರಾಮದ ಬಳಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನ್ಯಾಯ ದೊರಕಿಸಿಕೊಡಿ

ಇಷ್ಟೆಲ್ಲ ಬೆಳವಣಿಗೆ ನಂತರ ರೋಷನ್​ ವಿರುದ್ಧ ಬಸವಗುಡಿ ಠಾಣೆಯಲ್ಲಿ ಪತ್ನಿ ಇತ್ತೀಚೆಗೆ ದೂರು ನೀಡಿದ್ದಳು.
ಅಲ್ಲಿ ರಾಜಿಯಾಗದ ಕಾರಣ ವಿಚ್ಚೇದನ ಪಡೆಯಲು ನಿರ್ಧರಿಸಿದ್ದರು. ಠಾಣೆ ಹೊರಭಾಗದಲ್ಲಿ ಕುಟುಂಬದ ಸದಸ್ಯರು ರೋಷನ್​ಗೆ ಪ್ರಾಣ ಬೆದರಿಕೆ ಹಾಕಿ ದೌರ್ಜನ್ಯವೆಸಗಿದ್ದರು ಎಂದು ರೋಷನ್​ ಪಾಲಕರು ದೂರಿನಲ್ಲಿ ತಿಳಿಸಿದ್ದಾರೆ.
ಮಗನ ಸಾವಿಗೆ ಪತ್ನಿ, ಆಕೆಯ ತಂದೆ, ತಾಯಿ ಹಾಗೂ ಕುಟುಂಬದ ಸದಸ್ಯರು ನೇರ ಕಾರಣರಾಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕೆಂದು ಮೃತನ ತಂದೆ ಅನ್ವರ್​ ಪಾಷ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸಬ್​ಇನ್ಸ್​ಪೆಕ್ಟರ್​ ಆಕಾಶ್​ ತನಿಖೆ ಕೈಗೊಂಡಿದ್ದಾರೆ.
ಸ್ವಗ್ರಾಮ ಶಿಂಷಾಪುರದಲ್ಲಿ ಅಂತ್ಯಕ್ರಿಯೆ ನಡೆಯಿತು.

ರೀಲ್ಸ್​ ವ್ಯಾಮೋಹ

ರೋಷನ್​ ಜಮೀರ್​ ಮೂಲತ@ ಸಾಫ್ಟ್​ವೇರ್​ ಇಂಜಿನಿಯರ್​ ಆಗಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ವೈಲರ್​ ಆಗುವ ಮೂಲಕ ಎರಡು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್​ ಹೊಂದಿದ್ದ. ಈತನ ಸಾವಿನ ಸುದ್ದಿ ತಿಳಿದು ನಗರದ ಸರ್ಕಾರಿ ಆಸ್ಪತ್ರೆ ಶವಗಾರದ ಬಳಿ ನೂರಾರು ಅಭಿಮಾನಿಗಳು ಕಿಕ್ಕಿರಿದು ನಿಂತಿದ್ದರು. ಹಲವು ಅಭಿಮಾನಿಗಳು ಕಣ್ಣಿರಿಟ್ಟ ದೃಶ್ಯ ಕಂಡುಬಂತು.